ಬೆಂಗಳೂರು: ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ ಮೇಯರ್ ಮತ್ತು ಉಪ ಮೇಯರ್ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ರಾಜ್ಯ ಸರ್ಕಾರ ಜನವರಿ 21, 2021 ರಂದು ಮೀಸಲಾತಿ ನಿಗದಿಪಡಿಸುವ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು. ಇಂದು ಅಧಿಕೃತ ಆದೇಶ ಪ್ರಕಟಿಸುವ ಮೂಲಕ 10 ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಚುನಾವಣೆಗೆ ಅವಕಾಶ ಕಲ್ಪಿಸಿದೆ.
ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ:
ಬಳ್ಳಾರಿ: ಮೇಯರ್ – ಸಾಮಾನ್ಯ ವರ್ಗ, ಉಪ ಮೇಯರ್ - ಹಿಂದುಳಿದ ವರ್ಗದ ಮಹಿಳೆ
ಬೆಳಗಾವಿ: ಮೇಯರ್ -ಸಾಮಾನ್ಯ ವರ್ಗ, ಉಪ ಮೇಯರ್ – ಸಾಮಾನ್ಯ ವರ್ಗ ಮಹಿಳೆ
ದಾವಣಗೆರೆ: ಮೇಯರ್-ಪರಿಶಿಷ್ಟ ಜಾತಿ ಮಹಿಳೆ, ಉಪ ಮೇಯರ್ - ಸಾಮಾನ್ಯ ವರ್ಗದ ಮಹಿಳೆ
ಹುಬ್ಬಳ್ಳಿ-ಧಾರವಾಡ: ಮೇಯರ್ - ಹಿಂದುಳಿದ ವರ್ಗ-ಎ, ಉಪ ಮೇಯರ್ - ಪರಿಶಿಷ್ಟ ಜಾತಿ ಮಹಿಳೆ
ಕಲಬುರಗಿ: ಮೇಯರ್-ಸಾಮಾನ್ಯ ವರ್ಗದ ಮಹಿಳೆ, ಉಪ ಮೇಯರ್ ಹಿಂದುಳಿದ ವರ್ಗ-ಬಿ
ಮಂಗಳೂರು: ಮೇಯರ್-ಸಾಮಾನ್ಯ ವರ್ಗದ, ಉಪ ಮೇಯರ್- ಹಿಂದುಳಿದ ವರ್ಗ-ಎ ಮಹಿಳೆ
ಮೈಸೂರು: ಮೇಯರ್-ಸಾಮಾನ್ಯ ವರ್ಗದ ಮಹಿಳೆ, ಉಪ ಮೇಯರ್ - ಸಾಮಾನ್ಯ
ಶಿವಮೊಗ್ಗ: ಮೇಯರ್ ಹಿಂದುಳಿದ ವರ್ಗದ-ಎ ಮಹಿಳೆ, ಉಪ ಮೇಯರ್ - ಸಾಮಾನ್ಯ ವರ್ಗ
ತುಮಕೂರು: ಮೇಯರ್ - ಪರಿಶಿಷ್ಟ ಜಾತಿ, ಉಪ ಮೇಯರ್- ಸಾಮಾನ್ಯ ವರ್ಗ ಮಹಿಳೆ
ವಿಜಯಪುರ: ಮೇಯರ್ - ಸಾಮಾನ್ಯ ವರ್ಗ, ಉಪ ಮೇಯರ್- ಹಿಂದುಳಿದ ವರ್ಗ-ಎ