ETV Bharat / city

ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ

ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ರಷ್ಯನ್‌ ಭಾಷೆ ಗೊತ್ತಿರುವ ರಾಜತಾಂತ್ರಿಕರನ್ನು ಕಳುಹಿಸಿದ್ದೇವೆ. ಕರ್ನಾಟದ 200ಕ್ಕೂ ಹೆಚ್ಚು ಜನರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳೊಂದಿಗೆ ನಾನು ಫೋನ್‌ನಲ್ಲಿ ಮಾತನಾಡಿದ್ದೇನೆ. ಕೆಲ ವಿದ್ಯಾರ್ಥಿಗಳ ಪಾಲಕರು ಬಂದು ಭೇಟಿ ಮಾಡಿದ್ದರು..

measures taken for Karnataka people who stuck in Ukraine: CM Bommai
ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಕ್ರಮ: ಸಿಎಂ ಬೊಮ್ಮಾಯಿ
author img

By

Published : Feb 26, 2022, 4:50 PM IST

Updated : Feb 26, 2022, 5:57 PM IST

ಬೆಂಗಳೂರು : ರಷ್ಯಾ ಮತ್ತು ಉಕ್ರೇನ್​​​ನ ಹಲವು ನಗರಗಳಲ್ಲಿ ಬಹಳಷ್ಟು ಭಾರತೀಯರು ಸಿಲುಕಿದ್ದಾರೆ. ಅವರಿಗೆ ಏನೂ ಆಗಿಲ್ಲ. ಆದರೆ, ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉಕ್ರೇನ್, ರಷ್ಯಾ ಯುದ್ಧದಲ್ಲಿ ಹಲವರು ಕನ್ನಡಿಗರು ಸಿಕ್ಕಿಕೊಂಡಿದ್ದಾರೆ. ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರ ಜತೆ ಮಾತನಾಡಿದ್ದೇನೆ. ಅವರಿಗೆ ನಮ್ಮವರ ಒಂದು ಲಿಸ್ಟ್ ಕಳಿಸಿಕೊಟ್ಟಿದ್ದೇವೆ ಎಂದು ಹೇಳಿದರು.

ನಮ್ಮ ಹೆಚ್ಚಿನ ವಿದ್ಯಾರ್ಥಿಗಳು ಪಶ್ಚಿಮ ಭಾಗದಲ್ಲಿದ್ದಾರೆ.‌ ಅವರನ್ನು ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದೆ.‌ ಶೀಘ್ರದಲ್ಲೇ ರಸ್ತೆ ಮಾರ್ಗ ಮತ್ತು ವಾಯು ಮಾರ್ಗದ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತೇವೆ.‌ ನಾನೂ ಕೂಡ ಕೆಲವು ವಿದ್ಯಾರ್ಥಿಗಳ ಜತೆ ಮಾತಾಡಿದ್ದೇನೆ. ಅವರಿಗೆ ಎಲ್ಲ ರೀತಿಯ ಧೈರ್ಯ ಹೇಳಿದ್ದೇನೆ ಎಂದು ಸಿಎಂ ವಿವರಿಸಿದ್ದಾರೆ.

ಇವತ್ತು ಭಾರತಕ್ಕೆ ಬರುತ್ತಿರುವವರಲ್ಲಿ ಕನ್ನಡಿಗರು ಇದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇವೆ. ಅವರೆಲ್ಲಾ ಭಾರತಕ್ಕೆ ಬಂದ ಮೇಲೆ ರಾಜ್ಯದವರು ಇದ್ದರೆ ಅವರನ್ನು ಅವರವರ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡ್ತೇವೆ.

ಉಕ್ರೇನಿನ ಪಶ್ಚಿಮ ಭಾಗದಲ್ಲಿರುವವರು ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ರಸ್ತೆ ಮಾರ್ಗದ ಮೂಲಕ ಅವರನ್ನು ಕರೆಸಿಕೊಳ್ಳುತ್ತೇವೆ. ಈಗಾಗಲೇ ಕೆಲವರು ಬರುತ್ತಿದ್ದಾರೆ ಎಂದರು.

'ಕೆಲವೇ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಕರೆ ತರುತ್ತೇವೆ' : ಉಕ್ರೇನ್ ವೆಸ್ಟರ್ನ್‌ ಭಾಗದಲ್ಲಿರುವವರನ್ನು ರೂಮೇನಿಯಾ ಮೂಲಕ ಕರೆತರುತ್ತೇವೆ. ಕೆಲವೇ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಕರೆತರುತ್ತೇವೆ. ಈಸ್ಟರ್ನ್, ಸೌಥ್ ಈಸ್ಟರ್ನ್ ಭಾಗದಲ್ಲಿ ಸಿಲುಕಿದವರು ಅಪಾಯ ತೆಗೆದುಕೊಳ್ಳದೇ ಅಲ್ಲಿಯೇ ಇರಬೇಕು.

ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ರಷ್ಯನ್‌ ಭಾಷೆ ಗೊತ್ತಿರುವ ರಾಜತಾಂತ್ರಿಕರನ್ನು ಕಳುಹಿಸಿದ್ದೇವೆ. ಕರ್ನಾಟದ 200ಕ್ಕೂ ಹೆಚ್ಚು ಜನರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳೊಂದಿಗೆ ನಾನು ಫೋನ್‌ನಲ್ಲಿ ಮಾತನಾಡಿದ್ದೇನೆ. ಕೆಲ ವಿದ್ಯಾರ್ಥಿಗಳ ಪಾಲಕರು ಬಂದು ಭೇಟಿ ಮಾಡಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: ರೊಮೇನಿಯಾ ಗಡಿಯಲ್ಲಿ ಸಿಲುಕಿದ ಭಾರತೀಯರು.. ಉಕ್ರೇನ್​ನಲ್ಲಿರಲಾಗ್ತಿಲ್ಲ, ಸ್ವದೇಶಕ್ಕೆ ಬರಲಾಗದೇ ಅತಂತ್ರ, ಅಭದ್ರತೆಯ ಆತಂಕ..

Last Updated : Feb 26, 2022, 5:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.