ETV Bharat / city

Watch... ಲೀಸ್‌ಗೆ ಕೊಟ್ಟ ಭೂಮಿ ಮಾರಾಟಕ್ಕೆ ನಿರ್ಧಾರ: ಸಚಿವ ಆರ್‌.ಅಶೋಕ್ - ಆರ್‌.ಅಶೋಕ್‌

ಶೈಕ್ಷಣಿಕ ಸಂಸ್ಥೆ, ಕ್ಲಬ್, ಚಾರಿಟಬಲ್ ಟ್ರಸ್ಟ್‌ಗಳಿಗೆ ಲೀಸ್ ಆಧಾರದಲ್ಲಿ ನೀಡಲಾಗಿರುವ ಭೂಮಿಯನ್ನು ಸರ್ಕಾರದ ಗೈಡ್‌ಲೈನ್ ದರದಂತೆ ಅವರಿಗೇ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಆರ್.ಅಶೋಕ್‌ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

minister r.ashok talking in assembly session
ಸರ್ಕಾರದಿಂದ ಲೀಸ್‌ಗೆ ನೀಡಲಾಗಿರುವ ಭೂಮಿ ಮಾರಾಟಕ್ಕೆ ನಿರ್ಧಾರ; ಸಚಿವ ಆರ್‌.ಅಶೋಕ್
author img

By

Published : Sep 22, 2021, 1:35 PM IST

ಬೆಂಗಳೂರು: ಬ್ರಿಟಿಷರ ಕಾಲದಿಂದಲೂ ಸರ್ಕಾರ ಶೈಕ್ಷಣಿಕ ಸಂಸ್ಥೆ, ಕ್ಲಬ್, ಚಾರಿಟಬಲ್ ಟ್ರಸ್ಟ್‌ಗಳಿಗೆ ಲೀಸ್ ಆಧಾರದಲ್ಲಿ ನೀಡಲಾಗಿರುವ ಭೂಮಿಯನ್ನು ಸರ್ಕಾರದ ಗೈಡ್‌ಲೈನ್ ದರದಂತೆ ಅವರಿಗೇ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸಭೆ ಪರಿಷತ್‌ನಲ್ಲಿ ಸಚಿವ ಅಶೋಕ್‌ ಮಾತನಾಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬ್ರಿಟಿಷರ ಕಾಲದಲ್ಲಿ ಲೀಸ್ ಮೇಲೆ ಶೈಕ್ಷಣಿಕ ಸಂಸ್ಥೆ, ಚಾರಿಟಬಲ್ ಟ್ರಸ್ಟ್, ಕ್ಲಬ್‌ಗಳಿಗೆ ಕೊಡಲಾಗಿದ್ದ ಜಮೀನನ್ನು ಲೀಸ್ ಅವಧಿ ಮುಗಿದ ನಂತರ ವಾಪಸ್ ಪಡೆಯಲಾಗಿದೆ. ಆಯಾಯ ಕಾಲದಲ್ಲಿ ಆಯಾ ಸರ್ಕಾರಗಳು ಈ ಬಗ್ಗೆ ಕ್ರಮ ವಹಿಸಿವೆ. ಕೆಲವು ಕಡೆ ಲೀಸ್ ನವೀಕರಿಸಿವೆ ಅದು ಯಾಕೆ ಎಂದು ಗೊತ್ತಿಲ್ಲ.

ಆ ಭೂಮಿ ಮತ್ತೆ ಸರ್ಕಾರಕ್ಕೆ ವಾಪಸ್ ಸಿಗಲ್ಲ. ಹಾಗಾಗಿ ಯಾರ್ಯಾರು ಲೀಸ್‌ಗೆ ಪಡೆದಿದ್ದಾರೋ ಅವರು ಸರ್ಕಾರದ ಗೈಡ್‌ಲೈನ್ ದರ ನೀಡಬೇಕು. ಬೇರೆ ಉದ್ದೇಶಕ್ಕೆ ಬಳಸುವುದಾದರೆ ಸರ್ಕಾರದ ಗೈಡ್‌ಲೈನ್ ವ್ಯಾಲ್ಯೂ ಗಿಂತ ದುಪ್ಪಟ್ಟು ಹಣ ನೀಡಬೇಕು ಎಂದು ಕಾನೂನು ತರಲಾಗಿದೆ ಎಂದು ಹೇಳಿದರು.

