ETV Bharat / city

ಸಾರಿಗೆ ನೌಕರರ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲ್ಲ: ಸಚಿವ ಶ್ರೀರಾಮುಲು - ksrtc employees

ಈ ಹಿಂದೆ ಪ್ರತಿಭಟನೆ ವೇಳೆ ಅನೇಕರು ಅಮಾನತು, ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. 6 ಸಾವಿರ ನೌಕರರು ಅಮಾನತುಗೊಂಡಿದ್ದರು. ಇವರಲ್ಲಿ 4 ಸಾವಿರ ಮಂದಿಯನ್ನು ಮರಳಿ ಸೇವೆಗೆ ಕರೆಸಿಕೊಂಡಿದ್ದೇವೆ. ಸಾರಿಗೆ ಸಿಬ್ಬಂದಿ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

Minister B Sriramulu
ಬಿ.ಶ್ರೀರಾಮುಲು
author img

By

Published : Sep 20, 2021, 3:34 PM IST

ಬೆಂಗಳೂರು: ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ ನಾನಾ ಕಾರಣಗಳಿಗೆ ಅಮಾನತುಗೊಂಡಿದ್ದ, ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳಲಾಗಿದೆ. ನಾವು ಸೇಡು ತೀರಿಸಿಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಧ್ಯಮಗೋಷ್ಟಿ

ವಿಧಾನಸೌಧದಲ್ಲಿ ನಾಲ್ಕು ನಿಗಮದ ಎಂಡಿಗಳ ಜತೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಇಂದು ಸಭೆ ನಡೆಸಿದ ಸಂದರ್ಭ ಅನೇಕ ವಿಚಾರಗಳನ್ನು ಚರ್ಚಿಸಿದ್ದು, ನೌಕರರ ವಿಚಾರವು ಇದರಲ್ಲಿ ಒಂದಾಗಿದೆ ಎಂದರು.

ವಿವಿಧ ಸಂದರ್ಭಗಳಲ್ಲಿ ಪ್ರತಿಭಟನೆ ವೇಳೆ ಅನೇಕರು ಅಮಾನತು, ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. 6 ಸಾವಿರ ನೌಕರರು ಅಮಾನತುಗೊಂಡಿದ್ದರು. ಇವರಲ್ಲಿ 4 ಸಾವಿರ ಮಂದಿಯನ್ನು ಮರಳಿ ಸೇವೆಗೆ ಕರೆಸಿಕೊಂಡಿದ್ದೇವೆ. ಈ ಎಲ್ಲಾ ಆದೇಶವನ್ನು ಮರಳಿ ಪಡೆಯಲಾಗಿದೆ. ಇನ್ನುಳಿದ 2 ಸಾವಿರ ಮಂದಿಯ ಜತೆಗೂ ಚರ್ಚೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಸಂಪರ್ಕದಲ್ಲಿರುವ ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಈವರೆಗೆ ಏನಾಗಿದೆಯೋ ಗೊತ್ತಿಲ್ಲ. ಇನ್ಮುಂದೆ ಯಾವುದೇ ಘಟನೆ ನಡೆಯಬಾರದು. ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ನಾನು ಎಲ್ಲರೂ ಈ ಬಗ್ಗೆ ಮಾತನಾಡಿದ್ದೇವೆ. ಡ್ರೈವರ್ ಆಗಿರಬಹುದು ಅಥವಾ ಕಂಡಕ್ಟರ್ ಆಗಿರಬಹುದು. ನಾಳೆ ಎಲ್ಲರನ್ನೂ ಕರೆದು ತೀರ್ಮಾನ ಮಾಡುತ್ತೇನೆ. ಸಂಘಟನೆಗಳನ್ನೂ ಕರೆದು ಮಾತನಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಅಭಯ ನೀಡಿದರು.

ಮುಷ್ಕರದಲ್ಲಿ ಪಾಲ್ಗೊಂಡ ನೌಕರರಲ್ಲಿ ನಾನು ಮನವಿ ಮಾಡುತ್ತೇನೆ. ಏನಾದರು ತೊಂದರೆ ಇದ್ದರೆ ನಮ್ಮ‌ಜೊತೆ ಕುಳಿತು ಮಾತನಾಡಿ. ಎಫ್​​ಐಆರ್ ಆಗಿದ್ದವರ ಕುರಿತು ಕಾನೂನು ತಂಡದ ಜತೆ ಮಾತನಾಡುತ್ತೇನೆ. ವೇತನ ವಿಚಾರದಲ್ಲಿ ಯಾವ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಸರಿಯಾದ ಸಮಯಕ್ಕೆ ವೇತನ ಆಗುವಂತೆ ನೋಡಿಕೊಳ್ಳುತ್ತೇನೆ. ಇಲಾಖೆ ಸಿಬ್ಬಂದಿ ಪರವಾಗಿ ನಾವಿದ್ದೇವೆ. ಪೂರ್ಣ ಸಹಕಾರ ನೀಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ರು.

ಕಠಿಣ ಸಂದರ್ಭದಲ್ಲಿ ನಿರ್ಧಾರ ತೆಗೆದಯಕೊಳ್ಳುವ ಮೊದಲು ಸರ್ಕಾರದ ಜತೆ ಮಾತುಕತೆ ನಡೆಸಬೇಕು. ಅವರಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ. ಇದು ಮುಕ್ತಾಯ ಆಗುವುದಿಲ್ಲ. ಸಾರಿಗೆ ಇಲಾಖೆ ಸಂಬಳ ವಿಚಾರದಲ್ಲಿ ಕರೆಸಿ ಮಾತನಾಡಿದ್ದಾರೆ. ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆ ಮಾಡುತ್ತೇವೆ. ನಾವು ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲ್ಲ ಎಂದು ವಿವರಿಸಿದರು.

ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರ ಹಿತಕ್ಕೆ ಬದ್ಧ: ಸಾರಿಗೆ ಸಚಿವ ಶ್ರೀರಾಮುಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.