ETV Bharat / city

ಕೋವಿಡ್ ರೋಗಿಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದ ಆಸ್ಪತ್ರೆ.. ಮರುಪಾವತಿಗೆ ಬಿಬಿಎಂಪಿ ಸೂಚನೆ - ಕೋವಿಡ್​ ರೋಗಿಗಳಿಗೆ ಮಣಿಪಾಲ್​ ಆಸ್ಪತ್ರೆ ದೋಖಾ

ಪಾಲಿಕೆಯ ವಿಶೇಷ ಆಯುಕ್ತರ(ಆರೋಗ್ಯ) ನಿರ್ದೇಶನದ ಮೇರೆಗೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಯಲಹಂಕ ವಲಯ ಆರೋಗ್ಯಾಧಿಕಾರಿಗಳ ತಂಡ ಸರ್ಕಾರ ನಿಗದಿಪಡಿಸಿರುವ ದರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿದಾಗ ಹೆಚ್ಚುವರಿಯಾಗಿ ಬಿಲ್ ಪಡೆದಿರುವುದು ಖಾತರಿಯಾಗಿದೆ.

manipal hospital
ಮಣಿಪಾಲ್​ ಆಸ್ಪತ್ರೆ
author img

By

Published : Dec 29, 2021, 11:00 PM IST

ಬೆಂಗಳೂರು: ರಾಜ್ಯ ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಹೆಚ್ಚಿನ ದರವನ್ನು ಮಣಿಪಾಲ್ ಆಸ್ಪತ್ರೆ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಯಲಹಂಕ ವಲಯ ಆರೋಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ ಭೇಟಿ ನೀಡಿ ಪರಿಶೀಲಿದಾಗ ಮೂವರು ಕೋವಿಡ್ ಸೋಂಕಿತರಿಂದ ಹೆಚ್ಚಿನ ಹಣ ಸಂದಾಯ ಮಾಡಿಕೊಂಡಿರುವು ಗೊತ್ತಾಗಿದೆ. ಬಳಿಕ ಹೆಚ್ಚುವರಿ ಹಣವನ್ನು ರೋಗಿಗಳಿಗೆ ಶೀಘ್ರವೇ ಮರುಪಾವತಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಕೋವಿಡ್ ರೋಗಿಗಳಿಂದ ಮಾಹಿತಿ ಹೆಚ್ಚಿನ ಹಣದ ಪಡೆದ ಪಟ್ಟಿ
ಕೋವಿಡ್ ರೋಗಿಗಳಿಂದ ಮಾಹಿತಿ ಹೆಚ್ಚಿನ ಹಣದ ಪಡೆದ ಪಟ್ಟಿ

ಪಾಲಿಕೆಯ ವಿಶೇಷ ಆಯುಕ್ತರ(ಆರೋಗ್ಯ) ನಿರ್ದೇಶನದ ಮೇರೆಗೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಯಲಹಂಕ ವಲಯ ಆರೋಗ್ಯಾಧಿಕಾರಿಗಳ ತಂಡ ಸರ್ಕಾರ ನಿಗದಿಪಡಿಸಿರುವ ದರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿದಾಗ ಹೆಚ್ಚುವರಿಯಾಗಿ ಬಿಲ್ ಪಡೆದಿರುವುದು ಖಾತರಿಯಾಗಿದೆ.

ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುವುದು ಕಾನೂನು ಬಾಹಿರವಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ ನಿಗದಿಪಡಿಸಿರುವ ಹಣಕ್ಕಿಂತಲೂ ಹೆಚ್ಚು ಹಣ ಪಡೆಯದಂತೆ ಆಸ್ಪತ್ರೆಯ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರಿಗೂ ಸರ್ಕಾರ ನಿಗದಿಪಡಿಸಿರುವ ಬಗ್ಗೆ ಮಾಹಿತಿ ನೀಡಿ ಅದಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕು. ಈ ಪೈಕಿ ಒಂದು ವಲಯದಲ್ಲಿ ಉತ್ತಮ ಕೆಲಸ ಆರಂಭವಾಗಿದ್ದು, ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ಸಂಬಂಧ ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಎಲ್ಲ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ದರಗಳು ಈ ಕೆಳಗಿನಂತಿವೆ

  • ಜನರಲ್ ವಾರ್ಡ್: 10,000 ರೂಪಾಯಿ
  • ಹೆಚ್‌ಡಿಯು: 12,000 ರೂಪಾಯಿ
  • ಐಸೋಲೇಷನ್ ಐಸಿಯು(ವೆಂಟಿಲೇಟರ್ ರಹಿತ) : 15,000 ರೂಪಾಯಿ
  • ಐಸೋಲೇಷನ್ ಐಸಿಯು(ವೆಂಟಿಲೇಟರ್ ಸಹಿತ) : 25,000 ರೂಪಾಯಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.