ETV Bharat / city

ಜಿಎಸ್‌ಟಿ ಏರಿಕೆಗೆ ವಿರೋಧ: ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್​ನಿಂದ ಪ್ರತಿಭಟನೆ - ಬೆಂಗಳೂರಿನಲ್ಲಿ ಪ್ರತಿಭಟನೆ

ಆಹಾರ ಧಾನ್ಯಗಳ ಮೇಲೆ ಎಸ್‌ಟಿ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್​ನಿಂದ ಪ್ರತಿಭಟನೆ ನಡೆಸಲಾಯಿತು.

Merchant association Protest in Bengaluru
ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್​ನಿಂದ ಪ್ರತಿಭಟನೆ
author img

By

Published : Jul 15, 2022, 2:38 PM IST

ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ. 5ರಷ್ಟು ಜಿಎಸ್‌ಟಿ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ವ್ಯಾಪಾರಿ ಸಂಘಟನೆಯಾದ ನ್ಯೂ ತರಗುಪೇಟೆ ಮರ್ಚೆಂಟ್ ಅಸೋಸಿಯೇಷನ್ ಚಾಮರಾಜಪೇಟೆಯಲ್ಲಿ ವ್ಯಾಪಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿತು.

ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್​ನಿಂದ ಪ್ರತಿಭಟನೆ

ಇಂದು ಆಹಾರ ಧಾನ್ಯಗಳ ಮಾರಾಟ ವಹಿವಾಟು ನಿಲ್ಲಿಸಿದ್ದೇವೆ. ಜಿಎಸ್‌ಟಿ ಏರಿಕೆಯಿಂದ ಗ್ರಾಹಕರು ಹಾಗೂ ನಮಗೆ ತುಂಬಾ ತೊಂದರೆಯಾಗಲಿದೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಇತರ ಅಗತ್ಯ ವಸ್ತುಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ನಿತ್ಯ ಬಳಸುವ ಅವಶ್ಯಕ ಪದಾರ್ಥಗಳು. ಇವುಗಳ ಮೇಲೆ ತೆರಿಗೆ ಹೆಚ್ಚಾಗಲಿದೆ ಎಂದು ಆತಂಕ ಹೊರ ಹಾಕಿದರು.

ಜೂ. 28 ಮತ್ತು 29 ರಂದು ಜಿಎಸ್‌ಟಿ ಮಂಡಳಿ ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿ ಆದೇಶ ಹೊರಡಿಸಿದೆ. ಈ ಆದೇಶ ದೇಶಾದ್ಯಂತ ಜು.18ರಿಂದ ಜಾರಿಗೆ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.