ETV Bharat / city

ಆರೋಗ್ಯ ಇಲಾಖೆ ಎಡವಟ್ಟು: 7 ದಿನದ ಬಳಿಕ ರಿಪೋರ್ಟ್, ಕೋವಿಡ್​ ವಾರಿಯರ್ಸ್​ಗೆ ಸೋಂಕು ದೃಢ - Malleshwaram police station

ಏಳು ದಿನಗಳ ಬಳಿಕ ಕೋವಿಡ್​ ವಾರಿಯರ್ಸ್ ಕೈಗೆ ಕೊರೊನಾ ಪರೀಕ್ಷಾ ವರದಿ ಸಿಕ್ಕಿದೆ. ಮಲ್ಲೇಶ್ವರ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.

Malleshwaram police
ಕೋವಿಡ್​ ವಾರಿಯರ್ಸ್​ಗೆ ಸೋಂಕು ದೃಢ
author img

By

Published : Jul 5, 2020, 1:50 PM IST

ಬೆಂಗಳೂರು: ಆರೋಗ್ಯ ಇಲಾಖೆ ಎಡವಟ್ಟಿನಿಂದಾಗಿ ಏಳು ದಿನಗಳ ಬಳಿಕ ಕೋವಿಡ್​ ವಾರಿಯರ್ಸ್ ಕೈಗೆ ಕೊರೊನಾ ಪರೀಕ್ಷಾ ವರದಿ ಸಿಕ್ಕಿದ್ದು, ಸೋಂಕು ದೃಢಪಟ್ಟಿದೆ.

ಕೋವಿಡ್​ ವಾರಿಯರ್ಸ್​ಗೆ ಸೋಂಕು ದೃಢ

ಮಲ್ಲೇಶ್ವರ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಓರ್ವ ಮಹಿಳಾ ಹಾಗೂ ಓರ್ವ ಪುರುಷ ಕಾನ್ಸ್‌ಟೇಬಲ್​ಗೆ ಸೋಂಕಿನ ಲಕ್ಷಣ ಇರುವ ಕಾರಣ ಜೂನ್​ 27 ರಂದು ಕೋವಿಡ್ 19 ಪರೀಕ್ಷೆ ಮಾಡಲಾಗಿತ್ತು. ಆದರೆ ಇಂದು ರಿಪೋರ್ಟ್ ಕೈ ಸೇರಿದ್ದು,‌ ಪಾಸಿಟಿವ್​ ಬಂದಿದೆ. ಈಗ ಅವರ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಪೊಲೀಸ್ ಠಾಣೆಯನ್ನು 48 ಗಂಟೆಗಳ ಕಾಲ ಸೀಲ್​ಡೌನ್‌ ಮಾಡಿ, ತಾತ್ಕಾಲಿಕವಾಗಿ ಠಾಣೆಯನ್ನು ಎದುರುಗಡೆ ಇರುವ ಶಾಲೆ ಆವರಣಕ್ಕೆ ವರ್ಗಾಯಿಸಲಾಗಿದೆ.

ಸೋಂಕಿತ ಸಿಬ್ಬಂದಿಯನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.