ETV Bharat / city

ಮಂಗಳೂರು ಗಲಭೆ ಪ್ರಕರಣ ಸಿಐಡಿ ತನಿಖೆಗೆ: ಸಿಎಂ ಬಿಎಸ್​ವೈ

ಮಂಗಳೂರು ಹಿಂಸಾಚಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

Mangalore riot case  CID to investigate
ಮಂಗಳೂರು ಗಲಭೆ ಪ್ರಕರಣ ಸಿಐಡಿ ತನಿಖೆಗೆ: ಸಿಎಂ ಬಿಎಸ್​ವೈ
author img

By

Published : Dec 23, 2019, 11:27 AM IST

ಬೆಂಗಳೂರು: ಮಂಗಳೂರು ಗಲಭೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಮಂಗಳೂರು ಹಿಂಸಾಚಾರ ಪ್ರಕರಣ ತನಿಖೆ ಸಿಐಡಿ ಹೆಗಲಿಗೆ

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈಗಾಗಲೇ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಇನ್ನಾದರು ಮಂಗಳೂರು ಶಾಂತವಾಗಿರುತ್ತೆ ಎಂದು ಭಾವಿಸಿದ್ದೇನೆ. ಸದ್ಯ ಮಂಗಳೂರು ಘಟನೆಯ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದರು.

ಸಿಎಎ ಕಾನೂನಿನಿಂದ ಅಲ್ಪಸಂಖ್ಯಾತರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಈ ದೇಶದ ಯಾವೊಬ್ಬ ಅಲ್ಪ ಸಂಖ್ಯಾತನಿಗೂ ತೊಂದರೆ ಆಗಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ಇಷ್ಟಾದರೂ ಕೂಡ ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ನ ಷಡ್ಯಂತ್ರ, ಪಿತೂರಿಯಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ರು.

Intro:

ಬೆಂಗಳೂರು: ಮಂಗಳೂರು ಗಲಭೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರಿಗೆ ಕಠಿಣ ಕ್ರಮ ಆಗಬೇಕು. ಈಗಾಗಲೇ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಇನ್ನಾದ್ರು ಮಂಗಳೂರು ಶಾಂತವಾಗಿರುತ್ತೆ ಎಂದು ಭಾವಿಸಿದ್ದೇನೆ,ಸದ್ಯ ಮಂಗಳೂರು ಘಟನೆಯನ್ನು ತನಿಖೆ ನಡೆಸಲು ಸಿಐಡಿಗೆ ಕೊಡಲಾಗಿದೆ ಎಂದರು.

ಸಿಎಎ ಕಾನೂನಿನಿಂದ ಅಲ್ಪಸಂಖ್ಯಾತರ ಬಗ್ಗೆ ಯಾವ ರೀತಿ ಸಮಸ್ಯೆ ಆಗುತ್ತದೆ ಎಂದು ಯಾರು ಹೇಳುತ್ತಿಲ್ಲ. ಈಗಾಗಲೇ ಈ ದೇಶದ ಯಾವೊಬ್ಬ ಅಲ್ಪ ಸಂಖ್ಯಾತನಿಗೂ ತೊಂದರೆ ಆಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ಕೊಟ್ಟಿದ್ದಾರೆ. ಇಷ್ಟಾದರೂ ಕೂಡ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ನ ಷಡ್ಯಂತ್ರ, ಪಿತೂರಿಯಿಂದ ಗೊಂದಲ ಸೃಷ್ಠಿಯಾಗುತ್ತಿದೆ ಈ ಬಗ್ಗೆ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.