ETV Bharat / city

ಲಾಕ್​​ಡೌನ್‌ನಲ್ಲಿ ಅತಂತ್ರರಾದ ಖಾಸಗಿ ಶಾಲೆ ಶಿಕ್ಷಕರು, ಅವರ ಪಾಡು ಕೇಳೋರ್ಯಾರು? - ಕೊರೊನಾ ನಿಯಂತ್ರಿಸಲು ಪ್ರತಿ ತಂತ್ರ

ಗುಣಮಟ್ಟದ ಶಿಕ್ಷಣಕ್ಕೆ ನಿರಂತರ ಕಲಿಕೆಗೆ ಶಿಕ್ಷಕರನ್ನ ಉಳಿಸಿಕೊಳ್ಳುವ ಅಗತ್ಯವಿದೆ. ಈಗ ಉಳಿಸಿಕೊಂಡಿಲ್ಲ ಅಂದರೆ ಮುಂದೆ ದುರಂತ ಕಾದಿದೆ ಅಂತ ಎಚ್ಚರಿಸಿದರು. ಸರ್ಕಾರ ಶಿಕ್ಷಕರಿಗೆ ಕೇವಲ 5000 ರೂ. ಕೊಟ್ಟು ಸುಮ್ಮನೆ ಆಗದೇ ಮಾಸಿಕ ಧನಸಹಾಯ ₹15 ಸಾವಿರ ಕೊಡಬೇಕು ಅಂತ ಒತ್ತಾಯ ಮಾಡಿದರು. ಮುಂದಿನ ಪೀಳಿಗೆಗೆ ಶಿಕ್ಷಕರು ಬೇಕು ಅಂದರೆ ಸೌಲಭ್ಯ ಕಲ್ಪಿಸಬೇಕು..

private-school-teachers-problems-issue
ಅತಂತ್ರರಾದ ಖಾಸಗಿ ಶಾಲೆ ಶಿಕ್ಷಕರು
author img

By

Published : Jun 6, 2021, 7:51 PM IST

ಬೆಂಗಳೂರು : ಕೊರೊನಾ ನಿಯಂತ್ರಿಸಲು ಪ್ರತಿ ತಂತ್ರವಾಗಿ ಲಾಕ್​​ಡೌನ್ ಜಾರಿ ಮಾಡಲಾಯಿತು. ಮೊದಲ ಅಲೆಯಲ್ಲಿ ಶುರುವಾದ ಸಮಸ್ಯೆ ಇದೀಗ ಎರಡನೇ ಅಲೆಯಲ್ಲೂ ಮುಂದುವರೆದಿದೆ. ಸದ್ಯ ಇಡೀ‌ ವ್ಯವಸ್ಥೆಯೇ ತಲೆಕೆಳಗಾಗಿ ಹೋಗಿದ್ದು, ಎಲ್ಲ ಉದ್ಯಮಗಳಿಗೂ ಕೊರೊನಾ ಪೆಟ್ಟು ಕೊಟ್ಟಿದೆ.‌ ಅದರಂತೆ ಶೈಕ್ಷಣಿಕ ವರ್ಗಕ್ಕೂ ಪೆಟ್ಟು ಕೊಂಚ ಹೆಚ್ಚಾಗಿಯೇ ಬಿದ್ದಿದೆ.

ಅತಂತ್ರರಾದ ಖಾಸಗಿ ಶಾಲೆ ಶಿಕ್ಷಕರು

ಓದಿ: COVID update: ರಾಜ್ಯದಲ್ಲಿಂದು 12,209 ಮಂದಿಗೆ ಕೊರೊನಾ ದೃಢ.. 320 ಸೋಂಕಿತರು ಬಲಿ

ಇತ್ತ ಕೊರೊನಾ ಹರಡುವಿಕೆ ಹೆಚ್ಚಾದ ಕಾರಣದಿಂದಲೇ ಕಳೆದ ಸಲವೂ ಪರೀಕ್ಷೆಗಳನ್ನ ಮುಂದೂಡಲಾಗಿತ್ತು. ಬಳಿಕ ಹೇಗೋ ಸುರಕ್ಷತಾ ಕ್ರಮಗಳೊಂದಿಗೆ ಮುಗಿಸಿದ್ದರು. ಅಷ್ಟೇ ಅಲ್ಲ, 2020-21ರ ಶೈಕ್ಷಣಿಕ ವರ್ಷ ಆರಂಭಿಸಲು ಬ್ರೇಕ್ ಹಾಕಲಾಯಿತು.

ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಯಿತು. ಇದೀಗ ಮತ್ತೆ ಅದೇ ಸಮಸ್ಯೆ ಉದ್ಬವಿಸಿದೆ. ಇವರೊಂದಿಗೆ ಖಾಸಗಿ ಶಾಲೆಗಳ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ಕೊರೊನಾ‌ ಹಾಗೂ ಲಾಕ್​​ಡೌನ್ ಹೊಡೆತಕ್ಕೆ ಸಿಲುಕುವಂತಾಗಿದೆ.

