ಬೆಂಗಳೂರು: ಪೀಣ್ಯ ಪ್ಲೈಓವರ್ನಲ್ಲಿ ಇನ್ನು ಮುಂದೆ ಲಘುವಾಹನಗಳ ಓಡಾಟಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರ ದುರಸ್ತಿ ಕಾರ್ಯ ಮುಗಿಸುವಂತೆ ಸೂಚನೆ ನೀಡಿದ್ದಾರೆ. ಲಘು ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಬಳಿಕ ಅದರ ಸಾಧಕ-ಬಾಧಕ ನೋಡಿಕೊಂಡು ದೊಡ್ಡ ವಾಹನಗಳ ಓಡಾಟಕ್ಕೆ ಫ್ಲೈ ಓವರ್ ಯೋಗ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಬಗ್ಗೆ ಸಿಎಂ, ಕೇಂದ್ರ ಸಚಿವ ಗಡ್ಕರಿಯವರಿಗೂ ಪತ್ರ ಬರೆದಿದ್ದಾರೆ ಎಂದರು.
ಇದನ್ನೂ ಓದಿ: ಅತಿ ಹೆಚ್ಚು ವಾಹನ ಸಂಚರಿಸುವ ಪೀಣ್ಯಾ ಎಲಿವೇಟೆಡ್ ಫ್ಲೈಓವರ್ ರಿಪೇರಿಗೆ ತಕ್ಷಣ ಕ್ರಮ : ಸಿಎಂ