ETV Bharat / city

ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ಸಂಸತ್​​ನಲ್ಲಿ ಕೆಆರ್​ಎಸ್​ ಡ್ಯಾಮ್ ವಿಚಾರದ ಬಗ್ಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಇನ್ನಷ್ಟು ಒತ್ತುಕೊಟ್ಟು ಮಾತನಾಡುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ..

member-of-parliament-sumalatha-on-allegations
ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ
author img

By

Published : Jul 10, 2021, 7:01 PM IST

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಇಬ್ಬರ ನಡುವೆ ಕೆಆರ್‌ಎಸ್ ಡ್ಯಾಮ್ ವಿಚಾರವಾಗಿ ಶುರುವಾಗಿದ್ದ ಮಾತಿನ ಗುದ್ದಾಟ, ಅಂಬರೀಶ್ ಸಮಾಧಿ, ಚಿತ್ರರಂಗ ಅಂತೆಲ್ಲಾ ತಿರುವು ತೆಗೆದುಕೊಂಡಿದೆ. ಇಂದು ಜೆಪಿನಗರದ ನಿವಾಸದ ಬಳಿ ಮಾತನಾಡಿದ ಸಂಸದೆ ಸುಮಲತಾ, ವಿಷಯವನ್ನು ಆರಂಭಿಸಿದ್ದೇ ಅವರು, ಅವರೇ ಅಂತ್ಯ ಮಾಡ್ತೀನಿ ಅಂದ್ರೆ ಸಂತೋಷ. ನಾನು ಯಾವತ್ತೂ ವಿವಾದ ಮಾಡಬೇಕು ಅಥವಾ ವಿವಾದವನ್ನು ವೈಯಕ್ತಿಕವಾಗಿ ತಿರುಗಿಸಬೇಕು ಅಂತಾ ಮಾತನಾಡಿರಲಿಲ್ಲ.

ನಾನು ನನ್ನ ದಿಶಾ ಸಭೆಯಲ್ಲಿ ಮಾತನಾಡಿರೋದನ್ನು ತೆಗೆದುಕೊಂಡು, ಅವರು ನೀಡಿರುವ ಹೇಳಿಕೆಗಳ ಮೇಲೆ ಈ ವಿಚಾರ ಈವರೆಗೆ ಬಂದಿದೆ. ಯಾವ್ ಯಾವುದೋ ವಿಷಯದ ಪ್ರಸ್ತಾಪವನ್ನ ತರುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ, ನನ್ನ ಹೋರಾಟವೇ ಬೇರೆ, ಆ ಹೋರಾಟ ನಿಲ್ಲಲ್ಲ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆ ವಿಚಾರವನ್ನ ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅಲ್ಲಿ ಇವರ ಹೆಸರು ಅಥವಾ ಯಾರ ಹೆಸರನ್ನು ನಾನು ಪ್ರಸ್ತಾಪ ಮಾಡಿಲ್ಲ. ಅದೇ ಹೋರಾಟ ಮುಂದುವರೆಸುತ್ತೇನೆ. ಗಣಿ ಸಚಿವರ ಬಳಿ ಇವತ್ತು ನಾನು ಟೈಂ ತೆಗೆದುಕೊಂಡಿದ್ದೇನೆ. ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಈಗಾಗಲೇ ಸಿಎಂಗೆ ಪತ್ರ ನೀಡಿದ್ದೇನೆ, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅಂತಾ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರವೀಂದ್ರ ಶ್ರೀಕಂಠಯ್ಯ ತಾವೇ ಡಿಕ್ಟೇಟರ್ ಅನ್ನೋ ಭಾವನೆಯಲ್ಲಿದ್ದಾರೆ

ಸುಮಲತಾ ಕ್ಷಮೆ ಕೇಳಬೇಕೆಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರದ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದು, ರವೀಂದ್ರ ಶ್ರೀಕಂಠಯ್ಯ ತಾವೇ ಡಿಕ್ಟೇಟರ್ ಅನ್ನೋ ಭಾವನೆಯಲ್ಲಿದ್ದಾರೆ. ಅವರು ಹೇಳಿದಂತೆ ನಾನು ನಡೆಯೋದಿಕ್ಕಾಗಲ್ಲ. ನಾನು ಜಿಲ್ಲಾ ಸಂಸದೆ, ನಾನು ಏನು ಮಾಡಬೇಕೋ ಮಾಡ್ಕೊಂಡು ಹೋಗ್ತೇನೆ. ನನಗೆ ಇದ್ರಲ್ಲಿ ಗೊಂದಲವಿದೆ. ಬಹುಶಃ ಅವರು ಕ್ಷಮೆ ಕೇಳಬೇಕು ಅನ್ನೋ ನಿಟ್ಟಿನಲ್ಲಿ ಹೋರಾಟ ಮಾಡ್ತಿದ್ದಾರೆ. ಎಲ್ಲಾ ಪ್ರಕರಣದಲ್ಲಿ ಅವರ ಪಕ್ಷಕ್ಕೆ ಯಾವ ರೀತಿ ಡ್ಯಾಮೇಜ್ ಆಗಿದೆ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಹೀಗಾಗಿ, ಅವರ ಮನಸ್ಸಿನಲ್ಲಿ ಕ್ಷಮೆ ಕೇಳಿದ್ರೆ ಎಪಿಸೋಡ್ ಮುಗಿಸಬಹುದು ಅಂತಾ ಸುಮಲತಾ ತಿರುಗೇಟು ನೀಡಿದ್ದಾರೆ.

