ETV Bharat / city

ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಕನ್ನಡಿಗ ಬಗ್ಗವಳ್ಳಿ ಸೋಮಶೇಖರ್ ರಾಜು ನೇಮಕ: ಸಿಎಂ, ಹೆಚ್​ಡಿಕೆ ಅಭಿನಂದನೆ - HD Kumaraswamy Tweet

ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕಗೊಂಡಿರುವ ಕನ್ನಡಿಗ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್​​ ರಾಜು ಅವರಿಗೆ ಸಿಎಂ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಸದ ಪ್ರತಾಪ್​​ ಸಿಂಹ ಶುಭ ಹಾರೈಸಿದ್ದಾರೆ.

Lieutenant General Baggavalli Somashekar Raju
ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು
author img

By

Published : Apr 30, 2022, 10:16 AM IST

Updated : Apr 30, 2022, 10:34 AM IST

ಬೆಂಗಳೂರು: ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಮೇ 1 ರಂದು ಸೇನಾ ಸಿಬ್ಬಂದಿ ಮುಂದಿನ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೆಫ್ಟಿನೆಂಟ್ ಜನರಲ್ ರಾಜು ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಅವರು ಶನಿವಾರ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರ ಅವಧಿಯನ್ನು ಪೂರ್ಣಗೊಳಿಸಿದ ನಂತರ 1.3 ಮಿಲಿಯನ್ ಸೈನ್ಯದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ರಾಜು ಅವರು ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪೂರ್ವ ಲಡಾಖ್‌ನಲ್ಲಿ ಸೇನೆಯ ಒಟ್ಟಾರೆ ಕಾರ್ಯಾಚರಣೆ ಸಿದ್ಧತೆಯನ್ನು ನೋಡಿಕೊಳ್ಳುತ್ತಾರೆ. ಸೈನಿಕ್ ಸ್ಕೂಲ್ ಬಿಜಾಪುರ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿರುವ ರಾಜು 1984 ಡಿಸೆಂಬರ್ 15ರಂದು ಜಾಟ್ ರೆಜಿಮೆಂಟ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ವೆಸ್ಟರ್ನ್ ಥಿಯೇಟರ್‌ನಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಪಿ ಪರಾಕ್ರಮ್ ಸಮಯದಲ್ಲಿ ಅವರು ತಮ್ಮ ಬೆಟಾಲಿಯನ್‌ನ ನೇತೃತ್ವ ವಹಿಸಿದ್ದರು.

  • Congratulations to our own Lt. Gen. B. S. Raju, a decorated officer for his unflagging contribution to the service & the nation, on being appointed as new Vice Chief of Army Staff.

    Your illustrious career & unflinching devotion to India will inspire youth to serve the nation. pic.twitter.com/buRVImpvSK

    — Basavaraj S Bommai (@BSBommai) April 30, 2022 " class="align-text-top noRightClick twitterSection" data=" ">

ಸಿಎಂ ಅಭಿನಂದನೆ: ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಕನ್ನಡಿಗರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಮತ್ತು ಸಂಭ್ರಮದ ಸಂದರ್ಭವಾಗಿದೆ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಜನರಲ್‌ ಬಿ.ಎಸ್.ರಾಜು ಅವರು ರಾಷ್ಟ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಸೇನಾ ಸಿಬ್ಬಂದಿಯ ಹೊಸ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಅವರಿಗೆ ಅಭಿನಂದನೆಗಳು ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಶುಭಕೋರಿದ ಹೆಚ್.ಡಿ ಕುಮಾರಸ್ವಾಮಿ: ಕನ್ನಡಿಗರಾದ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ್​​ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ ಮತ್ತು ಸಂಭ್ರಮದ ಸಂದರ್ಭ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

  • ಕನ್ನಡಿಗರಾದ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ & ಸಂಭ್ರಮದ ಸಂದರ್ಭ.
    ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಪರಂಪರೆಯ ಇನ್ನೊಂದು ಗರಿ ಜನರಲ್‌ ಬಿ.ಎಸ್.ರಾಜು ಅವರು.#Lieutenant_General_BS_Raju pic.twitter.com/7NO5U9N1do

    — H D Kumaraswamy (@hd_kumaraswamy) April 30, 2022 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಪರಂಪರೆಯ ಇನ್ನೊಂದು ಗರಿ ಜನರಲ್‌ ಬಿ.ಎಸ್.ರಾಜು ಅವರು ಎಂದು ಶ್ಲಾಘಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದವರಾದ ಅವರು ಕಾಶ್ಮೀರದಲ್ಲಿ ನಡೆದ ʼಆಪರೇಷನ್‌ ಪರಾಕ್ರಮʼ ಸೇರಿ ಹಲವಾರು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡಾಂಬೆಯ ಹೆಮ್ಮೆಯ ಪುತ್ರ ಜನರಲ್‌ ರಾಜು ಅವರಿಗೆ ಶುಭವಾಗಲಿ, ಅವರ ಮುಂದಿನ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಇನ್ನು ಸಂಸದ ಪ್ರತಾಪ್​​ ಸಿಂಹ ಟ್ವೀಟ್ ಮಾಡಿ, ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕವಾಗಿರುವ ಕನ್ನಡಿಗರಾದ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಇದನ್ನೂ ಓದಿ: ಅರವಿಂದ ಕೇಜ್ರಿವಾಲ್ ಭೇಟಿ ಮಾಡಿದ ಮಮತಾ​: ಕುತೂಹಲ ಕೆರಳಿಸಿದ ಭೇಟಿ

Last Updated : Apr 30, 2022, 10:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.