ಬೆಂಗಳೂರು: ವಾಟರ್ ಟ್ಯಾಂಕರ್ ಹರಿದು ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೆಚ್.ಎಸ್.ಆರ್ ಲೇಔಟ್ನ 27ನೇ ಮುಖ್ಯ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹೆಚ್.ಎಸ್.ಆರ್ ಲೇಔಟ್ ಬಳಿ ವಾಟರ್ ಟ್ಯಾಂಕರ್‌ವೊಂದರ ಪಕ್ಕದಲ್ಲೇ ಬೈಕ್ ಸವಾರ ಹೋಗುತ್ತಿದ್ದ. ಈ ವೇಳೆ ಟ್ಯಾಂಕರ್ ಚಾಲಕ ದಿಢೀರ್ ಆಗಿ ವಾಹನವನ್ನು ಎಡಕ್ಕೆ ತಿರುಗಿಸಿದ್ದಾನೆ. ಪರಿಣಾಮ, ಬೈಕ್ಗೆ ಟ್ಯಾಂಕರ್ ಗುದ್ದಿದ್ದು, ಬೈಕ್ ಫುಟ್ಪಾತ್ನ ಬದಿಗೆ ತಾಗಿತು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಸವಾರ ರಸ್ತೆಯ ಬಲಭಾಗಕ್ಕೆ ಬಿದ್ದಿದ್ದಾನೆ. ಟ್ಯಾಂಕರ್ ಚಕ್ರದಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್: ಪತ್ನಿ ಸ್ಥಳದಲ್ಲೇ ಸಾವು, ಪತಿ-ಮಗುವಿಗೆ ಗಾಯ