ETV Bharat / city

ಚಿಲ್ಲರೆ ಅಂಗಡಿ ವ್ಯಾಪಾರದಲ್ಲಿ ಮಾಲೀಕರ ಕಿತ್ತಾಟ: ವ್ಯಕ್ತಿಯ ಕಾಲು ಕತ್ತರಿಸಿ, ಮಾರಣಾಂತಿಕ ಹಲ್ಲೆ

ಚಿಲ್ಲರೆ ಅಂಗಡಿ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕಾಲು ಕತ್ತರಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru crime news, Bengaluru grocery shop issue, ಬೆಂಗಳೂರಿನಲ್ಲಿ ಜಗಳದಲ್ಲಿ ವ್ಯಕ್ತಿಯ ಕಾಲು ಕಟ್​, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ದಿನಸಿ ಅಂಗಡಿ ಸಮಸ್ಯೆ,
ಜಗಳದಲ್ಲಿ ವ್ಯಕ್ತಿಯ ಕಾಲು ಕತ್ತರಿಸಿ, ಮರಾಣಾಂತಿಕ ಹಲ್ಲೆ
author img

By

Published : May 19, 2022, 10:17 AM IST

ನೆಲಮಂಗಲ: ಚಿಲ್ಲರೆ ಅಂಗಡಿಯ ಇಬ್ಬರು ಮಾಲೀಕರು ಪರಸ್ಪರ ಹೊಡೆದಾಡಿಕೊಂಡಿದ್ದು, ಮಾಲೀಕನೊಬ್ಬ ಕಾಲು ಕಳೆದುಕೊಂಡಿದ್ದಾನೆ. ನೆಲಮಂಗಲ ತಾಲೂಕಿನ ಹಾಲೇನಹಳ್ಳಿಯಲ್ಲಿ ಘಟನೆ ನಡೆದಿದೆ.

Bengaluru crime news, Bengaluru grocery shop issue, ಬೆಂಗಳೂರಿನಲ್ಲಿ ಜಗಳದಲ್ಲಿ ವ್ಯಕ್ತಿಯ ಕಾಲು ಕಟ್​, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ದಿನಸಿ ಅಂಗಡಿ ಸಮಸ್ಯೆ,
ಜಗಳದಲ್ಲಿ ವ್ಯಕ್ತಿಯ ಕಾಲು ಕತ್ತರಿಸಿದ ಆರೋಪಿ ಜಯರಾಮು

ವಿವರ: ಹಾಲೇನಹಳ್ಳಿ ಗ್ರಾಮದ ನಿವಾಸಿ, ಹಲ್ಲೆಗೊಳಗಾದ ಮೃತ್ಯುಂಜಯ ಹಾಗೂ ಹಲ್ಲೆ ಮಾಡಿದ ಆರೋಪಿ ಜಯರಾಮು ಒಂದೇ ಗ್ರಾಮದವರು. ಕೆಲವು ದಿನಗಳ ಹಿಂದೆ ಮೃತ್ಯುಂಜಯನ ತಮ್ಮ ಕೃಷ್ಣಮೂರ್ತಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ತಮ್ಮನ ಜೀವನಕ್ಕೆ ಆಧಾರವಾಗಲೆಂದು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಹಾಕಿಕೊಟ್ಟಿದ್ದರು.

ಜಗಳದಲ್ಲಿ ಕಾಲು ಕಳೆದುಕೊಂಡ ಮೃತ್ಯುಂಜಯ

ಇದನ್ನೂ ಓದಿ: ನೆಲಮಂಗಲದಲ್ಲಿ ಬಾಯ್ಲರ್​​​ ಸ್ವಚ್ಛ ಮಾಡುವಾಗ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ಗ್ರಾಮದಲ್ಲಿ ಈಗಾಗಲೇ ಚಿಲ್ಲರೆ ಅಂಗಡಿ ಇದೆ. ಮೃತ್ಯುಂಜಯನ ಅಂಗಡಿಯಿಂದ ಜಯರಾಮುವಿನ ಅಂಗಡಿ ವ್ಯಾಪಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಎರಡು ಅಂಗಡಿ ಮಾಲೀಕರು ಪೈಪೋಟಿಗಿಳಿದಿದ್ದಾರೆ. ಇಬ್ಬರ ನಡುವೆ ಜಗಳವೂ ನಡೆಯುತ್ತಿತ್ತು. ಈ ಸಂಘರ್ಷ ವಿಕೋಪಕ್ಕೆ ತಿರುಗಿ ಮೃತ್ಯುಂಜಯ ಕಾಲನ್ನು ಜಯರಾಮು ಕತ್ತರಿಸಿದ್ದಾನೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.