ETV Bharat / city

ರಾಜ್ಯದಲ್ಲಿ ಕಾರ್ಮಿಕ ಅದಾಲತ್ ಯಶಸ್ವಿ: ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥ

ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಬಾಕಿ ಉಳಿದಿದ್ದ ಕಾರ್ಮಿಕರ ಸಮಸ್ಯೆಗಳು ಮತ್ತು ಪರಿಹಾರ ಅರ್ಜಿಗಳನ್ನು ಒಂದೇ ಬಾರಿಗೆ ವಿಲೇವಾರಿ ಮಾಡಲಾಗಿದೆ. ಇದೀಗ ಪ್ರತಿ ತಿಂಗಳು ಇದೇ ಮಾದರಿಯ 'ಕಾರ್ಮಿಕ ಅದಾಲತ್'ಗಳನ್ನು ನಡೆಸಲು ಇಲಾಖೆ ನಿರ್ಧರಿಸಿದೆ.

lot of cases solved in Labor Adalat in state
ರಾಜ್ಯದಲ್ಲಿ ಕಾರ್ಮಿಕ ಅದಾಲತ್ ಯಶಸ್ವಿ
author img

By

Published : Oct 17, 2021, 7:21 AM IST

ಬೆಂಗಳೂರು: ರಾಜ್ಯದಲ್ಲಿ ನಡೆದ ಕಾರ್ಮಿಕ ಅದಾಲತ್ ಮುಖೇನ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 1.54 ಲಕ್ಷ ಕಾರ್ಮಿಕರಿಗೆ 89.05 ಕೋಟಿ ರೂ. ಪಾವತಿಯಾಗಿದೆ.

ಕೋವಿಡ್ ಸಹಾಯ ಧನ, ಕನಿಷ್ಠ ವೇತನ, ಪಿಂಚಣಿ, ಮಾಲೀಕ-ಕಾರ್ಮಿಕರ ನಡುವೆ ವಿವಾದ ಹಾಗೂ ವಿವಿಧ ಯೋಜನೆಗಳಡಿ ಸಹಾಯಧನ ಸೇರಿದಂತೆ 2.83 ಲಕ್ಷ ಪ್ರಕರಣಗಳಿಗೆ ಕಾರ್ಮಿಕ ಅದಾಲತ್‌ನಲ್ಲಿ ಮುಕ್ತಿ ಸಿಕ್ಕಿದೆ. ಈ ಕಾರ್ಯಕ್ರಮ ರಾಜ್ಯದ ಶ್ರಮಿಕ ವರ್ಗದಲ್ಲಿ ನವಚೈತನ್ಯ ಮೂಡಿಸಿದೆ.

'ಕಾರ್ಮಿಕ ಅದಾಲತ್' ಮುಂದುವರೆಸಲು ನಿರ್ಧಾರ:

ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಬಾಕಿ ಉಳಿದಿದ್ದ ಕಾರ್ಮಿಕರ ಸಮಸ್ಯೆಗಳು ಮತ್ತು ಪರಿಹಾರ ಅರ್ಜಿಗಳನ್ನು ಒಂದೇ ಬಾರಿಗೆ ವಿಲೇವಾರಿ ಮಾಡಲಾಗಿದೆ. ಈ ಯಶಸ್ಸಿನ ನಂತರ ಇದೀಗ ಪ್ರತಿ ತಿಂಗಳು ಇದೇ ಮಾದರಿ 'ಕಾರ್ಮಿಕ ಅದಾಲತ್'ಗಳನ್ನು ನಡೆಸಲು ಇಲಾಖೆ ನಿರ್ಧರಿಸಿದೆ.

