ETV Bharat / city

ಸಿದ್ದರಾಮಯ್ಯ ಅದೇನು ಬಿಚ್ಚಿಡುತ್ತಾರೆ ಬಿಚ್ಚಿಡಲಿ, ನನ್ನದೇನು ಅಭ್ಯಂತರ ಇಲ್ಲ: ಸಚಿವ ಡಾ.ಕೆ.ಸುಧಾಕರ್

author img

By

Published : Aug 13, 2022, 7:27 AM IST

ಸಿದ್ದರಾಮಯ್ಯ ಕತೆ ನನಗೂ ಗೊತ್ತಿದೆ. ನನ್ನ ಕತೆ ಅವರಿಗೂ ಗೊತ್ತಿದೆ. ನನಗೆ ಅವರ ಮೇಲೆ ವಿಶ್ವಾಸ ಇದೆ. ಪ್ರೀತಿ ಇದೆ. ಆದರೆ ರಾಜಕಾರಣ ಬೇರೆ ಅಲ್ವಾ?. ನಾನು ಬಿಜೆಪಿಯಲ್ಲಿದ್ದೇನೆ ಅವರು ಕಾಂಗ್ರೆಸ್​ನಲ್ಲಿ ಇದ್ದಾರೆ ಅಷ್ಟೇ. ವೈಯಕ್ತಿಕವಾಗಿ ನನಗೆ ಅವರ ಮೇಲೆ ಯಾವುದೇ ಅಲೋಚನೆಗಳು ಇಲ್ಲ ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ.

sudhakar
ಸುಧಾಕರ್

ಬೆಂಗಳೂರು: ಸಿದ್ದರಾಮಯ್ಯ ಅವರು ಅದೇನು ಬಿಚ್ಚುಡುತ್ತಾರೆ ಬಿಚ್ಚಿಡಲಿ, ನನ್ನದೇನು ಅಭ್ಯಂತರ ಇಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಧಾಕರ್ ವಿರುದ್ಧ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾನು ಏನೂ ಆರೋಪ ಮಾಡಿಲ್ಲ. ಅದೇನು ಹಳೆ ಕತೆ ಇದೆ ಅದನ್ನು ಬಿಚ್ಚಿಡಲಿ. ನನ್ನದೇನು ಅಭ್ಯಂತರ ಇಲ್ಲ. ಅವರು ಹಿಂದೆ ಗುರುಗಳಾಗಿದ್ದವರು‌. ಅತಿಯಾದ ಪ್ರೀತಿಯಾಗಿ ಆ ತರ ಮಾತನಾಡಿರಬಹುದು. ಬೇರೇನು ಮಾತನಾಡಿಲ್ಲ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್

ಸುಧಾಕರ್​ಗೆ ಟಿಕೆಟ್ ಕೊಟ್ಟವನು ನಾನು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಆತ್ಮಸಾಕ್ಷಿಯಾಗಿ ಹೇಳಲಿ, ಯಾರು ನನಗೆ ಟಿಕೆಟ್ ಕೊಡಿಸಿದ್ದು ಅಂತ?. ನಿಜವಾಗಲೂ ನನಗೆ ಟಿಕೆಟ್ ಕೊಡಿಸಿದ್ದು ಜಿ.ಪರಮೇಶ್ವರ್ ಹಾಗೂ ಎಸ್.ಎಂ.ಕೃಷ್ಣ. ಸುಮ್ಮನೆ ಕ್ಲೇಮ್ ಮಾಡಬಾರದು. ನಾನು ಕಾಂಗ್ರೆಸ್​ನಲ್ಲಿದ್ದಾಗ ಅವರು ಸಿಎಂ ಆಗಿದ್ದರು. ಆಗ ನನಗೆ ಸಹಕಾರ ಕೊಟ್ಟಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಟಿಕೆಟ್ ಕೊಟ್ಟಿರೋದ್ರಲ್ಲಿ ಅವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅವರ ಕತೆ ನನಗೂ ಗೊತ್ತಿದೆ. ನನ್ನ ಕತೆ ಅವರಿಗೂ ಗೊತ್ತಿದೆ. ಬಿಡಿ. ನನಗೂ ಅವರ ಮೇಲೆ ವಿಶ್ವಾಸ ಇದೆ. ಪ್ರೀತಿ ಇದೆ. ಆದರೆ ರಾಜಕಾರಣ ಬೇರೆ ಅಲ್ವಾ?. ನಾನು ಬಿಜೆಪಿಯಲ್ಲಿದ್ದೇನೆ ಅವರು ಕಾಂಗ್ರೆಸ್​ನಲ್ಲಿ ಇದ್ದಾರೆ ಅಷ್ಟೇ. ವೈಯಕ್ತಿಕವಾಗಿ ನನಗೆ ಅವರ ಮೇಲೆ ಯಾವುದೇ ಅಲೋಚನೆಗಳು ಇಲ್ಲ ಎಂದು ತಿಳಿಸಿದರು.

