ಬೆಂಗಳೂರು: ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಲಾರಿಯಡಿ ಸಿಲುಕಿದ ಘಟನೆ ಸುಮ್ಮನಹಳ್ಳಿಯಲ್ಲಿ ನಡೆದಿದೆ.
![lorry-driver-rescued-by-kamakshipalya-police-in-accident](https://etvbharatimages.akamaized.net/etvbharat/prod-images/11723846_dvdbvdf.jpg)
ಸ್ಥಳಕ್ಕಾಗಮಿಸಿದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಲಾರಿಯಡಿ ಸಿಲುಕಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
![lorry-driver-rescued-by-kamakshipalya-police-in-accident](https://etvbharatimages.akamaized.net/etvbharat/prod-images/11723846_bnyjs.jpg)
ಸದ್ಯ ಸಣ್ಣ ಪುಟ್ಟ ಗಾಯಗಳಾಗಿದ್ದನ್ನು ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
![lorry-driver-rescued-by-kamakshipalya-police-in-accident](https://etvbharatimages.akamaized.net/etvbharat/prod-images/11723846_lorry.jpg)