ETV Bharat / city

ಗೋಪಾಲಯ್ಯ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ - ಅಭ್ಯರ್ಥಿ ಶಿವರಾಜ್ ಚುನಾವಣಾ ಪ್ರಚಾರ

ಉಪ ಚುನಾವಣೆ ಬಹಿರಂಗ ಪ್ರಚಾರ ನಾಳೆಗೆ ಅಂತ್ಯವಾಗಲಿದ್ದು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಚುನಾವಣಾ ಕಣ ರಂಗೇರಿದೆ.‌ ಕೊನೆ ಹಂತದಲ್ಲಿ ಮತದಾರರನ್ನ ಸೆಳೆಯಲು ಕೈ ಅಭ್ಯರ್ಥಿ ಶಿವರಾಜ್​ರಿಂದ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.

ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಪ್ರಚಾರ
ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಪ್ರಚಾರ
author img

By

Published : Dec 2, 2019, 9:34 PM IST

ಬೆಂಗಳೂರು: ಉಪ ಚುನಾವಣೆ ಬಹಿರಂಗ ಪ್ರಚಾರ ನಾಳೆಗೆ ಅಂತ್ಯವಾಗಲಿದ್ದು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಚುನಾವಣಾ ಕಣ ರಂಗೇರಿದೆ.‌ ಕೊನೆ ಹಂತದಲ್ಲಿ ಮತದಾರರನ್ನ ಸೆಳೆಯಲು ಕೈ ಅಭ್ಯರ್ಥಿ ಶಿವರಾಜ್​ರಿಂದ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.

ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ

ಕುರುಬರಹಳ್ಳಿಯ ಜೆ.ಸಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಹೆಚ್.ಎಂ.ರೇವಣ್ಣ, ಈಶ್ವರ್ ಖಂಡ್ರೆ ಸೇರಿದಂತೆ ಇತರರು ಭಾಗಿಯಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಚುನಾವಣೆ ಯಾವ ಕಾರಣಕ್ಕೆ ಬಂತು ಅಂತ ನಿಮಗೆ ಗೊತ್ತಿದೆ. ಗೋಪಾಲಯ್ಯ ಜೆಡಿಎಸ್​​ನಿಂದ ಗೆದ್ದಿದ್ದರು. ಜಾತ್ಯಾತೀತವಾಗಿ ಕೆಲಸ ಮಾಡ್ತೀನಿ‌ ಅಂತ ಮತ ಕೇಳಿ ಗೆದ್ದಿದ್ರು‌. ಆದ್ರೆ ಈಗ ಅದೆಲ್ಲವನ್ನು ಗಾಳಿಗೆ ತೂರಿ ಅಧಿಕಾರದ ಆಸೆಯಿಂದ, ಐಟಿ, ಇಡಿ ಭಯದಿಂದ ಪಕ್ಷಾಂತರಗೊಂಡಿದ್ದಾರೆ ಎಂದರು.

ನಾವು ಜೆಡಿಎಸ್ ಸೇರಿ 14 ತಿಂಗಳು ರಾಜ್ಯಭಾರ ಮಾಡಿದ್ವಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಸಾಕಷ್ಟು ಹಣವನ್ನು ಪಕ್ಷಭೇದವಿಲ್ಲದೆ ಕೊಟ್ಟಿದ್ದಾರೆ. ಆ ಹಣದಿಂದ ಅಭಿವೃದ್ಧಿ ಮಾಡಿದ್ದಾರೆಯೇ ವಿನಾ ಬೇರೆ ಏನೂ ಇಲ್ಲ ಅಂತ ಹೇಳಿದರು.