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಭವಿಷ್ಯವೇ ಅತಂತ್ರವಾಗಿದೆ.‌ ಅದರಲ್ಲೂ ಖಾಸಗಿ ಶಾಲೆಗಳಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ಪಾಡು ಯಾರಿಗೂ ಬೇಡವಾಗಿದೆ. ಹಲವು ಖಾಸಗಿ ಶಾಲೆಗಳು ತಿಂಗಳ ವೇತನವನ್ನ ನೀಡಲು ಆಗದೇ, ಇತ್ತ ಬಾಕಿ ವೇತನವೂ ಶಿಕ್ಷಕರಿಗೆ ಸಿಗದೇ ಪರದಾಡುವಂತಾಗಿದೆ.

ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ರೋಗದ ಮೊದಲು ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ, ಸಾಮಾಜಿಕ ಸ್ಥಾನಮಾನ ಮತ್ತು ಗೌರವವನ್ನು ಅನುಭವಿಸುತ್ತಿದ್ದರು. ಆದರೆ, ಸಾಂಕ್ರಾಮಿಕ ಮತ್ತು ಅದರ ಎರಡನೆಯ ಅಲೆಯು ಶಾಲೆಗಳು ಮುಚ್ಚಿಹೋಗಿದ್ದರಿಂದ ಖಾಸಗಿ ಶಾಲಾ ಶಿಕ್ಷಕರ ಜೀವನೋಪಾಯವನ್ನು ಒಡೆದಿದೆ.

ಉದ್ಯೋಗಸ್ಥರಾಗಿದ್ದ ಶಿಕ್ಷಕರೇ ಇದೀಗ ನಿರುದೋಗ್ಯಸ್ಥರಾಗಿ, ಪಾಠ-ಪ್ರವಚನ ಮಾಡುವುದು ಬಿಟ್ಟು ಬೇರೆ ಉದ್ಯೋಗಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೊದಲ ಅಲೆಯ ಸಂದರ್ಭದಲ್ಲಿ ಅದೆಷ್ಟು ಶಿಕ್ಷಕರು ಹಣ್ಣು-ತರಕಾರಿ ಮಾರುತ್ತ ಹೊಟ್ಟೆ ತುಂಬಿಸಿಕೊಂಡಿದ್ದು ಇದೆ.

ಈ ಕುರಿತು ಮಾತನಾಡಿರುವ ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್, ಖಾಸಗಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದರೆ, ಇನ್ನು ಕೆಲವರು ಕೊರೊನಾಗೆ ಹೆದರಿ ಕೆಲಸ ಬಿಟ್ಟಿದ್ದಾರೆ. ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ‌ ಅಂತ ತಿಳಿಸಿದರು.

ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ ಕಡೆಗಡೆಸಿರುವ ವರ್ಗ ಅಂದರೆ ಅದು ಶಿಕ್ಷಣ-ಶಿಕ್ಷಕರ ವರ್ಗವಾಗಿದೆ. ಕನಿಷ್ಠ 5000 ರೂ. ಕೊಡುವ ಮನಸ್ಸು ಈಗ ಮಾಡಿದೆ. ಇದೇ ಶಿಕ್ಷಕ ವರ್ಗ ಗೌರವದಿಂದ ತಮ್ಮ ಜ್ಞಾನವನ್ನ ಮಕ್ಕಳಿಗೆ ಎರೆಯುತ್ತಿದ್ದರು, ಇದೀಗ ಕೊರೊನಾದಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಅವರ ಅಗತ್ಯತೆ ಮುಂದಿನ ಭವಿಷ್ಯಕ್ಕೆ ಇದ್ದು, ಇಲ್ಲಿಗೆ ಮುಗಿದಿಲ್ಲ. ಶಿಕ್ಷಕರ ವೃತ್ತಿಗೆ ಬರುವವರ ಕೊರತೆಯನ್ನ ಮೊದಲೇ ಎದುರಿಸುತ್ತಿದ್ದು, ಈಗ ಇರುವವರನ್ನೇ ಹಿಡಿದಿಟ್ಟುಕೊಳ್ಳುವ ಪರಿಸ್ಥಿತಿ ಶುರುವಾಗಿದೆ‌.

ಗುಣಮಟ್ಟದ ಶಿಕ್ಷಣಕ್ಕೆ ನಿರಂತರ ಕಲಿಕೆಗೆ ಶಿಕ್ಷಕರನ್ನ ಉಳಿಸಿಕೊಳ್ಳುವ ಅಗತ್ಯವಿದೆ. ಈಗ ಉಳಿಸಿಕೊಂಡಿಲ್ಲ ಅಂದರೆ ಮುಂದೆ ದುರಂತ ಕಾದಿದೆ ಅಂತ ಎಚ್ಚರಿಸಿದರು. ಸರ್ಕಾರ ಶಿಕ್ಷಕರಿಗೆ ಕೇವಲ 5000 ರೂ. ಕೊಟ್ಟು ಸುಮ್ಮನೆ ಆಗದೇ ಮಾಸಿಕ ಧನಸಹಾಯ ₹15 ಸಾವಿರ ಕೊಡಬೇಕು ಅಂತ ಒತ್ತಾಯ ಮಾಡಿದರು. ಮುಂದಿನ ಪೀಳಿಗೆಗೆ ಶಿಕ್ಷಕರು ಬೇಕು ಅಂದರೆ ಸೌಲಭ್ಯ ಕಲ್ಪಿಸಬೇಕು, ಇಲ್ಲವಾದರೆ ಅಷ್ಟೇ ಅಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.