ETV Bharat / city

ಡಿಕೆಶಿ ಔತಣ ಕೂಟ.. ಬೆಂಗಳೂರು ಕೈ ಶಾಸಕರ ಸಭೆಗೆ ಸಿದ್ದರಾಮಯ್ಯ ಬಂದರು, ಜಮೀರ್ ಗೈರು..

author img

By

Published : Jul 16, 2021, 8:25 PM IST

ಬೆಂಗಳೂರು ಕಾಂಗ್ರೆಸ್ ಶಾಸಕರಾದ ರಾಮಲಿಂಗ ರೆಡ್ಡಿ, ರಿಜ್ವಾನ್ ಅರ್ಷದ್, ಕೆ ಜೆ ಜಾರ್ಜ್, ಭೈರತಿ ಸುರೇಶ್, ಅಖಂಡ ಶ್ರೀನಿವಾಸ್ ಮೂರ್ತಿ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಸೌಮ್ಯ ರೆಡ್ಡಿ ಸಭೆಗೆ ಆಗಮಿಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್, ಎಂಎಲ್​ಸಿ ಬಿ ಕೆ ಹರಿಪ್ರಸಾದ್ ಗೈರಾಗಿದ್ದಾರೆ..

meeting-of-bengaluru-mla-led-by-dk-shivakumar
ಡಿಕೆಶಿ ನೇತೃತ್ವದ ಬೆಂಗಳೂರು ಶಾಸಕರ ಸಭೆ

ಬೆಂಗಳೂರು : ಬಿಬಿಎಂಪಿ ಚುನಾವಣೆ ಹಾಗೂ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಸಮಾಲೋಚನೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಬೆಂಗಳೂರು ನಗರ ಶಾಸಕರ ಸಭೆ ಕರೆದಿದ್ದಾರೆ. ಸದಾಶಿವನಗರದ ಸಂಸದ ಡಿ ಕೆ ಸುರೇಶ್ ನಿವಾಸದಲ್ಲಿ ಚರ್ಚೆ ನಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಯೋಜಿಸಿರುವ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಸಭೆಯಲ್ಲಿ ಬೆಂಗಳೂರು ಕಾಂಗ್ರೆಸ್ ಶಾಸಕರು, ಹಿರಿಯ ಕಾಂಗ್ರೆಸ್ ನಾಯಕರು, ಪರಾಜಿತ ಅಭ್ಯರ್ಥಿಗಳು, ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.

ಬೆಂಗಳೂರು ಕಾಂಗ್ರೆಸ್ ಶಾಸಕರಾದ ರಾಮಲಿಂಗ ರೆಡ್ಡಿ, ರಿಜ್ವಾನ್ ಅರ್ಷದ್, ಕೆ ಜೆ ಜಾರ್ಜ್, ಭೈರತಿ ಸುರೇಶ್, ಅಖಂಡ ಶ್ರೀನಿವಾಸ್ ಮೂರ್ತಿ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಸೌಮ್ಯ ರೆಡ್ಡಿ ಸಭೆಗೆ ಆಗಮಿಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್, ಎಂಎಲ್​ಸಿ ಬಿ ಕೆ ಹರಿಪ್ರಸಾದ್ ಗೈರಾಗಿದ್ದಾರೆ.

ಉಳಿದಂತೆ ವಿಧಾನ ಪರಿಷತ್ ಸದಸ್ಯರಾದ ಎಸ್ ರವಿ, ಗೋವಿಂದರಾಜು, ನಾರಾಯಣ್ ಸ್ವಾಮಿ, ಹೆಚ್ ಎಂ ರೇವಣ್ಣ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕೈ ಹಿರಿಯ ನಾಯಕ ವೀರಪ್ಪ ಮೊಯ್ಲಿ, ಎಂಎಲ್​ಸಿ ಗೋವಿಂದರಾಜು, ಆರ್‌ಆರ್‌ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ, ಜಿ ಸಿ ಚಂದ್ರಶೇಖರ್ ಉಪಸ್ಥಿತರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.