ಇನ್ನು ಗೋಪಾಲಯ್ಯ ಒಂದು ಕಡೆ ನಾನೇ ಅಭಿವೃದ್ಧಿ ಮಾಡಿದ್ದೀನಿ ಅಂತಾರೆ. ಇನ್ನೋಂದು ಕಡೆ ಈ ಭಾಗದ ಅಭಿವೃದ್ಧಿ ಮಾಡಬೇಕು ಅಂತಲೇ ಬಿಜೆಪಿಗೆ ಹೋದೆ ಅಂತಾರೆ. ಹೇಗೆ ಇವರನ್ನು ನಂಬಬೇಕು ಅಂತ ಪ್ರಶ್ನೆ ಮಾಡಿದರು. ಇವರಿಗೆ ಬಿಜೆಪಿಯವರು ಬೊಂಬಾಯಿ ಮಿಠಾಯಿ ತೋರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಫಡ್ನವೀಸ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನೋರು. ಈಗ ಏನಾಗಿದೆ ಕಥೆ ಅಂತ ಖರ್ಗೆ ಎಳೆ ಎಳೆಯಾಗಿ ವಿವರಿಸಿದರು.

Intro:‌ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ಹಿರಿಯ ನಾಯಕರಿಂದ ಶಿವರಾಜ್ ಪರ ಮತ ಬೇಟೆ..

ಬೆಂಗಳೂರು: ಉಪಚುನಾವಣೆಗೆ ನಾಳೆ ಬಹಿರಂಗ ಪ್ರಚಾರಕ್ಕೆ ಅಂತ್ಯ ಹಿನ್ನೆಲೆ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಚುನಾವಣಾ ಕಣ ರಂಗೇರಿದೆ..‌ ಕೊನೆ ಹಂತದಲ್ಲಿ ಮತದಾರರನ್ನ ಸೆಳೆಯಲು ಕೈ ಅಭ್ಯರ್ಥಿ ಶಿವರಾಜರಿಂದ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.. ಕುರುಬರಹಳ್ಳಿಯ ಜೆ ಸಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗ ರೆಡ್ಡಿ ,ಹೆಚ್ ಎಂ ರೇವಣ್ಣ,ಈಶ್ವರ್ ಖಂಡ್ರೆ ಸೇರಿದಂತೆ ಇತರರು ಭಾಗಿಯಾಗಿದರು..‌

ಮಾಜಿ ಕೇಂದ್ರ ಸಚಿವ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತಾನಾಡಿ, ಈ ಚುನಾವಣೆ ಯಾವ ಕಾರಣಕ್ಕೆ ಬಂತು ಅಂತ ನಿಮಗೆಲ್ಲ ಗೊತ್ತಿದೆ..
ಗೋಪಾಲಯ್ಯ ಜೆಡಿಎಸ್ ನಿಂದ ಗೆದ್ದಿದ್ದರು...
ಜಾತ್ಯಾತೀತವಾಗಿ ಕೆಲಸ ಮಾಡ್ತೀನಿ‌ ಅಂತ ಮತ ಕೇಳಿ ಗೆದ್ದಿದ್ರು‌... ಆದ್ರೀಗ ಅದೆಲ್ಲವನ್ನೂ ಗಾಳಿಗೆ ತೂರಿ ಅಧಿಕಾರದ ಆಸೆ, ಐಟಿ, ಇಡಿ ಭಯದಿಂದ ಪಕ್ಷಾಂತರ ಗೊಂಡಿದ್ದಾರೆ...

ನಾವು ಜೆಡಿಎಸ್ ಸೇರಿ ೧೪ ತಿಂಗಳು ರಾಜ್ಯಭಾರ ಮಾಡಿದ್ವಿ.. ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ರಾಜ್ಯಭಾರ ಮಾಡಿದ್ವಿ... ಈ ನಮ್ಮ ಕಾಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದ್ವು‌‌... ಸಿದ್ದರಾಮಯ್ಯ ಅವರು ಸಾಕಷ್ಟು ಹಣವನ್ನು ಪಕ್ಷಭೇಧ ಇಲ್ಲದೆ ಕೊಟ್ರು‌‌‌... ಆ ಹಣದಿಂದ ಅಭಿವೃದ್ಧಿ ಮಾಡಿದ್ರೆ ವಿನಃ, ಬೇರೆ ಏನೂ ಇಲ್ಲ ಅಂತ ಹೇಳಿದರು..

