ETV Bharat / city

'ಜನೌಷಧಿ ಕೇಂದ್ರದಿಂದ ಹೃದ್ರೋಗಿಯೊಬ್ಬರ ತಿಂಗಳ ವೈದ್ಯಕೀಯ ವೆಚ್ಚ 4,500 ರೂ.ದಿಂದ 800 ರೂ.ಗೆ ಇಳಿಕೆ'

author img

By

Published : Oct 11, 2021, 7:27 AM IST

ದೇಶದಲ್ಲಿ ಜನೌಷಧಿ ಕೇಂದ್ರಗಳು 'ಮೋದಿ ಕಾ ದವಾಯಿ ಕಿ ದುಖಾನ್'(ಮೋದಿ ಅವರ ಮೆಡಿಕಲ್ ಶಾಪ್) ಎಂದು ಹೆಸರಾಗಿವೆ. ಹೃದ್ರೋಗಿಯೊಬ್ಬರ ಪ್ರತಿ ತಿಂಗಳ ವೈದ್ಯಕೀಯ ವೆಚ್ಚ 4,500 ರೂ.ಗಳಿಂದ 800 ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಮ್ಮ ಸ್ವಂತ ಅನುಭವ ಹಂಚಿಕೊಂಡರು.

PMBJP
PMBJP

ಬೆಂಗಳೂರು: ಎಲ್ಲ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಆರಂಭಿಸಲಾಗಿದೆ. ಯಾವುದೇ ಜನರಿಕ್ ಔಷಧ ಮಳಿಗೆಗಳನ್ನು ಮುಚ್ಚುವಂತಹ ಸ್ಥಿತಿ ಬರಬಾರದೆಂಬ ಉದ್ದೇಶದಿಂದ ನಾವು ಸಹಾಯ ಧನವನ್ನು ನೀಡುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ನಗರದ ಬಸವನಗುಡಿಯ ಪ್ರಧಾನಮಂತ್ರಿ ಜನೌಷಧಿ ಯೋಜನೆ ಕಾರ್ಯಕ್ರಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಕುರಿತು ಮಾತನಾಡಿದ ಅವರು, ಎಲ್ಲ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ(ಪಿಎಂಬಿಜೆಪಿ) ಆರಂಭಿಸಲಾಯಿತು. ಈ ಯೋಜನೆಯಡಿ ಜನೌಷಧಿ ಕೇಂದ್ರಗಳ ಹೆಸರಿನಲ್ಲಿ ನಿರ್ದಿಷ್ಟ ಮಳಿಗೆಗಳನ್ನು ಆರಂಭಿಸಿ, ಜನರಿಕ್ ಔಷಧಗಳನ್ನು ಒದಗಿಸಲಾಗುತ್ತಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಜನೌಷಧಿ ಕೇಂದ್ರ ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು ಎಂದರು.

ಜನೌಷಧಿ ಕೇಂದ್ರಗಳು ಹೇಗೆ ವ್ಯಾಪಾರದ ಅವಕಾಶ ಮತ್ತು ಜನತೆಗೆ ಸೇವೆ ಸಲ್ಲಿಸುವ ಸಾಧನವಾಗಿದೆ ಎಂಬುದನ್ನು ವಿವರಿಸಿದ ಸಚಿವರು, 'ಜನೌಷಧಿ ಕೇಂದ್ರಗಳನ್ನು ಆರಂಭಿಸುವ ಮೂಲಕ ನಮ್ಮ ದೇಶದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ದೊರಕಲಿದೆ. ಕೇಂದ್ರ ಸರ್ಕಾರ 3 ಲಕ್ಷ ರೂಪಾಯಿ ಸಹಾಯಧನ ನೀಡುವ ಜೊತೆಗೆ ಹೆಚ್ಚುವರಿಯಾಗಿ ಶೇ.20ರಷ್ಟು ಕಮಿಷನ್ ನೀಡುವ ಮೂಲಕ ಹೂಡಿಕೆದಾರರಿಗೆ ಕಾರ್ಯಸಾಧುವಾದ ವ್ಯಾಪಾರ ಅವಕಾಶವನ್ನು ಒದಗಿಸಿದೆ. ಬ್ರಾಂಡೆಡ್ ಔಷಧಗಳನ್ನು ಮಾರಾಟ ಮಾಡುವ ಫಾರ್ಮಸಿಗಳಿಗೆ ಹೋಲಿಸಿದರೆ ಕಡಿಮೆ ಲಾಭದಲ್ಲಿ ಕಡಿಮೆ ದರದ ಜನರಿಕ್ ಔಷಧಗಳನ್ನು ಮಾರಾಟ ಮಾಡಲು ಅಗತ್ಯ ಪರಿಹಾರದ ಸಹಾಯವನ್ನು ಸರ್ಕಾರದಿಂದ ನೀಡಲಾಗುತ್ತಿದೆ' ಎಂದರು.

ಯಾವುದೇ ಜನರಿಕ್ ಔಷಧ ಮಳಿಗೆಗಳನ್ನು ಮುಚ್ಚುವಂತಹ ಸ್ಥಿತಿ ಬರಬಾರದೆಂಬ ಉದ್ದೇಶದಿಂದ ನಾವು ಸಹಾಯಧನವನ್ನು ನೀಡುತ್ತಿದ್ದೇವೆ. ಪಿಎಂಬಿಜೆಪಿ ಬಡವರ ಪರ, ರೈತರ ಪರ ಮತ್ತು ವ್ಯಾಪಾರಿಗಳ ಪರ ಯೋಜನೆಯಾಗಿದೆ. ಬಡಜನರಿಗೆ ನೆರವು ನೀಡುವುದು ನಮ್ಮ ಆದ್ಯತೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಜನೌಷಧಿ ಕೇಂದ್ರಗಳು ವರವಾಗಿವೆ. ದೇಶದಲ್ಲಿ ಜನೌಷಧಿ ಕೇಂದ್ರಗಳು 'ಮೋದಿ ಕಾ ದವಾಯಿ ಕಿ ದುಖಾನ್'(ಮೋದಿ ಅವರ ಮೆಡಿಕಲ್ ಶಾಪ್) ಎಂದು ಹೆಸರಾಗಿವೆ ಎಂದು ತಿಳಿಸಿದರು.

ಹೃದ್ರೋಗಿಯೊಬ್ಬರ ಪ್ರತಿ ತಿಂಗಳ ವೈದ್ಯಕೀಯ ವೆಚ್ಚ 4,500 ರೂ.ಗಳಿಂದ 800 ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು. ಜನೌಷಧಿ ಕೇಂದ್ರಗಳು ಮನುಕುಲಕ್ಕೆ ಸಲ್ಲಿಸುವ ಸೇವೆಯಾಗಿದೆ. 'ದಾನ ನೀಡುವುದರಿಂದ ಮಾತ್ರ ಜನತೆಗೆ ಸೇವೆ ಸಲ್ಲಿಸಿದಂತಾಗುವುದಿಲ್ಲ, ಅವರ ವೆಚ್ಚ ತಗ್ಗಿಸಲು ಸಹಾಯ ಮಾಡುವುದು ಕೂಡ ಒಂದು ಬಗೆಯ ಸೇವೆಯಾಗಿದೆ' ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.