ಒಮ್ಮೆ ಲೀಸ್‌ಗೆ ಕೊಟ್ಟರೆ ಸರ್ಕಾರದ್ದು ಎನ್ನುವ ಹೆಸರು ಮಾತ್ರ ಇರುತ್ತೆ ಬಿಟ್ಟರೆ ಅದು ಸರ್ಕಾರಕ್ಕೆ ವಾಪಸ್ ಬರಲ್ಲ. ಹಾಗಾಗಿ ಕಾಯ್ದೆ ಮಾಡಲಾಗಿದೆ. ಉದ್ದೇಶಿತ ಕೆಲಸಕ್ಕೆ ಮಾತ್ರ ಲೀಸ್ ಜಮೀನು ಬಳಸಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎತ್ತಿನಹೊಳೆ ಪರಿಹಾರ:

ಎತ್ತಿನ ಹೊಳೆ ಯೋಜನೆ ಅಡಿ ಭೂಸ್ವಾಧೀನ ಮಾಡಿಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯ ನಡೆಸಲಾಗಿದ್ದು, ಕೆಲ ಕಾರಣದಿಂದ ಕೆಲವರಿಗೆ ಇನ್ನು ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋಪಾಲಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಜಿಲ್ಲೆ ಎತ್ತಿನ ಹೊಳೆ ಯೋಜನೆ ಅಡಿ 93 ಗ್ರಾಮಗಳ 2,558 ಎಕರೆ ಜಮೀನಿನ ಸ್ವಾಧೀನಪಡಿಸಲು ನಿರ್ಧರಿಸಿದ್ದು, 2,381 ಎಕರೆಗೆ ಅನುಮೋದನೆ ನೀಡಲಾಗಿದೆ. 755.33 ಎಕರೆ ಜಮೀನಿಗೆ 211,56,38,498 ರೂ.ಗಳ ಪರಿಹಾರಕ್ಕೆ ಅನುಮೋದನೆ ನೀಡಲಾಗಿದೆ. ಈವರೆಗೆ 150 ಕುಟುಂಬಕ್ಕೆ 47.43 ಕೋಟಿ ಪರಿಹಾರ ಪಾವತಿಸಲಾಗಿದೆ.

629 ಭೂಮಾಲೀಕರಿಗೆ ಪರಿಹಾರ ಪಾವತಿಸಲು ಬಾಕಿ ಇದೆ. ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿದ್ದು ದಾಖಲೆ ಕೊಡುತ್ತಿದ್ದಂತೆ ಹಣ ಪಾವತಿ ಮಾಡಲಾಗುತ್ತದೆ. ಉಳಿದ 314 ಭೂ ಮಾಲೀಕರಲ್ಲಿ ಕೆಲವು ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವು ಖಾತೆದಾರರು ಪೌತಿಯಾಗಿದ್ದು, ಖಾತೆ ಬದಲಾವಣೆ ಮಾಡಬೇಕಾಗಿದೆ. ಕೆಲವು ಮಾಲೀಕರು ದಾಖಲೆ ನೀಡಿಲ್ಲ ಹಾಗಾಗಿ ಪರಿಹಾರ ನೀಡಿಲ್ಲ ಎಂದು ಮಾಹಿತಿ ನೀಡಿದರು.

ಮಳೆಹಾನಿ ಪರಿಹಾರ:

