ಶಿವಮೊಗ್ಗ: ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ಎಣ್ಣೆ, ಹೆಣ್ಣು ಅಂದ್ರೆ ಖುಷಿ ಜಾಸ್ತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಏಕ್ ಲವ್ ಯಾ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ, ಎಣ್ಣೆಗೂ ಹೆಣ್ಣಿಗೂ.. ಎಂಬ ಸಾಂಗ್ ಕುರಿತು ಮಾತನಾಡುವ ಸಂದರ್ಭದಲ್ಲಿ, ಶಾಸಕ ರೇಣುಕಾಚಾರ್ಯ ಅವರ ಕುರಿತು ಹಾಸ್ಯ ಚಟಾಕಿ ಹಾರಿಸಿದ ಈಶ್ವರಪ್ಪ, ರೇಣುಕಾಚಾರ್ಯನಿಗೆ ಎಣ್ಣೆ, ಹೆಣ್ಣು ಅಂದ್ರೆ ಖುಷಿ ಜಾಸ್ತಿ ಎಂದು ಕಿಚಾಯಿಸಿದರು. ಅಲ್ಲದೇ, ರೇಣುಕಾಚಾರ್ಯ ಒಬ್ಬ ಕಲೆಗಾರ ಎಂದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ.. ಕೇಂದ್ರ ಶಿಕ್ಷಣ ಸಚಿವಾಲಯದ ಆದೇಶಕ್ಕೆ ಪರ-ವಿರೋಧ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಈಶ್ವರಪ್ಪ ಅವರು ಬಹಳ ಬುದ್ಧಿವಂತರು. ನನಗೆ ಮಾತನಾಡುವ ಕಲೆ ಗೊತ್ತಿಲ್ಲ. ನನಗೆ ಗೊತ್ತಿರೋದು ಒಂದೇ. ಬೈಯುವುದು, ಬೈಸಿಕೊಳ್ಳುವುದು. ಅದೂ ಮೀರಿದರೆ ಹೊಡೆದಾಟ ಎಂದರು.