ETV Bharat / city

'ಪಾದಯಾತ್ರೆ ಅಲ್ಲದಿದ್ರೆ ಮ್ಯಾರಥಾನ್ ಮಾಡಲಿ, ಆದ್ರೆ ಸದ್ಯ ಅದನ್ನು ಮುಂದೂಡಲಿ' - ಕೋವಿಡ್​ ನಿಯಮ ಬಗ್ಗೆ ಸುಧಾಕರ್ ಪ್ರತಿಕ್ರಿಯೆ​

'ಅವರು ರಾಜಕೀಯವಾಗಿ ಅಪಾರ ಜವಾಬ್ದಾರಿ ಹೊಂದಿದವರು. ಸಿಎಂ ಆಗಿ ಕೆಲಸ ಮಾಡಿದವರು. ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ. ಪಾದಯಾತ್ರೆ ಅಲ್ಲದಿದ್ರೆ ಮ್ಯಾರಥಾನ್ ಮಾಡಲಿ. ಸದ್ಯ ಮೂರು ತಿಂಗಳು ಮುಂದೂಡಿ, ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮಾಡಲಿ' ಎಂದು ಮೇಕೆದಾಟು ಪಾದಯಾತ್ರೆ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

minister sudhakar on mekedatu padayatra
ಮೇಕೆದಾಟು ಪಾದಯಾತ್ರೆ ಬಗ್ಗೆ ಸುಧಾಕರ್​ ಹೇಳಿಕೆ
author img

By

Published : Jan 7, 2022, 7:39 PM IST

ಬೆಂಗಳೂರು: ಪಾದಯಾತ್ರೆ ಅಲ್ಲದಿದ್ದರೆ ಮ್ಯಾರಥಾನ್ ಮಾಡಲಿ, ಆದರೆ ಪಾದಯಾತ್ರೆಯನ್ನು ಮೂರು ತಿಂಗಳು ಮುಂದೂಡಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟಾಂಗ್ ಕೊಟ್ಟರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ರಾಜಕೀಯವಾಗಿ ಅಪಾರ ಜವಾಬ್ದಾರಿ ಹೊಂದಿದವರು. ಸಿಎಂ ಆಗಿ ಕೆಲಸ ಮಾಡಿದವರು. ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ. ಪಾದಯಾತ್ರೆ ಅಲ್ಲದಿದ್ರೆ ಮ್ಯಾರಥಾನ್ ಮಾಡಲಿ. ಸದ್ಯ ಮೂರು ತಿಂಗಳು ಮುಂದೂಡಿ, ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮಾಡಲಿ. ಆದ್ರೆ ಟೈಮಿಂಗ್ ನೋಡಿಕೊಂಡು ಮಾಡಲಿ ಎಂದು ಒತ್ತಾಯಿಸಿದರು.

ಕೋವಿಡ್​ ಉಲ್ಭಣಗೊಂಡಿದೆ. ಬಿಬಿಎಂಪಿ ಚುನಾವಣೆ ಬಂತು ಅಂತ ಹೀಗೆ ಮಾಡ್ತಿದ್ದಾರಾ ಹೇಗೆ?, ಜನರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮಾಡಲಿ ಎಂದು ಸಲಹೆ ನೀಡಿದರು. ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಆರಂಭವಾಗುತ್ತೆ. ಆದ್ರೆ ಸಿಎಂ ಕೆಲ ಜಿಲ್ಲಾಡಳಿತಗಳಿಗೆ ಪರಿಸ್ಥಿತಿ ನೋಡಿಕೊಂಡು ನಿರ್ಬಂಧ ಹೇರಲು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆಯವರೆಗೂ ವೀಕೆಂಡ್ ಕರ್ಫ್ಯೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

'ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯವೇ ಅಂತಿಮ'

ವೀಕೆಂಡ್ ಕರ್ಫ್ಯೂಗೆ ಕೆಲ ಸಚಿವರ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಅಂತಿಮವಾಗಿ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯವೇ ಅಂತಿಮ ಎಂದು ತಿಳಿಸಿದರು.

ಸಭೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ರಾಜ್ಯ ಮಟ್ಟದಲ್ಲಿ ಅನೇಕ ಅಧಿಕಾರಿಗಳಿಗೆ ನಾಯಕತ್ವ ನೀಡಲಾಗಿದೆ. ಅಷ್ಟೂ ನಾಯಕರ ಸಮನ್ವಯ ಸಭೆ ಇದಾಗಿದೆ. ಅಧಿಕಾರಿಗಳು ಇತರೆ ಅಧಿಕಾರಿಗಳ ಜೊತೆ ಸಂಪರ್ಕ ಇರಬೇಕು, ಆಗ ಯಶಸ್ವಿಯಾಗಲು ಅನುಕೂಲವಾಗಲಿದೆ. ಈ ಬಾರಿ ಕೋವಿಡ್​​ ಅನ್ನು ಶೀಘ್ರವಾಗಿ ನಿಯಂತ್ರಣ ಮಾಡಲು ಸಿಎಂ ನಮಗೆ ಸೂಚಿಸಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಭೆ ಮುಖ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೆಲ ವಿಷಯ ಪ್ರಸ್ತಾಪ ಮಾಡಿದೆ. ಒಮಿಕ್ರಾನ್ ಅನ್ನೋ ರೂಪಾಂತರಿ ಅತ್ಯಂತ ವೇಗವಾಗಿ ಹರಡುತ್ತಿದೆ. ಡೆಲ್ಟಾದ ತೀವ್ರತೆ ಹೆಚ್ಚು. ಆದ್ರೆ ಒಮಿಕ್ರಾನ್ ತೀವ್ರತೆ ಕಡಿಮೆ. ಬಹಳ ಮುಖ್ಯವಾಗಿ ಜನರು ಲಸಿಕೆಯ ಎರಡು ಡೋಸ್ ಪಡೆದಿದ್ದಾರೆ. ವಿಶ್ವದಲ್ಲಿ ಒಮಿಕ್ರಾನ್ ಬಂದರೂ ತೀವ್ರತರವಾಗಿ ಉಲ್ಭಣ ಆಗಲ್ಲ ಎಂದು ತಿಳಿಸಿದರು.

ಲಸಿಕೆ ಕೆಲಸ ಮಾಡುತ್ತಿದೆ, ಹಾಗಾಗಿ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆಯಬೇಕು. 10ನೇ ತಾರೀಖಿನಿಂದ 60 ವರ್ಷ ಮೇಲ್ಪಟ್ಟವರು, ಫ್ರಂಟ್‌ಲೈನ್ ವರ್ಕರ್ಸ್‌ಗೆ ಬೂಸ್ಟರ್​ ಡೋಸ್​ ಕೊಡಲಾಗುವುದು. ಮಕ್ಕಳಿಗೆ, 15-18 ವರ್ಷದವರಿಗೂ ಶೀಘ್ರವೇ ಕೊಡಲಾಗುವುದು. ಜುಲೈ 20ಕ್ಕೆ 70% ಡೋಸ್ ಕೊಟ್ಟು ಪೂರ್ಣಗೊಳ್ಳಬೇಕು. ಕರ್ನಾಟಕದಲ್ಲಿ ಮೊದಲ ಡೋಸ್ 99%, ಎರಡನೇ ಡೋಸ್ 80%ರಷ್ಟು ಕೊಡಲಾಗಿದೆ.