ಧಾರವಾಡ ಜಿಲ್ಲೆಯಲ್ಲಿ ಸಂಭವಿಸಿದ ಮಳೆಹಾನಿಗೆ ಕೇಂದ್ರ ಮತ್ತು ರಾಜ್ಯ ವಿಪತ್ತು ಕಾಯ್ದೆ ಅಡಿ ಸೂಕ್ತ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಧಾರವಾಡ ಜಿಲ್ಲೆಯಲ್ಲಿ 1,340 ಮನೆ ಹಾನಿ, 1 ಜೀವಹಾನಿ, ಗದಗದಲ್ಲಿ 450 ಮನೆ ಹಾನಿ, 3 ಜೀವಹಾನಿ ಹಾವೇರಿ 2,747 ಮನೆಹಾನಿ, 1 ಜೀವಹಾನಿ ಈಗಾಗಲೇ ಸರ್ಕಾರ ವಿಪತ್ತು ಕಾಯ್ದೆ ಅಡಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಹಿಂದಿನ ಯಡಿಯೂರಪ್ಪ ಸರ್ಕಾರ ಮನೆ ಕಟ್ಟಲು 5 ಲಕ್ಷ ಹಣವನ್ನು, ಜೀವ ಹಾನಿಗೂ 5 ಲಕ್ಷ ಪರಿಹಾರ ಘೋಷಿಸಿದೆ. 80 ಲಕ್ಷ ರೂ. ಮಾನವ ಜೀವಹಾನಿಗೆ, ಪ್ರಾಣಿಗಳ ಪ್ರಾಣಹಾನಿಗೆ 51.79 ಲಕ್ಷ ರೂ. ಪರಿಹಾರ, 81.76 ಲಕ್ಷ ರೂ. ನೀರು ನುಗ್ಗಿ ಹಾನಿಗೆ, 21 ಕೋಟಿ ರೂ. ಪ್ರವಾಹ ತುರ್ತಿಗೆ, 38 ಕೋಟಿ ರೂ. ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಗೆ ಕೊಡಲಾಗಿದೆ. ಮನೆ ಪರಿಹಾರಕ್ಕೆ 11.07 ಕೋಟಿ ರೂ ಸೇರಿ ಒಟ್ಟು 154.65 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಯಾರದ್ದಾದರೂ ಹೆಸರು ಬಿಟ್ಟಿದ್ದರೆ ಡಿಸಿಗೆ ತಿಳಿಸಿ ಹೆಸರು ಸೇರಿಸಲಾಗುತ್ತದೆ ಎಂದರು.

ಶಿಥಿಲ ಮನೆ ಕೆಡವಿ ಅಂದರೆ ಕೊಟ್ಟ ಮೊದಲ ಕಂತಿನ ಹಣದಲ್ಲಿ ರಿಪೇರಿ ಮಾಡಿಸಿ ಕೊಂಡಿದ್ದಾರೆ. ಹಾಗಾಗಿ ಬಾಕಿ ಉಳಿದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ, ಬೇರೆ ಲೋಪಗಳಿದ್ದಲ್ಲಿ ಸರಿಪಡಿಸಲಾಗುತ್ತದೆ ಎಂದು ಸ್ಪಷನೆ ನೀಡಿದರು.

ಜೆಡಿಎಸ್ ಧರಣಿ ವಾಪಸ್:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ಪರಿಹಾರ ನೀಡುವ ಸಂಬಂಧ ಸದನ ಮುಗಿದ ನಂತರ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸರ್ಕಾರದ ಭರವಸೆಗೆ ಸಹಮತ ವ್ಯಕ್ತಪಡಿಸಿದ ಜೆಡಿಎಸ್ ಸದನದ ಬಾವಿಯಲ್ಲಿ ನಿನ್ನೆಯಿಂದ ನಡೆಸುತ್ತಿದ್ದ ಸರಣಿಯನ್ನು ವಾಪಸ್ ಪಡೆಯಿತು.

ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು. ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಮೈಸೂರು ಪ್ರಾಧಿಕಾರದಲ್ಲಿ ರೈತರ ಅನುಮತಿ ಇಲ್ಲದೇ ಬಳಸಿಕೊಂಡ ಜಮೀನಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ, ಕೊಡಿಸಬೇಕು, ಮೈಸೂರಿಗೆ ಬಂದು ಸಚಿವರು ಸಮಸ್ಯೆ ಪರಿಹರಿಸಬೇಕು, ಸಚಿವರು ಸ್ಪಷ್ಟವಾದ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಸಜ್, ಸದನ ಮುಗಿದ ಕೂಡಲೇ ಪ್ರಾಧಿಕಾರದ ಸಭೆ ಕರೆದು ಕಾನೂನಿನ ಅನುಸಾರ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ವಹಿಸಲು ಬದ್ದರಿದ್ದೇವೆ ಎಂದು ಭರವಸೆ ನೀಡಿದರು. ಸರ್ಕಾರದ ಉತ್ತರ ಸ್ವಾಗತಿಸಿದ ಜೆಡಿಎಸ್ ಧರಣಿ ವಾಪಸ್ ಪಡೆದು ಕಲಾಪದಲ್ಲಿ ಭಾಗಿ ಆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.