ಬೆಂಗಳೂರು: ಕೋರ್ಟ್ ಅವರಣದಲ್ಲಿ ವಕೀಲರ ಗಲಾಟೆ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಕೋರ್ಟ್ ಆವರಣದಲ್ಲಿ ದುರ್ವರ್ತನೆ ತೋರಿರುವುದಾಗಿ ಆರೋಪಿಸಿ ಶನಿವಾರ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗವು ಪೊಲೀಸ್ ಕಮೀಷನರ್ ಕಮಲ್ ಪಂತ್ಗೆ ದೂರು ನೀಡಿದ್ದರು.
ಪೊಲೀಸರು ಇಂದು ಸಂಜೆಯೊಳಗೆ ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಜಗದೀಶ್ ಅವರನ್ನು ಹಾಜರುಪಡಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಪ್ರಕರಣವೊಂದರ ಸಂಬಂಧ ಶುಕ್ರವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಹೋದಾಗ ಕೆಲವರು ತನ್ನ ಮೇಲೆ ಹಾಗು ಪುತ್ರ ಸೇರಿದಂತೆ ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಜಗದೀಶ್ ಆರೋಪಿಸಿದ್ದರು. ಇದಾದ ನಂತರ ಶನಿವಾರ ವಕೀಲರ ಸಂಘ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.
ಇದನ್ನೂ ಓದಿ: ಎಂಎ, ಎಂಬಿಎ ಪದವೀಧರ; ಆನ್ಲೈನ್ ಟ್ರೇಡಿಂಗ್ಗೋಸ್ಕರ ಐದು ಕೊಲೆ; ಸೀರಿಯಲ್ ಕಿಲ್ಲರ್ನ ಬಂಧನ