ETV Bharat / city

ಕೃಷಿ ವಿಚಕ್ಷಣಾ ದಳ ಮತ್ತಷ್ಟು ಜಾಗೃತಗೊಳಿಸಿ: ಅಧಿಕಾರಿಗಳಿಗೆ ಸಚಿವ ಬಿ.ಸಿ.ಪಾಟೀಲ್ ಸೂಚನೆ - ಸಚಿವ ಬಿ.ಸಿ.ಪಾಟೀಲ್

ಕೃಷಿ ವಿಚಕ್ಷಣಾ ದಳದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಕಳಪೆ ರಸಗೊಬ್ಬರ, ಕೀಟನಾಶಕಗಳು ತಯಾರಾಗದಂತೆ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟವಾಗದಂತೆ ತಳಮಟ್ಟದಲ್ಲಿಯೇ ಅವುಗಳನ್ನು ಬುಡಸಹಿತ ಕಿತ್ತು ಹಾಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್(Minister BC patil) ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Minister BC patil Notice to  agriculture inspectorate
ಕೃಷಿ ವಿಚಕ್ಷಣಾ ದಳದ ಪ್ರಗತಿ ಪರಿಶೀಲನಾ ಸಭೆ
author img

By

Published : Nov 18, 2021, 9:17 AM IST

ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಯಾವುದೇ ರೀತಿಯ ಕಳಪೆ ಕೃಷಿ ಪರಿಕರಗಳು, ರಸಗೊಬ್ಬರ, ಕೀಟನಾಶಕಗಳು ಸರಬರಾಜಾಗದಂತೆ ಕೃಷಿ ವಿಚಕ್ಷಣಾ ದಳವನ್ನು ಮತ್ತಷ್ಟು ಜಾಗೃತಗೊಳಿಸಲು ದಿಟ್ಟ ಕ್ರಮವಹಿಸಿ. 'ಹುಲಿ ಬಿಟ್ಟು ಇಲಿ ಹಿಡಿಯಬಾರದು' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್(Minister BC patil) ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Minister BC patil Notice to agriculture reconnaissance squad
ಕೃಷಿ ವಿಚಕ್ಷಣಾ ದಳದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಬಿ.ಸಿ ಪಾಟೀಲ್​​

ವಿಕಾಸಸೌಧದಲ್ಲಿ ನಿನ್ನೆ (ಬುಧವಾರ) ಕೃಷಿ ವಿಚಕ್ಷಣಾ ದಳದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೃಷಿ ವಿಚಕ್ಷಣಾ ದಳದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಕಳಪೆ ರಸಗೊಬ್ಬರ, ಕೀಟನಾಶಕಗಳು ತಯಾರಾಗದಂತೆ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟವಾಗದಂತೆ ತಳಮಟ್ಟದಲ್ಲಿಯೇ ಅವುಗಳನ್ನು ಬುಡಸಹಿತ ಕಿತ್ತು ಹಾಕಬೇಕು.

ರೈತರಿಗೆ ಅನ್ಯಾಯವಾಗುವಂತಹ ಇಂತಹ ಕೃತ್ಯದಲ್ಲಿ ಅಧಿಕಾರಿಗಳಾಗಲೀ ಅಥವಾ ಇನ್ಯಾರೋ ಶಾಮೀಲಾಗದಂತೆ ನೋಡಿಕೊಳ್ಳಬೇಕು. ತಪ್ಪು ಎಸಗಿದವರು ಯಾರೇ ಆಗಲೀ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಲಾಜಿಲ್ಲದೇ ಕ್ರಮ ಜರುಗಿಸಿ:

ದಾಳಿ ನಡೆಸುವುದು ಸದುದ್ದೇಶದಿಂದ ಕೂಡಿರಬೇಕು ಹಾಗೂ ರೈತರಿಗೆ ಉಪಯೋಗವಾಗುವಂತಿರಬೇಕು. ಇಲಾಖೆಗೆ, ರೈತರಿಗೆ ದ್ರೋಹ ಬಗೆಯುವವರು ಯಾರೇ ಕಂಡು ಬಂದರೂ ಮುಲಾಜಿಲ್ಲದೇ ಅಂತವರ ವಿರುದ್ಧ ಕ್ರಮ ಜರುಗಿಸಿ. ತಳಮಟ್ಟದಲ್ಲಿಯೇ ಗುಣಮಟ್ಟದ ಅನುಮತಿ ನೀಡಿದ ಪ್ಯಾಕಿಂಗ್​​​ಗಳು ಮೇಲ್ಮಟ್ಟದವರೆಗೂ ಸರಬರಾಜಾಗಿ ಒಪ್ಪಿತ ಗುಣಮಟ್ಟದ ಮಾದರಿಗಳೇ ರೈತರಿಗೂ ತಲುಪುವಂತೆ ನೋಡಿಕೊಳ್ಳಬೇಕು.