2.83 ಲಕ್ಷ ಅರ್ಜಿಗಳ ವಿಲೇವಾರಿ:

ಕಾರ್ಮಿಕರ ಸಹಾಯಧನ ಅರ್ಜಿ, ಪರಿಹಾರ ಅರ್ಜಿ ಸೇರಿದಂತೆ ಕೆಲ ವಿವಾದಗಳು ಅಂತ್ಯ ಕಾಣದೇ ವರ್ಷಾನುಗಟ್ಟಲೆಯಿಂದ ಬಾಕಿ ಇದ್ದುದುನ್ನು ಮನಗಂಡ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, 'ಕಾರ್ಮಿಕ ಅದಾಲತ್' ಕಾರ್ಯಕ್ರಮ ರೂಪಿಸುವ ಮೂಲಕ ಈ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಿದ್ದರು. ಇದರ ಫಲವಾಗಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭಾರಿ ಪ್ರಚಾರದೊಂದಿಗೆ ನಡೆದ ಕಾರ್ಮಿಕ ಅದಾಲತ್‌ನಲ್ಲಿ 2.83 ಲಕ್ಷ ಅರ್ಜಿಗಳನ್ನು ವಿಲೇ ಮಾಡಲಾಗಿದೆ.

'ಕಾರ್ಮಿಕ ಅದಾಲತ್' ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿತಲ್ಲದೇ, ತಾಲೂಕು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಂದ ನಿಗದಿತ ಅರ್ಜಿಗಳ ವಿವರ ಮತ್ತು ಪರಿಹಾರದ ಕ್ರಮಗಳ ಬಗ್ಗೆ ಪದೇ ಪದೇ ಮಾಹಿತಿ ಪಡೆಯುವ ಮೂಲಕ ಕಾರ್ಯಕ್ರಮ ಅನುಷ್ಠಾನಕ್ಕೆ ಶ್ರಮಿಸಿದೆ. ಸಚಿವ ಶಿವರಾಂ ಹೆಬ್ಬಾರ್ ಅವರು ಕಾರ್ಮಿಕ ಅದಾಲತ್ ಜಾರಿ ಮತ್ತು ನಿರ್ವಹಣೆಗೆ ಪೂರಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹೆಚ್ಚಿನ ಕಾರ್ಮಿಕರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಿದ್ದಾರೆ.

ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ಮೊದಲು:

ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ಇಂತಹ ಅದಾಲತ್‌ನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಹಾಗೂ ಕರ್ನಾಟಕ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಹೆಚ್ಚಿನ ಅರ್ಜಿಗಳು ವಿಲೇವಾರಿಯಾಗಿದೆ. ಅರೆ ನ್ಯಾಯಿಕ ಪ್ರಕರಣಗಳು, ಕೈಗಾರಿಕಾ ವಿವಾದ ಮತ್ತು ದೂರುಗಳಿಗೆ ಸಂಬಂಧಿಸಿದ ಅರ್ಜಿಗಳು ಬಾಕಿ ಉಳಿದಿದ್ದವು. ಕಾರ್ಮಿಕ ಸಚಿವರ ಸೂಚನೆಯಂತೆ ಇಲಾಖೆಯು ಪ್ರತಿ ತಿಂಗಳ ಒಂದು ದಿನ ತಾಲೂಕು ಮಟ್ಟದಲ್ಲಿ ಕಾರ್ಮಿಕ ಅದಾಲತ್ ನಡೆಸುವಂತೆ ಆದೇಶಿಸಿದೆ.

ತಿಂಗಳಲ್ಲಿ ಒಂದು ದಿನ ಕಾರ್ಮಿಕ ಅದಾಲತ್:

ಆಗಸ್ಟ್- ಸೆಪ್ಟೆಂಬರ್‌ನಲ್ಲಿ ನಡೆದ ಅದಾಲತ್ ಯಶಸ್ಸಿನ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹಾಗೂ ಕಾರ್ಮಿಕರಿಗೆ ಶೀಘ್ರ ನ್ಯಾಯ ಒದಗಿಸಲು ಹಾಗೂ ಅರ್ಹ ಸೌಲಭ್ಯಗಳನ್ನು ತಲುಪಿಸುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ವಿವಿಧ ಕಾರ್ಮಿಕ ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳಡಿ ಸ್ವೀಕೃತವಾಗಿ ಬಹಳ ಕಾಲದಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳು, ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಪ್ರತಿ ತಾಲೂಕುಗಳಲ್ಲಿ ತಿಂಗಳಲ್ಲಿ ಒಂದು ದಿನ ಕಾರ್ಮಿಕ ಅದಾಲತ್ ನಡೆಸಲು ಇಲಾಖೆ ಆಯುಕ್ತ ಅಕ್ರಂ ಪಾಷ ಆದೇಶಿಸಿದ್ದಾರೆ.