ಇನ್ನು ಗೋಪಾಲಯ್ಯ ಒಂದು ಕಡೆ ನಾನೇ ಅಭಿವೃದ್ಧಿ ಮಾಡಿದ್ದೀನಿ ಅಂತಿರಾ,, ಇನ್ನೋಂದು ಕಡೆ ಈ ಭಾಗದ ಅಭಿವೃದ್ಧಿ ಮಾಡಬೇಕು ಅಂತಲೇ ಬಿಜೆಪಿಗೆ ಹೋದೆ ಅಂತಿರಾ ಹೇಗೆ ನಂಬಬೇಕು ಅಂತ ಪ್ರಶ್ನೆ ಮಾಡಿದರು.. ಗೋಪಾಲಯ್ಯ ಅವರು ಬೊಂಬಾಯಿಗೆ ಹೋದ್ರೂ, ಎಲ್ಲಿ ಹೋದ್ರೂ ಮಹಾಲಕ್ಷ್ಮೀ ಲೇ ಔಟ್ ಗೆ ಬರಬೇಕಾಯ್ತು.. ಬಿಜೆಪಿಯವರು ಬೊಂಬಾಯಿ ಮಿಠಾಯಿ ತೋರಿಸಿದ್ದಾರೆ... ಮಹಾರಾಷ್ಟ್ರದಲ್ಲಿ ಬಿಜೆಪಿ ಫಡ್ನವಿಸ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನೋರು ಈಗ ಏನಾಗಿದೆ ಕಥೆ ಅಂತ ಖರ್ಗೆ ಎಳೆ ಎಳೆಯಾಗಿ ವಿವರಿಸಿದರು..

ಇದೇ ವೇಳೆ ಮಾತಾನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷ ಅಂದರೆ ತಾಯಿ ಇದ್ದಂತೆ.‌ ಅಂತಹ ತಾಯಿಗೆ ಮೋಸ ಮಾಡಿ ಹೋಗಿದ್ದಾರೆ.. ನಿಮಗಾಗಿ ಅವರು ಪಕ್ಷಾಂತರ ಮಾಡಿಲ್ಲ... ಅವರ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ್ದಾರೆ.. ಇಡೀ ರಾಜ್ಯದಲ್ಲಿ ಪ್ರವಾಹ ಬಂತು, ಬರಗಾಲ ಬಂತು ಆದರೆ ಅನರ್ಹರು ಆ ಸಮಯದಲ್ಲಿ ಎಲ್ಲಿದ್ರು ಅಂದರೆ ಮುಂಬೈನ ಐಶಾರಾಮಿ ಹೋಟೇಲ್ ನಲ್ಲಿ ಇದ್ದರು..‌ ಸಂವಿಧಾ‌ನಕ್ಕೆ, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿ ಹೋದರು.. ಹದಿನೈದು ಕ್ಷೇತ್ರಗಳಿಂದ ಒಂದು ಸಂದೇಶ ಹೋಗಬೇಕಾಗಿದೆ... ಪಕ್ಷಾಂತರಿಗಳಿಗೆ, ಸ್ವಾರ್ಥಿಗಳಿಗೆ ತಕ್ಕ ಶಾಸ್ತಿ ಆಗಬೇಕು... ಪ್ರಚಂಡ ಸೋಲನ್ನು ಅನರ್ಹರು ಅನುಭವಿಸಬೇಕು ಅಂತ ಹೇಳಿದರು..‌

ಬಿಜೆಪಿ ಸಮಾಜ ಹೊಡೆಯುವ, ಸುಳ್ಳು ಹೇಳುವ ಪಕ್ಷ.... ಇಂದ್ರ, ಚಂದ್ರ, ಸ್ವರ್ಗವನ್ನು ತರ್ತಿವಿ ಅಂದರು ಏನು ಮಾಡಿದರು... ಜಿಡಿಪಿ ದರ ಎಲ್ಲಿಗೆ ಬಂದಿದೆ ಅನ್ನೋದು ಎಲ್ಲರಿಗು ಗೊತ್ತಿದೆ.. ದೇಶದಲ್ಲಿ ಅಘೋಷಿತವಾದ ತುರ್ತುಪರಿಸ್ಥಿತಿ ಇದೆ...