ಇನ್ನು, ತಮ್ಮ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, ಪ್ರತಿಭಟನೆ ನಡೆಯುತ್ತಿರೋದು ಒಂದು ದಾರಿಯಲ್ಲಿ ಒಳ್ಳೆಯದೇ. ನಿಮ್ಮ ಅಸಲಿ ರೂಪವನ್ನ ನೀವೇ ಬಿಚ್ಚಿಡುತ್ತಿದ್ದೀರಾ.? ಅವರು ಇದೇ ತರ ಮಾತಾನಾಡುತ್ತ ಇರಬೇಕು. ಜನ ಕೇಳಿಸಿಕೊಳ್ಳುತ್ತಲೇ ಇರಬೇಕು. ಒಂದು ದಿನ ಜನ ಮಾತನಾಡ್ತಾರೆ, ಇವರು ಕೇಳಿಸಿಕೊಳ್ಳಬೇಕು. ಮಂಡ್ಯ ರಾಜಕೀಯ ಮನೆವರೆಗೆ ಬರೋದಕ್ಕೆ ನನ್ನ ತಪ್ಪಿಲ್ಲ. ವೈಯಕ್ತಿಕ ಟೀಕೆ ಅನ್ನೋದು ಯುನಿವರ್ಸಿಟಿಯನ್ನ ಕ್ರಿಯೇಟ್ ಮಾಡಿರೋ ತರ. ಒಬ್ಬರನ್ನು ತಯಾರು ಮಾಡಿ ನನ್ನ ವಿರುದ್ಧ ಮಾತನಾಡಲು ಕಳಿಸುತ್ತಿದ್ದಾರೆ. ಎರಡು ವರ್ಷದಿಂದ ಅದೇ ರೀತಿ ಮಾಡ್ತಿದ್ದಾರೆ. ಆ ರೀತಿ ನಾನು ಯಾವತ್ತೂ ಮಾಡಲ್ಲ ಎಂದು ಸುಮಲತಾ ಹೇಳಿದರು.

ಆಗೋದೆಲ್ಲ ಒಳ್ಳೆಯದಕ್ಕೆ, ದೇವರು ಆಕಸ್ಮಿಕವಾಗಿ ನನ್ನನ್ನ ಈ ಸ್ಥಾನಕ್ಕೆ ಕರ್ಕೊಂಡು ಬಂದಿದಾನೆ. ಕೆಲವೊಮ್ಮ ಕಷ್ಟ ಆಗುತ್ತೆ. ಆದ್ರೆ, ಇವೆಲ್ಲ ಆದಾಗ, ಸತ್ಯದ ಪರ ನಿಂತಾಗ ಶತ್ರುಗಳು ಹುಟ್ಟುಕೊಳ್ಳುತ್ತಾರೆ ಅನ್ನೋದು ನಿಜ. ನನ್ನ ವೈಯಕ್ತಿಕ ವಿಚಾರಕ್ಕೆ ಬಂದಾಗ ನನಗೆ ಇದು ಬೇಕಿತ್ತಾ? ಅನಿಸಿರೋದು ನಿಜ. ಆದ್ರೆ, ಈ ರೀತಿ ಇವರು ಮಾತನಾಡಿದಾಗ ನನಗೆ ಇನ್ನಷ್ಟು ಹುಮ್ಮಸ್ಸು ಬರುತ್ತದೆ. ಅಂಬಿ ಅಭಿಮಾನಿಗಳು ಹಾಗೂ ಜಿಲ್ಲೆಯ ಜನ, ದರ್ಶನ್, ಯಶ್ ಅಭಿಮಾನಿಗಳು ನನ್ನ ಜೊತೆಯಲ್ಲಿದ್ದಾರೆ. ಅಂತಹ ಲಕ್ಷಾಂತರ ಜನ ನನ್ನ ಜೊತೆಯಲ್ಲಿ ಇರುವಾಗ ನಾನು ಇಂತಹ ನೂರು ಜನರ ಬಗ್ಗೆ ನಾನು ಯಾಕೆ ತಲೆ ಕೆಡಿಸಿಕೊಳ್ಳಲಿ ಅಂತಾ ಹೇಳಿದಾರೆ.