ಆ.28ಕ್ಕೆ ಜನೋತ್ಸವ ಮಾಡುತ್ತೇವೆ: ಮೂರು ವರ್ಷಗಳ ಸಾಧನೆ ಬಿಂಬಿಸುವ ಜನೋತ್ಸವ ಕಾರ್ಯಕ್ರಮವನ್ನು ಆಗಸ್ಟ್ 28ಕ್ಕೆ ಮಾಡುತ್ತೇವೆ. ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ತುಮಕೂರು ಜಿಲ್ಲೆಯ ಜನ ಸೇರಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಈಗಷ್ಟೇ ಸಿಎಂ ಅವರು ಮಾಜಿ ಸಿಎಂ ಯಡಿಯೂರಪ್ಪ ಜತೆ ಚರ್ಚೆ ಮಾಡಿದ್ದಾರೆ. ಕಾರ್ಯಕ್ರಮದ ಹೆಸರು ಜನೋತ್ಸವ ಇರುತ್ತೋ ಬದಲಾವಣೆ ಆಗುತ್ತೋ ನೋಡಬೇಕು. ಮೂರು ನಾಲ್ಕು ಜಿಲ್ಲೆಗಳಿಗೆ ಸಿಮೀತವಾಗಿ ಕಾರ್ಯಕ್ರಮ ಇದಾಗಿದೆ ಎಂದರು.

ಇಡೀ ರಾಜ್ಯದಲ್ಲಿ ಐದಾರು ಕಡೆ ಇಂಥ ಸಮಾವೇಶಗಳನ್ನು ಮಾಡಿ, ಅಂತಿಮವಾಗಿ ರಾಜ್ಯದಲ್ಲಿ ದೊಡ್ಡ ಸಮಾವೇಶ ಮಾಡುವ ಚಿಂತನೆ ಇದೆ. ಅದರ ರೂಪುರೇಷೆಯನ್ನು ರಾಜ್ಯಾಧ್ಯಕ್ಷರು, ಹಿರಿಯ ಮುಖಂಡರು ಮಾಡಲಿದ್ದಾರೆ. ಜನೋತ್ಸವ ಅತ್ಯಂತ ಪ್ರಜಾಪ್ರಭುತ್ವದ ರೀತಿಯಲ್ಲಿ ಜನರಿಗೆ ಅನೇಕ ಕಾರ್ಯಕ್ರಮ ಕೊಟ್ಟಿರುವ ಹಿನ್ನೆಲೆಯಲ್ಲಿ ಇಂದು ಉತ್ಸವ ಜನೋತ್ಸವ ಆಗಬೇಕು. ಆ ನಿಟ್ಟಿನಲ್ಲಿ ಜನೋತ್ಸವ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.

ಸಿದ್ದರಾಮೋತ್ಸವ ಬಳಿಕ ನಾವು ಜನೋತ್ಸವ ನಿರ್ಧಾರ ಮಾಡಿಲ್ಲ.‌ ಮುಂಚೆಯೇ ನಿರ್ಧಾರ ಮಾಡಿದ್ದೆವು. ಆದರೆ, ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತ ಕೊಲೆಯಾದ ಕಾರಣ ಅದನ್ನ ರದ್ದು ಪಡಿಸಿದ್ದೆವು. ಆದರೆ, ಈಗ ಒಂದೂವರೆ ತಿಂಗಳ ಬಳಿಕ ಮತ್ತೆ ಜನೋತ್ಸವ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ ಎಂದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಜನರಿಗೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.