ಗೋಪಾಲಯ್ಯ ಅವರ ಅಣ್ಣ ತಮ್ಮಂದಿರು ಅಪರಾಧದಲ್ಲಿ ತೊಡಗಿಕೊಂಡಿದರು.. ಹಾಗಾಗೀ ಅದನ್ನು ತಪ್ಪಿಸಿಕೊಳ್ಳಲು ಪಕ್ಷಾಂತರ ಮಾಡಿದರು.
ನಾವು ರಾಜ್ಯದ ಎಲ್ಲ ಕಡೆ ಹೋಗಿದ್ದೇವೆ... ಜನ ಅನರ್ಹರನ್ನು ಸೋಲಿಸಬೇಕು ಅನ್ನೋ ತೀರ್ಮಾನ ಮಾಡಿದ್ದಾರೆ... ಇದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವಿನ ಚುನಾವಣೆ ಅಲ್ಲ.. ಇದು ಧರ್ಮ-ಅಧರ್ಮದ ಚುನಾವಣೆ, ನ್ಯಾಯ-ನೀತಿಯ ಚುನಾವಣೆ..‌ ಬಿಜೆಪಿಯವರದ್ದು ನಕಲಿ ರಾಷ್ಟ್ರೀಯತೆ‌...
ಬಿಜೆಪಿಯವರುವೊಬ್ಬರು ದೇಶಕ್ಕಾಗಿ ಬಲಿದಾನ ಮಾಡಿಲ್ಲ, ಜೈಲಿಗೆ ಹೋಗಿಲ್ಲ... ತನ್ನನ್ನು ತಾನು ಮಾರಿಕೊಂಡವರಿಗೆ ಒಂದೇ ಒಂದು ವೋಟು ಹಾಕಬೇಡಿ ಅಂತ ಮನವಿ ಮಾಡಿದರು..

*ಯಡಿಯೂರಪ್ಪ ಅವರು ಜಾತಿ ಆಧಾರದ ಮೇಲೆ ಮತ ಕೇಳೋದು ಎಷ್ಟರ ಮಟ್ಟಿಗೆ ಸರಿ?*
ಇದು ಕೂಡ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತೆ ಅಂತಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.. ಬಸವಣ್ಣನ ಅನುಯಾಯಿಗಳು ಯಾರು ಕೋಮುವಾದಿ ಪಕ್ಷ ಬಿಜೆಪಿಗೆ ಯಾರೂ ಮತ ಹಾಕಲ್ಲ ಅಂತಾ ನಂಬಿದ್ದೇನೆ ಅಂತ ಹೇಳಿದರು..‌

ನಂತರ ಮಾತಾನಾಡಿದ, ಅಭ್ಯರ್ಥಿ ಎಂ. ಶಿವರಾಜು, ಈ ಕ್ಷೇತ್ರದಲ್ಲಿ ನಾನು ಮೂರು ಬಾರಿ ಪಾಲಿಕೆ ಸದಸ್ಯನಾಗಿ ಕೆಲಸ ಮಾಡಿದ್ದೀನಿ. ಆಡಳಿತ ಪಕ್ಷದ ನಾಯಕನಾಗಿ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ಸಾಕಷ್ಟು ಸೇವೆ ಮಾಡಿದ್ದೇನೆ. ಆದರೆ ನೀವು ನೀಡಿದ ಮತವನ್ನ ಮಾರಿಕೊಂಡು ಮತ್ತೊಂದು ಬಾರಿ ಮತಯಾಚನೆಗೆ ಬಂದಿದ್ದಾರೆ. ದಯವಿಟ್ಟು ಅವರನ್ನ ದಿಕ್ಕರಿಸಿ ನನಗೊಂದು ಅವಕಾಶ ಕೊಡಿ.
ನಿಮ್ಮ ಮನೆ ಮಗನಾಗಿ ಸೇವಕನಾಗಿ ಸೇವೆ ಸಲ್ಲಿಸುತ್ತೇನೆ ಎಂದು ಕೈ ಮುಗಿದು ಮತದಾರರಲ್ಲಿ ಶಿವರಾಜು ಮನವಿ ಮಾಡಿದರು..‌

KN_BNG_3_CONGRESS_SAMAVESHA_SCRIPT_7201801

Body:.Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.