ETV Bharat / city

ಮೇಕೆದಾಟು ಕುರಿತ ಕಾಂಗ್ರೆಸ್ ನಾಯಕರ ಹೊಣೆಗೇಡಿತನದ ಸ್ಫೋಟಕ ಸಾಕ್ಷ್ಯ ಬಿಡುಗಡೆ ಮಾಡುವೆ : ಸಚಿವ ಕಾರಜೋಳ - ಮೇಕೆದಾಟು ಕುರಿತ ಕಾಂಗ್ರೆಸ್ ಹೊಣೆಗೇಡಿತನದ ಸ್ಫೋಟಕ ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎಂದ ಸಚಿವ ಕಾರಜೋಳ

2013ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತಾ ಪಾದಯಾತ್ರೆ ಮಾಡಿದ್ರು. ಆದರೆ, ಏಳು ವರ್ಷದಲ್ಲಿ ಅವರು ಅಧಿಕಾರದಲ್ಲಿ ಇದ್ರು. ಅವರು ಕೃಷ್ಣಾಗಾಗಿ ಖರ್ಚು ಮಾಡಿದ್ದು ಏಳು ಸಾವಿರದ ಏಳುನೂರ ಇಪ್ಪತ್ತಾರು ಕೋಟಿ ರೂ. ಮಾತ್ರ. ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರ ನಡುವಿನ ಪೈಪೋಟಿಗಾಗಿ ನಡೆದಿದ್ದ ಪಾದಯಾತ್ರೆ ಅದು. ಇವತ್ತು ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಪೈಪೋಟಿಯಲ್ಲಿ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡ್ತಾ ಇದ್ದಾರೆ..

Minister govind karjol rebels against congress leaders in mekedatu issue
ಮೇಕೆದಾಟು ಕುರಿತ ಕಾಂಗ್ರೆಸ್ ಹೊಣೆಗೇಡಿತನದ ಸ್ಫೋಟಕ ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ: ಸಚಿವ ಕಾರಜೋಳ
author img

By

Published : Jan 1, 2022, 4:01 PM IST

Updated : Jan 1, 2022, 4:24 PM IST

ಬೆಂಗಳೂರು : ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್ ಪಕ್ಷದ ಹೊಣೆಗೇಡಿತನದ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮೇಕೆದಾಟು ಯೋಜನೆಯಾಗಿನ ಕಾಂಗ್ರೆಸ್ ಪಾದಯಾತ್ರೆ ಕುರಿತಂತೆ ಸಚಿವ ಕಾರಜೋಳ ವಾಗ್ದಾಳಿ ನಡೆಸಿರುವುದು..

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಕೃಷ್ಣೆಗೆ (ಕೂಡಲಸಂಗಮ) ಇಂದು ಕಾವೇರಿಗೆ (ಮೇಕೆದಾಟು) ಸಿಕ್ಕ ಅವಕಾಶವನ್ನು ವ್ಯರ್ಥ್ಯಗೊಳಿಸಿ ಅರ್ಥಹೀನ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಿತ್ರರು ಅಧಿಕಾರದಲ್ಲಿದ್ದಾಗಿನ ಮೇಕೆದಾಟು ಕುರಿತ ಹೊಣೆಗೇಡಿತನಕ್ಕೆ ಸಾಕ್ಷ್ಯ ನಮ್ಮಲ್ಲಿದೆ ಎಂದು ಹೇಳಿದ್ದಾರೆ.

ಕಾದು ನೋಡಿ. ಕೆಲವೇ ದಿನಗಳಲ್ಲಿ ಸ್ಫೋಟಕ ಮಾಹಿತಿ ಹೊರ ಹಾಕುತ್ತೇನೆ. ಜನವರಿ 3ರಂದು ಮೇಕೆದಾಟು ವಿಚಾರ ಸುಪ್ರೀಂಕೋರ್ಟ್‌‌ನಲ್ಲಿ ವಿಚಾರಣೆಗೆ ಬರಲಿದೆ. ಅದಾದ ಬಳಿಕ‌ ನಾನು ಸ್ಫೋಟಕ ವಿಚಾರವನ್ನು ಬಹಿರಂಗ ಪಡಿಸುತ್ತೇನೆ. ಪಾದಯಾತ್ರೆ ಪ್ರಾರಂಭವಾಗುವ ಮುನ್ನ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಮತ್ತು ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. 2013ರ ಜನವರಿ 7ರಿಂದ 2013ರ ಜನವರಿ 14ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು.

ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ವಿರೋಧಪಕ್ಷದಲ್ಲಿ ಬಂದಾಗ ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್‌ನವರ ಜಾಯಮಾನ ಎಂದು ಸಚಿವರು ವ್ಯಂಗ್ಯವಾಡಿದರು.

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನಿಂದ ವಿಳಂಬದ್ರೋಹ : ತಾವು ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕೆಲಸಗಳನ್ನು ವಿಳಂಬದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ ಎಂದು ಕಿಡಿ ಕಾರಿದರು.

ಈಗ ಕಾಂಗ್ರೆಸ್‌ನವರು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನವರು ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತಾ ಪಾದಯಾತ್ರೆ ಮಾಡಿದ್ರು. ಆದರೆ, ಏಳು ವರ್ಷದಲ್ಲಿ ಅವರು ಅಧಿಕಾರದಲ್ಲಿ ಇದ್ರು. ಅವರು ಕೃಷ್ಣಾಗಾಗಿ ಖರ್ಚು ಮಾಡಿದ್ದು ಏಳು ಸಾವಿರದ ಏಳುನೂರ ಇಪ್ಪತ್ತಾರು ಕೋಟಿ ರೂ. ಮಾತ್ರ. ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರ ನಡುವಿನ ಪೈಪೋಟಿಗಾಗಿ ನಡೆದಿದ್ದ ಪಾದಯಾತ್ರೆ ಅದು. ಇವತ್ತು ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಪೈಪೋಟಿಯಲ್ಲಿ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

ರಾಜಕೀಯ ಅಧಿಕಾರ ಪಿತ್ರಾರ್ಜಿತ ಆಸ್ತಿ ಅಲ್ಲ: ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಕೂಡ ಅಧಿಕಾರದಲ್ಲಿ ಇರಬೇಕು ಅಂತಾ ಬಯಸಿದವನಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ದ ಎಂದರು. ಪಕ್ಷ ಹೇಳುವುದನ್ನು ಶಿಸ್ತಿನ ಸಿಪಾಯಿ ರೀತಿ ಕೇಳುತ್ತೇನೆ. ಅಧಿಕಾರ ಅನ್ನೋದು ಪಿತ್ರಾರ್ಜಿತ ಆಸ್ತಿ ಅಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಅನಾವಶ್ಯಕ ವೆಚ್ಚ ಕಡಿಮೆ ಮಾಡಿ, ಅಧಿಕಾರಿಗಳಿಗೆ ಸಿಎಂ ತಾಕೀತು.. ಒಗ್ಗಟ್ಟಿನಿಂದ ಸವಾಲು ಎದುರಿಸುವ ಅಭಯ

Last Updated : Jan 1, 2022, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.