ಪ್ರಕರಣಗಳ ಸಂಖ್ಯೆ ಶೂನ್ಯಕ್ಕಿಳಿಸಲು ಕ್ರಮ:

ಕಾರ್ಮಿಕ ಅದಾಲತ್ ನಿರಂತರವಾಗಿ ಸಮರೋಪಾದಿಯಲ್ಲಿ ಸಂಘಟಿಸುವ ಮೂಲಕ ಬಡ ಕಾರ್ಮಿಕರಿಗೆ ನೆರವು ಒದಗಿಸಲು ಹಾಗೂ ಬಾಕಿ ಇರುವ ಗರಿಷ್ಠ ಮಟ್ಟದ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಬೇಕು ಮತ್ತು ಇದಕ್ಕಾಗಿ ಅದಾಲತ್ ಜಾರಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಅದಾಲತ್‌ಗೆ ಸ್ಥಳೀಯವಾಗಿ ಸೂಕ್ತ ದಿನಾಂಕ ನಿರ್ಧರಿಸಿ ಪ್ರಚಾರ ಕೈಗೊಂಡು ಕಾರ್ಯಕ್ರಮ ನಡೆಸುವಂತೆ ಆದೇಶದಲ್ಲಿ ವಿವರಿಸಲಾಗಿದೆ.

ಪ್ರದೇಶಿಕ ವ್ಯಾಪ್ತಿಯ ಎಲ್ಲ ಉಪ ಕಾರ್ಮಿಕ ಆಯುಕ್ತರು, ವಿಭಾಗೀಯ ಮಟ್ಟದ ಅಧಿಕಾರಿಗಳಾದ ಸಹಾಯಕ ಕಾರ್ಮಿಕ ಆಯುಕ್ತರು ತಮ್ಮ ಕಚೇರಿಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳ ಮತ್ತು ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಅಧೀನ ಅಧಿಕಾರಿಗಳಾದ ಕಾರ್ಮಿಕ ಅಧಿಕಾರಿ, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರುಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ಬಗ್ಗೆ ಆಗಿಂದ್ದಾಗ್ಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅರ್ಜಿಗಳ ವಿಲೇವಾರಿಯಲ್ಲಿ ತೊಡಗಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ನನ್ನ ಬಳಿ ಬೇನಾಮಿ ಆಸ್ತಿ ಇದ್ದರೆ, ಸೊಗಡು ಶಿವಣ್ಣನವರಿಗೆ ಗಿಫ್ಟ್​ ನೀಡುತ್ತೇನೆ: ಶಾಸಕಿ ಹೆಬ್ಬಾಳ್ಕರ್

ಕಾರ್ಮಿಕ ಅದಾಲತ್ ಸಮರ್ಥ ಜಾರಿಗೆ ಅನುಕೂಲವಾಗುವಂತೆ ಅದಾಲತ್‌ನಲ್ಲಿ ವಿಲೇವಾರಿಯಾದ ಅರ್ಜಿಗಳ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಎಲ್ಲ ಉಪ ಕಾರ್ಮಿಕ ಆಯುಕ್ತರು ಕ್ರೋಢೀಕರಿಸಿ ಪ್ರತಿ ತಿಂಗಳ 10ನೇ ತಾರೀಖಿಗೂ ಮುನ್ನ ಕೇಂದ್ರ ಕಚೇರಿಗೆ ತಲುಪಿಸುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ಸೂಚನೆ ನೀಡುವ ಮೂಲಕ ಅದಾಲತ್ ಯಶಸ್ಸಿನ ಬಗ್ಗೆ ನಿಗಾ ವಹಿಸುವಂತೆ ಮುನ್ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.