'ಸಂಸತ್​ನಲ್ಲಿ ಮಾತನಾಡುತ್ತೇನೆ'

ನಂತರ ಡ್ಯಾಮ್‌ಗೆ ಭೇಟಿ ನೀಡುವುದರ ಬಗ್ಗೆ ಮಾತನಾಡಿ, ಸದ್ಯದಲ್ಲೇ ಡ್ಯಾಂಗೆ ಭೇಟಿ ಕೊಡುತ್ತೇನೆ. ಕಾವೇರಿ ನಿಗಮದವರು ಕೊರೊನಾ ಕಾರಣ ಹೇಳುತ್ತಿದ್ದಾರೆ. ಅವರಿನ್ನೂ ನಮಗೆ ದಿನಾಂಕ ನಿಗದಿ ಮಾಡಿಲ್ಲ. ಅವರಿಗೆ ಒತ್ತಾಯ ಮಾಡಿ ಸದ್ಯದಲ್ಲೇ ಕೆಆರ್‌ಎಸ್ ಬಳಿ ಹೋಗುತ್ತೇನೆ. ಹಾಗೆ ಬೇಬಿಬೆಟ್ಟದ ಪರಿಶೀಲನೆ ಕೂಡ ಮಾಡುತ್ತೇನೆ. ಎಲೆಕ್ಷನ್ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನನಗೆ ಸಪೋರ್ಟ್ ಮಾಡಿದ್ರು. ಸಂಸತ್‌ನಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಇನ್ನಷ್ಟು ಒತ್ತುಕೊಟ್ಟು ಮಾತನಾಡುತ್ತೇನೆ ಎಂದು ಸುಮಲತಾ ಭರವಸೆ ನೀಡಿದ್ದಾರೆ.

ಕೆಆರ್‌ಎಸ್ ಅಕ್ರಮದ ವಿಚಾರದ ಬಗ್ಗೆ ಮಾತನಾಡಿ, ಕೆಆರ್‌ಎಸ್ ಸುತ್ತಮುತ್ತ ಅಕ್ರಮವಾದ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಸ್ಫೋಟಕ ನಡೆಯುತ್ತಿದೆ ಅನ್ನೋದನ್ನ ತೋರಿಸಿದೆ. ನಾವು ಅಂದುಕೊಂಡಿದ್ದು ಒಂದು ಅಥವಾ ಎರಡು ಬಾರಿ ಭೂಕಂಪನ ಆಗಿರಬೇಕು ಅಂತಾ. ಆದ್ರೆ, ಹನ್ನೊಂದು ಬಾರಿ ಕಂಪನ ಆಗಿದೆ. ಬ್ಲಾಸ್ಟಿಂಗ್​ನಿಂದಾಗಿ ಫೌಂಡೇಷನ್​ನನ್ನು ತೋರಿಸೋಕೆ ಆಗಲ್ಲ. ಇಂಜಿನಿಯರ್ ಹೇಳಿದ್ದಾರೆ, ಅಧಿಕಾರಿಗಳು ಹೇಳಿದ್ದಾರೆ ಅಂತಾ ಹೇಳ್ತಾರೆ.

ಅಧಿಕಾರಿಗಳು ಕೊಡೋದು ರಿಪೋರ್ಟ್ ಅಷ್ಟೇ.. ಸರ್ಟಿಫಿಕೇಟ್ ಕೊಡೋದು ಅಧಿಕಾರಿಗಳ ಕೆಲಸ ಅಲ್ಲ. ನಮಗೆ ಸರ್ಟಿಫಿಕೇಟ್ ಬೇಕು, ಅದಕ್ಕಾಗಿ ನಾವು ಕಾಯಬೇಕು. ಕೆಆ‌ರ್‌ಎಸ್‌ನಲ್ಲಿ ಬಿರುಕು ಬಿಟ್ಟಿಲ್ಲ ಅಂದ್ರೆ ಮೊದಲು ಸಂತೋಷ ಪಡೋದು ನಾನೇ.. ಕೆಆರ್‌ಎಸ್‌ಗೆ ಯಾವುದೇ ರೀತಿಯ ಅನಾಹುತ ಆಗೋಕೆ ನಾನು ಬಿಡಲ್ಲ. ಅದು ಆಗದೇ ಇರೋ ರೀತಿ ನಾನು ಹೋರಾಟ ಮಾಡುತ್ತೇನೆ. ಅದ್ರಿಂದ ಯಾರಿಗೆ ನಷ್ಟ ಆಗುತ್ತೆ ಅನ್ನೋದು ನನ್ನ ವಿಚಾರವಲ್ಲ‌ ಅಂತಾ ಸಂಸದೆ ಸುಮಲತಾ ಖಡಕ್ ಹೇಳಿಕೆ ನೀಡಿದ್ದಾರೆ‌‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.