ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಎಂ.ಬಿ ಪಾಟೀಲ್ ಪ್ರತ್ಯೇಕ ಸಭೆ ನಡೆಸಿ ಅಧಿವೇಶನದಲ್ಲಿ ಕಾಂಗ್ರೆಸ್ ನಡೆಸಬೇಕಿರುವ ಹೋರಾಟದ ಕುರಿತು ಚರ್ಚಿಸಿದರು.
ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ ಬಿ ಪಾಟೀಲ್ ಕೆಲಕಾಲ ರಾಜಕೀಯ ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಅಧಿವೇಶನದಲ್ಲಿ ಕಾಂಗ್ರೆಸ್ ನಡೆಸಲಿರುವ ಹೋರಾಟದ ಕುರಿತು ಸಮಾಲೋಚನೆ ನಡೆಸಿದರು.
ಕಲಾಪ ಆರಂಭಗೊಂಡು ಒಂದು ವಾರ ಮುಗಿದಿದೆ. ಇನ್ನೈದು ದಿನ ಮಾತ್ರ ಕಲಾಪ ನಡೆಯಲಿದೆ. ಅದರಲ್ಲಿ ಪ್ರಮುಖ ವಿಧೇಯಕಗಳ ಮಂಡನೆಯಾಗಲಿದೆ.
ಉತ್ತರ ಕರ್ನಾಟಕ ವಿಷಯಗಳ ಕುರಿತು ಚರ್ಚೆ ನಡೆಯಬೇಕಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಹೆಚ್‌ಡಿಕೆ ಗೈರು ; ದಳಪತಿಗೆ ಬೆಳಗಾವಿ ಅಧಿವೇಶನ ಬಗ್ಗೆ ನಿರಾಸಕ್ತಿನಾ?