ETV Bharat / city

ಕೊಟ್ಟಿರುವ ಖಾತೆ ನಿಭಾಯಿಸಬೇಕು.. ಅಸಮಾಧಾನ ಸರಿಯಲ್ಲ: ಸಚಿವ ಬಿ.ಸಿ.ಪಾಟೀಲ್

ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಎಂದು ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Minister BC Patil
ಸಚಿವ ಬಿ.ಸಿ.ಪಾಟೀಲ್
author img

By

Published : Aug 9, 2021, 4:52 PM IST

Updated : Aug 9, 2021, 5:50 PM IST

ಬೆಂಗಳೂರು: ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು. ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​ ಹೇಳಿದ್ದಾರೆ. ವಿಕಾಸಸೌಧದಲ್ಲಿ ಕೊಠಡಿ ಪೂಜೆ ಮಾಡಿ ಕಚೇರಿ ಪ್ರವೇಶ ಮಾಡಿ ಬಳಿಕ ಮಾತನಾಡಿದ ಅವರು, ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಎಂದು ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ, ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು ಎಂದರು.

ವಿಕಾಸಸೌಧದಲ್ಲಿ ಕೊಠಡಿ ಪೂಜೆ ಮಾಡಿದ ಸಚಿವ ಬಿ.ಸಿ.ಪಾಟೀಲ್

17 ಜನ ಮತ್ತು 105 ಜನ ಅನ್ನೋದೇ ಮುಖ್ಯ ಅಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ. ಹಾಗಾಗಿ ಸರ್ಕಾರ ಅಧಿಕಾರಕ್ಕೆ ಬರಲು 105 ಶಾಸಕರು ಹಾಗೂ 17 ಜನರೂ ಕಾರಣ ಎಂದರು.

ಸಂಭ್ರಮಾಚರಣೆ ಮಾಡಿದರೆ ತಪ್ಪೇನು?:

ಮಾಜಿ ಸಿಎಂ ಹೆಚ್​​ಡಿಕೆ ನೂತನ ಸಚಿವರಿಂದ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು?. ಅವರು ಖುಷಿಯಿಂದ ಬಂದರೆ ನಾವೇನು ತಳ್ಳುವುದಕ್ಕೆ ಆಗುತ್ತಾ?. ಕೊರೊನಾ ಹೆಚ್ಚಳವಾಗುವ ಆತಂಕದಿಂದ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

Last Updated : Aug 9, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.