ಜಿಲ್ಲೆಯ ಕೃಷಿ ಅಧಿಕಾರಿಗಳು, ವಿಚಕ್ಷಣಾ ದಳದವರು ಇದರತ್ತ ಹೆಚ್ಚಿನ ಲಕ್ಷ್ಯ ವಹಿಸಬೇಕು. ಅವರವರ ಜವಾಬ್ದಾರಿ ಕರ್ತವ್ಯಗಳನ್ನು ಅವರವರೇ ನಿರ್ವಹಿಸಬೇಕು. ಸ್ಥಳೀಯವಾಗಿ ಜಿಲ್ಲಾ ಕೃಷಿ ವಿಚಕ್ಷಣಾಧಿಕಾರಿಗಳೇ ಆಯಾ ಭಾಗದಲ್ಲಿ ಹದ್ದಿನ ಕಣ್ಣು ಇಡಬೇಕು.

ಮೇಲ್ಪಟ್ಟ ಅಧಿಕಾರಿಗಳಿಗೆ ಇಂತಹ ಕುಕೃತ್ಯಗಳು ಗಮನಕ್ಕೆ ಬಂದು ಸ್ಥಳೀಯವಾಗಿ ಅಧಿಕಾರಿಗಳಿಗೆ ಬಾರದೇ ಇದ್ದ ಸಂದರ್ಭದಲ್ಲಿ, ಒಂದು ವೇಳೆ ರಾಜ್ಯದ ಯಾವುದೇ ಭಾಗದಲ್ಲಿಯೂ ಕೇಂದ್ರ ಕೃಷಿ ಜಾಗೃತಕೋಶದ ಅಧಿಕಾರಿಗಳು ದಾಳಿ ಮಾಡಿ ಕೃಷಿ ಪರಿಕರಗಳನ್ನು ಜಪ್ತಿ ಮಾಡಿದ ಸಂದರ್ಭದಲ್ಲಿ ಪರಿವೀಕ್ಷಕರಿಗೆ ನೋಟಿಸ್ ನೀಡುವುದಾಗಿ ಕೃಷಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಟೋಲ್ ಫ್ರೀ-ಸಹಾಯವಾಣಿ ಜಾಗೃತ ಕೋಶಕ್ಕೂ ವಿಸ್ತರಣೆ:

ಕೃಷಿ ಇಲಾಖೆಯ 'ಟೋಲ್ ಫ್ರೀ- ಸಹಾಯವಾಣಿ' ಯನ್ನು ಜಾಗೃತ ಕೋಶಕ್ಕೂ ವಿಸ್ತರಿಸುವಂತೆ ಸಚಿವ ಬಿ.ಸಿ ಪಾಟೀಲ್​​ ಸೂಚಿಸಿದರು. ಇನ್ನು ಜಪ್ತಿ ಮಾಡಿದ ಕೃಷಿ ಪರಿಕರಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿ ಹೊರಡಿಸಲು ಕೃಷಿ ಇಲಾಖಾ ಮುಖ್ಯಸ್ಥರಿಗೆ ಸಭೆಯಲ್ಲಿ ಸೂಚಿಸಲಾಯಿತು.

ಇದರೊಂದಿಗೆ ಜಾಗೃತ ಕೋಶದ ಕಾರ್ಯಕ್ಕೆ ಸುಗಮವಾಗುವಂತೆ ಕೃಷಿ ಪರಿಕರಗಳ ಗುಣಮಟ್ಟ ನಿಯಂತ್ರಣಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ತಂತ್ರಾಂಶ ಹಾಗೂ K-KISAN ಆ್ಯಪ್ ನೊಂದಿಗೆ ಜೋಡಿಸಲು ಕ್ರಮವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.