109 ದೇಶಗಳಲ್ಲಿ ಕಳೆದ ಜುಲೈ ವೇಳೆಗೆ 70% ಲಸಿಕೆ ಕೂಡ ಕೊಡಲು ಸಾಧ್ಯವಾಗಿಲ್ಲ. 36 ದೇಶದಲ್ಲಿ 10% ಕೂಡ ಕೊಡಲಾಗಿಲ್ಲ. ವಿಶ್ವದಾದ್ಯಂತ ಹೆಚ್ಚು ಬಾಧಿತ ರೋಗಿಗಳು ICU ನಲ್ಲಿದ್ದು 80% ಜನ ಲಸಿಕೆ ತೆಗೆದುಕೊಳ್ಳದವರಾಗಿದ್ದಾರೆ. ಒಟ್ಟಾರೆ ವಿಶ್ವದಲ್ಲಿ ಡಿಸೆಂಬರ್ 27ರಿಂದ ಜನವರಿ 2ರ ವೇಳೆಗೆ ಕೋವಿಡ್​ 79% ಹೆಚ್ಚಳವಾಗಿದೆ. ಒಟ್ಟಾರೆ ವಿಶ್ವದಲ್ಲಿ 28.9 ಕೋಟಿ ಜನರಿಗೆ ಸೋಂಕು ತಗುಲಿದೆ. ಹೆಚ್ಚು ಸೋಂಕು ಅಮೆರಿಕಾದಲ್ಲಿ ಕಾಣಿಸಿಕೊಂಡಿದ್ದು, 100% ಹೆಚ್ಚಿದೆ. ಯಾವ ದೇಶದಲ್ಲಿ ಲಸಿಕೆ ಇದೆಯೋ ಆ ದೇಶಗಳು ಬಡತನ ಇರುವ ದೇಶಗಳಿಗೆ ಲಸಿಕೆ ಹಂಚುವಂತೆ WHO ಮನವಿ ಮಾಡಿದೆ. ಲಸಿಕೆ ಹಂಚಿಕೊಂಡಾಗ ಸೋಂಕು ಕಡಿಮೆಯಾಗಲಿದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್ ದಿಢೀರ್ ಏರಿಕೆ : ಇಂದು 8 ಸಾವಿರ ಕೊರೊನಾ, 107 ಒಮಿಕ್ರಾನ್ ಕೇಸ್ ಪತ್ತೆ

ಬಿಬಿಎಂಪಿ ವಲಯದಲ್ಲಿ 80ರಷ್ಟು ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಪ್ರತಿ 8 ವಲಯಗಳಿಗೆ ಕಮಾಂಡ್ ಸೆಂಟರ್ ಮಾಡಲಾಗುವುದು. ಯಾವುದೇ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಾಗ ಅವರಿಗೆ ಕರೆ ಮಾಡಲಾಗುವುದು. ಮುಂದಿನ ಏಳು ದಿನ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಟೆಲಿ ಟ್ರಯಾಸಿಕ್, ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 10 ಸಾವಿರ ಗೃಹ ವೈದ್ಯರ ನಿಯೋಜನೆ ಮಾಡಲಾಗಿದೆ. ಪಾಸಿಟಿವ್ ವರದಿ ಬಂದಾಗ, ಆಸ್ಪತ್ರೆಗೆ ಆತಂಕದಿಂದ ದಾಖಲಾಗೋದು ಬೇಡ. ಯಾರು ಆಸ್ಪತ್ರೆಗೆ ಸೇರಬೇಕು ಅಂತ ಡಾ.ರವಿ ಅವರ ತಜ್ಞರ ಸಮಿತಿ ತಿಳಿಸಲಿದೆ. ಗೈಡ್‌ಲೈನ್ಸ್, ಅಡ್ಮೀಷನ್ ಪಾಲಿಸಿ ಪ್ರಕಾರ ಇದ್ರೆ ಮಾತ್ರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು. ಎಲ್ಲ ಪ್ರೈಮರಿ ಕಾಂಟ್ಯಾಕ್ಟ್ ಇರೋರಿಗೆ RT-PCR ಟೆಸ್ಟ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಿಗೆ ಟೆಸ್ಟ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.