ಬೆಂಗಳೂರು : ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಮತ್ತು ಸಿದ್ದರಾಮಯ್ಯ ಪದೇಪದೆ ಈಶ್ವರಪ್ಪ ಹೆಸರು ಹೇಳ್ತಿರೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ.
ಸಿಂಹ ಭಯ ಪಡುತ್ತಾ? ಈಶ್ವರಪ್ಪ, ಈಶ್ವರಪ್ಪ, ಈಶ್ವರಪ್ಪ ಅಂತಾ ಕಾಂಗ್ರೆಸ್ನವರು ಪದೇಪದೆ ನನ್ನ ಹೆಸರು ಹೇಳಿ ಜಪ ಮಾಡ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ಈಶ್ವರನ ಹೆಸರು ಹೇಳಿದ್ದಾರೆ. ಅದರಿಂದಾದರೂ ಅವರಿಗೆ ಸದ್ಬುದ್ಧಿ ನೀಡಲಿ ಎಂದರು.
ರಾಜ್ಯಪಾಲರು ಬುಲಾವ್ ಕೊಟ್ಟಿಲ್ಲ..
ರಾಜ್ಯಪಾಲರು ನನಗೆ ಯಾವುದೇ ಬುಲಾವ್ ಕೊಟ್ಟಿಲ್ಲ. ಕುವೆಂಪು ವಿವಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ರಾಜಭವನಕ್ಕೆ ಹೋಗ್ತಿದ್ದೇನೆ. ಅದನ್ನ ಹೊರತುಪಡಿಸಿ ಅವರು ಬುಲಾವ್ ನೀಡಿಲ್ಲ. ಮಾಧ್ಯಮಗಳಲ್ಲಿ ಈಶ್ವರಪ್ಪಗೆ ರಾಜ್ಯಪಾಲರಿಂದ ಬುಲಾವ್ ಅಂತಾ ಬರುತ್ತಿದೆ. ಅದು ತಪ್ಪಾಗಿ ಹೋಗುತ್ತಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ನಡ್ಡಾ ನನ್ನ ಬಳಿ ರಾಷ್ಟ್ರ ಧ್ವಜದ ಬಗ್ಗೆ ಪ್ರಸ್ತಾಪಿಸಿದ್ದಾರೆ..
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಷ್ಟ್ರ ಧ್ವಜದ ಬಗ್ಗೆ ವಿಷಯ ಪ್ರಸ್ತಾಪಿಸಿರುವುದು ನಿಜ. ನಾನು ಅದಕ್ಕೆ ಉತ್ತರ ಕೊಡುವುದಿಲ್ಲ. ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಈ ವಿಷಯವಾಗಿ ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಬೇಜವಾಬ್ದಾರಿಯುತ ಹೇಳಿಕೆಗಳನ್ನು ಬಿಜೆಪಿ ಸಹಿಸಲ್ಲ: ಈಶ್ವರಪ್ಪ 'ಕೇಸರಿ ಧ್ವಜ' ಸ್ಟೇಟ್ಮೆಂಟ್ಗೆ ನಡ್ಡಾ ಗರಂ
ರಾಷ್ಟ್ರಧ್ವಜದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಡಿಕೆಶಿ ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ, ಭಗವಾಧ್ವಜ ಏರಿಸಿದ್ದರು ಅಂತಾ ಹೇಳಿದ್ರು. ಹಾರಿಸ್ತೇನೆ ಅಂತಾ ಹೇಳಿದ್ದೀನಾ.?. ಮುಂದೆ ಹಾರಿಸಬಹುದು ಅಂತಾ ಹೇಳಿದ್ದೇನೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ತಕ್ಷಣ ರಾಷ್ಟ್ರ ದ್ರೋಹಿ ಅಂತಾ ಅಂದೂ ಹೇಳಿದೆ, ಇಂದೂ ಹೇಳಿದ್ದೇನೆ ಎಂದು ತಿಳಿಸಿದರು.