ಬೆಂಗಳೂರು : ಫೆಬ್ರವರಿ 3ರಿಂದ 7ರವರೆಗೆ ಏರ್ ಶೋ 2021 ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಏರ್ ಫೋರ್ಸ್ ಸ್ಟೇಷನ್ ಸುತ್ತಮುತ್ತಲಿನ 10 ಕಿಲೋ ಮೀಟರ್ ಪ್ರದೇಶದಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್ ಶೋ 2021 ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಫೆಬ್ರವರಿ 3ರಿಂದ 7ರವರೆಗೆ ಏರ್ ಶೋ-2021 ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಜನವರಿ 17 ರಿಂದ ಫೆಬ್ರವರಿ 9ರವರೆಗೆ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಸುತ್ತಮುತ್ತಲಿನ 10ಕಿಲೋ ಮೀಟರ್ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನ ಬಂದ್ ಮಾಡಬೇಕು ಹಾಗೂ ಹೊಟೇಲ್- ಡಾಬಾಗಳಲ್ಲಿ ಮಾಂಸಹಾರಿ ಪದಾರ್ಥಗಳನ್ನ ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಿ ಬಿಬಿಎಂಪಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಓದಿ:ಸಿ.ಪಿ.ಯೋಗೇಶ್ವರ್ 'ಆಪರೇಷನ್ ಕಮಲ' ಮಾಡಲು ಶ್ರಮ ವಹಿಸಿದ್ದಾರೆ: ಎಂಟಿಬಿ ನಾಗರಾಜ್
ಅಲ್ಲದೆ, ಈ ಆಜ್ಞೆಯನ್ನ ಉಲ್ಲಂಘಿಸಿದಲ್ಲಿ ಕೆಎಂಸಿ ಕಾಯ್ದೆ 1976ರ ಸೆಕ್ಷನ್ 2(22) ಹಾಗೂ ಸೆಕ್ಷನ್ 353(5) ರಂತೆ ಮತ್ತು ಭಾರತೀಯ ಏರ್‌ಕ್ರಾಫ್ಟ್ ರೂಲ್ಸ್ 1937ರ 91 ರೀತಿ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.