ETV Bharat / city

ಬೆಂಗಳೂರಲ್ಲಿ ನಿಗೂಢ ಶಬ್ದವು ಭೂಕಂಪದ ಮುನ್ಸೂಚನೆಯಲ್ಲ, ಭಯಬೇಡ : ಸಚಿವ ಆರ್. ಅಶೋಕ್ - ಬೆಂಗಳೂರು ಭೂ ಕಂಪನ

ಇದು ಭೂಕಂಪನದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ. ನಾನು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ..

minister r Ashok
ಬೆಂಗಳೂರಿನ ನಿಗೂಢ ಶಬ್ದದ ಕುರಿತು ಸಚಿವ ಅಶೋಕ್ ಪ್ರತಿಕ್ರಿಯೆ
author img

By

Published : Nov 26, 2021, 5:24 PM IST

Updated : Nov 26, 2021, 6:11 PM IST

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಳಿ ಬಂದಿರುವ ದೊಡ್ಡ ಪ್ರಮಾಣದ ಶಬ್ದದ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನ ನಿಗೂಢ ಶಬ್ದದ ಕುರಿತು ಸಚಿವ ಆರ್‌ ಅಶೋಕ್ ಪ್ರತಿಕ್ರಿಯೆ ನೀಡಿರುವುದು..

ಇಂದು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಆರ್.ಆರ್ ನಗರ ಮುಂತಾದ ಕಡೆಗಳಲ್ಲಿ ಶಬ್ದ ಹಾಗೂ ಸಣ್ಣ ಪ್ರಮಾಣದ ಭೂ ಕಂಪನ ಕಂಡು ಬಂದಿದೆ. ಸಚಿವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ತಜ್ಞರಿಂದ ವರದಿ ಪಡೆದಿದ್ದಾರೆ.

  • ಇಂದು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಹಾಗೂ ಸಣ್ಣ ಪ್ರಮಾಣದ ಕಂಪನ ಕಂಡುಬಂದಿದೆ.

    ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ತಜ್ಞರಿಂದ ವರದಿ ಪಡೆದಿದ್ದು, ಇದು ಭೂಕಂಪದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ. ನಾನು ಸಹ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.ಯಾರೂ ಭಯಪಡಬೇಡಿ.

    — R. Ashoka (ಆರ್. ಅಶೋಕ) (@RAshokaBJP) November 26, 2021 " class="align-text-top noRightClick twitterSection" data=" ">

ಇದು ಭೂಕಂಪನದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ. ನಾನು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಗೂಢ ಶಬ್ದ: ಭೂಮಿ ಕಂಪಿಸಿದ ಅನುಭವದಿಂದ ಆತಂಕಕ್ಕೊಳಗಾದ ಜನರು

ಇಂದು 11.50 ರಿಂದ 12.15ರ ಮಧ್ಯದಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರ ಕೂಡಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಶಬ್ದದ ಕಾರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

Last Updated : Nov 26, 2021, 6:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.