ಯಲಹಂಕ: ಕೋಳಿ ಹಾಕಿದ ಹಿಕ್ಕೆ ಮೀನಿಗೆ ಆಹಾರವಾಗುತ್ತದೆ. ಹಾಗೆಯೇ ಮೀನಿನ ತ್ಯಾಜ್ಯ ಸಸ್ಯಗಳಿಗೆ ಆಹಾರವಾಗುತ್ತೆ. ಹೀಗೆ ಕಡಿಮೆ ಖರ್ಚುನಿಂದ ಅಧಿಕ ಲಾಭಗಳಿಸುವ 'ಮೈಕ್ರೋ ಪೋನೀಕ್ಸ್' (Micro Phoenix) ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ನೀರಿನಿಂದ (ಹೈಡ್ರೋಪೋನಿಕ್ಸ್) ಕೃಷಿ ಮಾಡುವುದನ್ನ ನಾವು ನೋಡಿದ್ದೇವೆ. ಅದರ ಮುಂದುವರಿದ ತಂತ್ರಜ್ಞಾನ ಸೂಕ್ಷ್ಮ ಜಾನುವಾರು (ಮೈಕ್ರೋ ಪೋನಿಕ್ಸ್) ದಿಂದ ಕಡಿಮೆ ನೀರು ಮತ್ತು ಕಡಿಮೆ ಜಾಗದಲ್ಲಿ ಕೃಷಿ ಮಾಡುವ ಮೂಲಕ ಅಧಿಕ ಲಾಭಗಳಿಸಬಹುದು.
ನೀರಿನ ಟ್ಯಾಂಕ್ನಲ್ಲಿ ಮೀನುಗಳು ಅದರ ಮೇಲೆ ಕೋಳಿ ಮತ್ತು ಮೊಲ ಇವುಗಳ ಹಿಕ್ಕೆ ನೇರವಾಗಿ ನೀರಿಗೆ ಸೇರಿ, ಪೋಷಕಾಂಶಗಳನ್ನ ಒಳಗೊಂಡ ನೀರು ನೇರವಾಗಿ ಸಸ್ಯಗಳಿಗೆ ಆಹಾರವಾಗುವುದು ಮೈಕ್ರೋ ಪೋನಿಕ್ಸ್ (Micro Phoenix) ಪದ್ಧತಿಯ ವಿಶೇಷತೆ.
ಕೋಳಿಗೆ ಆಹಾರ ಹಾಕಿದ ನಂತರ ಅದರ ತ್ಯಾಜ್ಯ ನೀರಿಗೆ ಸೇರುತ್ತದೆ. ಆ ಬಳಿಕ ಝೂ ಪ್ಲ್ಯಾಂಕ್ಟನ್ ಗಳು ಮತ್ತು ಫೈಟೋ ಪ್ಲಾಂಕ್ಟನ್ ಗಳಾಗಿ (Zoo plankton and phyto plankton) ಬದಲಾಗುವುದರೊಂದಿಗೆ ಮೀನಿಗೆ ಆಹಾರವಾಗುತ್ತದೆ. ನಂತರ ಕೋಳಿಯ ತ್ಯಾಜ್ಯದಿಂದ ಬರುವ ಅಮೋನಿಯ ಮತ್ತು ಮೀನಿನ ಘನ ತ್ಯಾಜ್ಯವನ್ನ ನೈಟ್ರಿಫಿಕೇಷನ್ ಮತ್ತು ಖನಿಜೀಕರಣವನ್ನ ಯಾಂತ್ರಿಕ ಮತ್ತು ಜೈವಿಕ ವಿಧಾನದಿಂದ ಮಾಡಲಾಗುತ್ತದೆ. ಇದರಿಂದ ಬರುವ ಪೋಷಕಾಂಶಗಳು ಸಸ್ಯಗಳಿಗೆ ಆಹಾರವಾಗುತ್ತದೆ.
ಒಂದು ಕೋಳಿಗೆ 8 ಮೀನು, 8 ಮೀನಿಗೆ 21 ಸಸ್ಯಗಳನ್ನ ಬೆಳೆಸಬಹುದು. ಕೋಳಿ ಬದಲಿಗೆ ಮೊಲ ಮತ್ತು ಕ್ವಿಲ್ಗಳನ್ನ ಸಾಕಬಹುದು. ಸುಮಾರು 90 ಸಾವಿರದಲ್ಲಿ ಒಂದು ಮೈಕ್ರೋ ಪೊನೀಕ್ಸ್ ಘಟಕ ತಯಾರಿಸಬಹುದು.
ಈ ವಿಧಾನದ ಮೂಲಕ ಕಡಿಮೆ ನೀರು ಬಳಕೆ ಮಾಡಿ ಕಡಿಮೆ ಜಾಗದಲ್ಲಿ ಕೃಷಿ ಮಾಡಬಹುದು. ರಸಾಯನಿಕ ಪೋಷಕಾಂಶಗಳ ಅಗತ್ಯ ಇರುವುದಿಲ್ಲ. ಶೂನ್ಯ ಬೇಸಾಯ ಮತ್ತು ಶೂನ್ಯ ಕಳೆ ಇರುತ್ತದೆ. ಜತೆಗೆ ಕಡಿಮೆ ಶ್ರಮ ಮತ್ತು ಯುವಕರು ಬಹಳ ಸುಲಭವಾಗಿ ಇದನ್ನ ಮಾಡಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮುಂದಿನ 3 ದಿನ ಮಳೆ ಮುಂದುವರಿಕೆ; ಹವಾಮಾನ ಇಲಾಖೆ ಮುನ್ಸೂಚನೆ