ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ಅವರನ್ನು ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸಚಿವ ನಾರಾಯಣ ಗೌಡ, ಇನ್ನೂ ಹೆಚ್ಚಿನ ಸ್ಥಾನದ ಏರುವಂತಾಗಲಿ. ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸದಾ ನಿಮಗೆ ಲಭಿಸಲಿ ಎಂದರು.
ಉಪಚುನಾವಣೆಯಲ್ಲಿ ವೇಳೆ ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡ ಗೆಲುವು ಸಾಧಿಸುವಲ್ಲಿ ಬಿ.ವೈ.ವಿಜಯೇಂದ್ರ ಪ್ರಮುಖ ಪಾತ್ರ ವಹಿಸಿದ್ದರು. ಚುನಾವಣೆ ವೇಳೆ ವಿಜಯೇಂದ್ರ ಸಕ್ರಿಯರಾಗಿ ಓಡಾಡಿ ಪ್ರಚಾರ ನಡೆಸಿದ್ದರು.