ETV Bharat / city

ವಿದ್ಯುತ್ ಮೀಟರ್ ಅಳವಡಿಕೆಗೆ ಲಂಚದ ಬೇಡಿಕೆ : ಲೈನ್‍ಮ್ಯಾನ್ ಎಸಿಬಿ ಬಲೆಗೆ - ವಿದ್ಯುತ್ ಮೀಟರ್ ಅಳವಡಿಕೆಗೆ ಲಂಚದ ಡಿಮ್ಯಾಂಡ್,

ಮೀಟರ್ ಅಳವಡಿಸಲು, ಆರ್.ಆರ್ ಸಂಖ್ಯೆ ನೀಡಲು ಲೈನ್‍ಮ್ಯಾನ್ ಮಂಜುನಾಥ್ ಮುಂಗಡವಾಗಿ 80 ಸಾವಿರ ರೂ. ಲಂಚ ಸ್ವೀಕರಿಸಿದ್ದ. ಆದರೂ ಮೀಟರ್ ಅಳವಡಿಸಿರಲಿಲ್ಲ. ಪುನಃ 10 ಸಾವಿರ ನೀಡಿದರಷ್ಟೇ ಮೀಟರ್ ಹಾಗೂ ಆರ್.ಆರ್ ಸಂಖ್ಯೆ ನೀಡುವುದಾಗಿ ಅರ್ಜಿದಾರರಿಗೆ ಬೇಡಿಕೆಯಿಟ್ಟಿದ್ದ..

Srirampura Bescom Office, lineman arrested by ACB, bribery Demand of electric meter install, ಶ್ರೀರಾಂಪುರ ಬೆಸ್ಕಾಂ ಕಚೇರಿ, ವಿದ್ಯುತ್ ಮೀಟರ್ ಅಳವಡಿಕೆಗೆ ಲಂಚದ ಡಿಮ್ಯಾಂಡ್, ಲೈನ್‍ಮ್ಯಾನ್ ಎಸಿಬಿ ಬಲೆಗೆ,
ವಿದ್ಯುತ್ ಮೀಟರ್ ಅಳವಡಿಕೆಗೆ ಲಂಚದ ಬೇಡಿಕೆ
author img

By

Published : Dec 17, 2021, 7:24 AM IST

ಬೆಂಗಳೂರು : ವಿದ್ಯುತ್ ಮೀಟರ್ ಅಳವಡಿಸಿ ಅವುಗಳಿಗೆ ಆರ್.ಆರ್ ಸಂಖ್ಯೆ ನೀಡಲು ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಲೈನ್‍ಮ್ಯಾನ್​ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಧಾನಿಯ ಶ್ರೀರಾಂಪುರ ಬೆಸ್ಕಾಂ ಕಚೇರಿಯ ಲೈನ್‍ಮ್ಯಾನ್ ಮಂಜುನಾಥ್ ಬಂಧಿತ ಆರೋಪಿ. ಆರೋಪಿಯಿಂದ 10 ಸಾವಿರ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿ ಕರ್ನಾಟಕ ರಾಜ್ಯ ಸ್ಲಂಬೋರ್ಡ್‍ನಿಂದ ನಿರ್ಮಿಸಿದ ಮನೆಯ ಮೇಲೆ ಕಟ್ಟಿಕೊಂಡಿರುವ ಮತ್ತೊಂದು ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಹಾಗೂ ಅವುಗಳಿಗೆ ಆರ್.ಆರ್ ಸಂಖ್ಯೆ ಪಡೆಯಲು ಶ್ರೀರಾಂಪುರ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಮೀಟರ್ ಅಳವಡಿಸಲು, ಆರ್.ಆರ್ ಸಂಖ್ಯೆ ನೀಡಲು ಲೈನ್‍ಮ್ಯಾನ್ ಮಂಜುನಾಥ್ ಮುಂಗಡವಾಗಿ 80 ಸಾವಿರ ರೂ. ಲಂಚ ಸ್ವೀಕರಿಸಿದ್ದ. ಆದರೂ ಮೀಟರ್ ಅಳವಡಿಸಿರಲಿಲ್ಲ. ಪುನಃ 10 ಸಾವಿರ ನೀಡಿದರಷ್ಟೇ ಮೀಟರ್ ಹಾಗೂ ಆರ್.ಆರ್ ಸಂಖ್ಯೆ ನೀಡುವುದಾಗಿ ಅರ್ಜಿದಾರರಿಗೆ ಬೇಡಿಕೆಯಿಟ್ಟಿದ್ದ.

ಅರ್ಜಿದಾರರು ನೀಡಿದ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು, ಲೈನ್‍ಮ್ಯಾನ್ ಮಂಜುನಾಥ್​ನನ್ನು ಶ್ರೀರಾಂಪುರ ವಾರ್ಡ್ ಬೆಸ್ಕಾಂ ಕಚೇರಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವಾಗ ಬಂಧಿಸಿದ್ದಾರೆ. ಈ ಕುರಿತ ವಿಚಾರಣೆ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.