ETV Bharat / city

ಶಾಲೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಕ್ರಮ: ಸಚಿವ ಆರ್. ಅಶೋಕ್ - Minister R Ashok news

ಶಾಲೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ 9 -12ನೇ ತರಗತಿಗಳನ್ನು ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು, ನಂತರ ಹಂತ ಹಂತವಾಗಿ 7 ಮತ್ತು 8 ನೇ ತರಗತಿಗಳನ್ನು ತೆರೆಯಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದರು.

Minister R Ashok
ಆರ್. ಅಶೋಕ್
author img

By

Published : Aug 21, 2021, 1:59 PM IST

Updated : Aug 21, 2021, 2:32 PM IST

ಬೆಂಗಳೂರು: ಆಗಸ್ಟ್ 23 ರಿಂದ 9-12ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯಲು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ತರಗತಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕೆಂದು ನಿರ್ಧಾರವಾಗಿದೆ. ಕೋವಿಡ್ ವೈರಸ್​ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಕಾರ್ಪೊರೇಷನ್, ಸರ್ಕಾರಿ‌ ಶಾಲೆ ತೆರೆಯಬೇಕು. ಆದರೆ, ತರಗತಿಯಲ್ಲಿ ಹೆಚ್ಚು ಮಕ್ಕಳಿರಬಾರದು ಎಂಬ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ 9-12ನೇ ತರಗತಿಗಳನ್ನು ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು, ನಂತರ ಹಂತ ಹಂತವಾಗಿ 7 ಮತ್ತು 8 ನೇ ತರಗತಿಗಳನ್ನು ಕೂಡ ತೆರೆಯಲಾಗುವುದು ಎಂದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್. ಅಶೋಕ್

ಮಾಸ್ಕ್ ವಿಚಾರದಲ್ಲಿ ಮಾರ್ಷಲ್​ಗಳ ಕಿರಿಕಿರಿ ಹಾಗೂ ರಾಜಕಾರಣಿಗಳು ಮಾಸ್ಕ್ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಎಲ್ಲರೂ ಮಾಸ್ಕ್​ ಹಾಕುವುದು ಕಡ್ಡಾಯ. ಕೋವಿಡ್​ ನಿಯಮ ಉಲ್ಲಂಘನೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ದೆಹಲಿಯಲ್ಲಿ‌ 5 ಸಾವಿರ ರೂ. ದಂಡ ಹಾಕಲಾಗುತ್ತದೆ. ನಮ್ಮಲ್ಲಿಯೇ ಮಾಸ್ಕ್ ದಂಡದ ದರ ಕಡಿಮೆ ಇದೆ. ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

Last Updated : Aug 21, 2021, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.