ETV Bharat / city

ಮಾಧ್ಯಮಗಳು ಕಳ್ಳ ಮೂಲಗಳನ್ನು ನಂಬಿ ಸುದ್ದಿ ಬಿತ್ತರಿಸುತ್ತಿವೆ:  ಶಾಸಕ ರಾಜು ಗೌಡ - ಕರ್ನಾಟಕ ರಾಜಕೀಯ ಸುದ್ದಿ

ರಾಜ್ಯಸಭಾ ಅಭ್ಯರ್ಥಿ ಅಶೋಕ್ ಗಸ್ತಿ ಬಗ್ಗೆ ಮಾತನಾಡಿದ ಅವರು, ಗಸ್ತಿ ಅವರು ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ. ಅವರು ಪಕ್ಷದ ಸಂಘಟನೆಗೆ ತುಂಬಾ ವರ್ಷಗಳಿಂದ ಕೆಲಸ ಮಾಡಿದ್ದಾರೆ ಎಂದು ಶಾಸಕ ರಾಜು ಗೌಡ ತಿಳಿಸಿದ್ದಾರೆ.

Raju Gowda
ಶಾಸಕ ರಾಜು ಗೌಡ
author img

By

Published : Jun 9, 2020, 5:41 PM IST

ಬೆಂಗಳೂರು: ಮಾಧ್ಯಮದವರು ಊಟಕ್ಕೆ ಕರೆದರೂ ನಾವು ಬರುತ್ತೇವೆ. ಮಾಧ್ಯಮಗಳು ಕಳ್ಳ ಮೂಲಗಳನ್ನು ನಂಬಿ ಸುದ್ದಿ ಬಿತ್ತರಿಸುತ್ತಿವೆ ಎಂದು ಶಾಸಕ ರಾಜು ಗೌಡ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಸಭಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಬಂದ ಸಂದರ್ಭದಲ್ಲಿ ಮಾತನಾಡಿದ ಅವರು, ರಹಸ್ಯ ಔತಣಕೂಟದ ಬಗ್ಗೆ ಬಂದ ಆರೋಪಗಳನ್ನು ತಳ್ಳಿಹಾಕಿದರು.

ಶಾಸಕ ರಾಜು ಗೌಡ

ರಾಜ್ಯಸಭಾ ಅಭ್ಯರ್ಥಿ ಅಶೋಕ್ ಗಸ್ತಿ ಬಗ್ಗೆ ಮಾತನಾಡಿದ ಅವರು, ಗಸ್ತಿ ಅವರು ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ. ಅವರು ಪಕ್ಷದ ಸಂಘಟನೆಗೆ ತುಂಬಾ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್​ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ. ಇದು ಬಿಜೆಪಿ ಬಿಟ್ಟು ಬೇರಾವ ಪಕ್ಷದಿಂದಲೂ ಸಾಧ್ಯವಿಲ್ಲ. ಅಶೋಕ್ ಗಸ್ತಿ ಅವರು ಕನಸಿನಲ್ಲೂ ಇದನ್ನು ಯೋಚನೆ ಮಾಡಿರಲಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.