ETV Bharat / city

ಕಳಪೆ ಗುಣಮಟ್ಟದ ಕೀಟನಾಶಕ ತಯಾರಿಕೆ, ಮಾರಾಟದ ವಿರುದ್ಧ ಕ್ರಮ: ಸಚಿವ ಬಿ.ಸಿ.ಪಾಟೀಲ್

ಬಜೆಟ್​ ಮೇಲಿನ ಚರ್ಚೆಯ ವೇಳೆ ಜೆಡಿಎಸ್​ ಸಚೇತಕ ಗೋವಿಂದರಾಜು ಅವರು ಕಳಪೆ ಗುಣಮಟ್ಟದ ಕೀಟನಾಶಕಗಳ ಪೂರೈಕೆಯ ಬಗ್ಗೆ ಸದನದ ಗಮನ ಸೆಳೆದರು. ಇದಕ್ಕುತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಳಪೆ ಗುಣಮಟ್ಟದ ಕೀಟನಾಶಕ ತಯಾರಿಕೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

author img

By

Published : Mar 8, 2022, 6:33 PM IST

pesticide
ಪಾಟೀಲ್

ಬೆಂಗಳೂರು: ರೈತರ ಬೆಳೆಗಳಿಗೆ ಪೂರೈಕೆಯಾಗುವ ಕೀಟನಾಶಕಗಳಲ್ಲಿ ಅಕ್ರಮ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ನಿಯಮ 72ರ ಅಡಿ ಜೆಡಿಎಸ್ ಸಚೇತಕ ಗೋವಿಂದ​ರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವಾರ್ಷಿಕವಾಗಿ 6,800 ಮಾದರಿಗಳ ಸಂಗ್ರಹಣೆ ಗುರಿಯನ್ನು ಕೀಟನಾಶಕ ಪರಿವೀಕ್ಷಕರಿಗೆ ನೀಡಲಾಗಿದೆ. ವಿಶ್ಲೇಷಣೆಯಲ್ಲಿ ಕಳಪೆ ಗುಣಮಟ್ಟದಿಂದ ವರದಿಯಾದ ಮಾದರಿಗಳ ಕೀಟನಾಶಕ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

2020- 21 ನೇ ಸಾಲಿನಲ್ಲಿ 5,390 ಕೀಟನಾಶಕ ಮಾದರಿಗಳನ್ನು ಗುಣಮಟ್ಟದ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಲ್ಲಿ 66 ಪೀಡೆನಾಶಕಗಳು ಕಳಪೆ ಎಂದು ವರದಿಯಾಗಿದೆ. 2021 22 ನೇ ಸಾಲಿನ ಜನವರಿ 2022ರ ಅಂತ್ಯಕ್ಕೆ 4401 ಪೀಡೆನಾಶಕ ಮಾದರಿಗಳನ್ನು ಗುಣಮಟ್ಟ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 59 ಪೀಡೆನಾಶಕಗಳು ಕಳಪೆ ಎಂದು ವರದಿಯಾಗಿದೆ. ಕಳಪೆ ಗುಣಮಟ್ಟದ ವರದಿ ಲಭಿಸಿದ ಪೀಡೆನಾಶಕಗಳ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಆಡಳಿತಾತ್ಮಕ ಮತ್ತು ಕಾನೂನು ರೀತಿಯ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದರು.

ರೈತ ಸ್ನೇಹಿ ಕಾರ್ಯಕ್ರಮ ಮಾಡಿ: ಜೆಡಿಎಸ್ ಸದಸ್ಯ ಗೋವಿಂದರಾಜ್ ಮಾತನಾಡಿ, ತೋಟಗಾರಿಕೆ, ಕೃಷಿ ಇಲಾಖೆ ನಡುವೆ ಹೊಂದಾಣಿಕೆ ಇಲ್ಲ. ಟೊಮ್ಯಾಟೊ, ಮಾವಿನ ಹಣ್ಣು, ಸೇವಂತಿಗೆ ಹೂ ಬೆಳೆಗೆ ಊಜಿ ನೊಣದ ಕಾಟ ಹೆಚ್ಚಾಗಿದೆ. ರೇಷ್ಮೆ, ರಾಗಿ ಬೆಳೆಗೂ ಹುಳುಗಳ ಕಾಟ ಹೆಚ್ಚಾಗಿದೆ. ನಾನೇ ಬೆಳೆದ ಮಾವಿನ ಬೆಳೆ ಶೇ.80 ರಷ್ಟು ಬೆಳೆ ಹಾಳಾಗಿದೆ. ಸೇವಂತಿಗೆ ಹೂ ರಾತ್ರಿ ಕಳೆಯುವುದರೊಳಗೆ ನಾಶವಾಗಿದೆ ಎಂದರು.

ರೈತರಿಗೆ ಹುಳು ನಾಶಕ್ಕೆ ಯಾವ ಔಷಧಿ ಹೊಡೆಯಬೇಕೆಂಬ ಮಾಹಿತಿ ಇಲ್ಲ. ವಿಶ್ವವಿದ್ಯಾಲಯದದಲ್ಲಿ ನೀಡುವ ವೈಜ್ಞಾನಿಕ ಮಾಹಿತಿ ರೈತರಿಗೆ ತಲುಪುತ್ತಿಲ್ಲ. ಸಬ್ಸಿಡಿ ವಿವರ ನೀಡಿಕೆ ಆಗುತ್ತಿಲ್ಲ. ಖಾಸಗಿಯವರು ಹಲವು ಕಾರ್ಯಕ್ರಮ ಮಾಡುತ್ತಿವೆ. ಸರ್ಕಾರದಿಂದ ಯಾವುದೇ ರೈತ ಸ್ನೇಹಿ, ಪ್ರೋತ್ಸಾಹಕಾರಿ ಕಾರ್ಯಕ್ರಮ ಆಗುತ್ತಿಲ್ಲ ಎಂದು ಟೀಕಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮಂಡಳಿಗಳ ಮೂಲಕವೇ ಪರವಾನಗಿ ಪಡೆಯಬೇಕು. ರಾಜ್ಯದಲ್ಲಿ 6 ಪ್ರಯೋಗಾಲಯ ಇವೆ. ಇದರಲ್ಲಿ ಎರಡಕ್ಕೆ ಮಾನ್ಯತೆ ಸಿಕ್ಕಿದೆ. ಉಳಿದವುಗಳ ಮಾನ್ಯತೆ ಕೊಡಿಸುವ ಕಾರ್ಯ ನಡೆದಿದೆ. ಸಿಬ್ಬಂದಿ ನೇಮಕ ಆಗುತ್ತಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಬಜೆಟ್ vs ಬಿಜೆಪಿ ಬಜೆಟ್: ಸದನದಲ್ಲಿ ಲೆಕ್ಕ ಬಿಡಿಸಿ ಹೇಳಿದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.