ETV Bharat / city

ರಾಜ್ಯದಲ್ಲಿಂದು ಕಡಿಮೆ ಸೋಂಕಿತರು ಪತ್ತೆ.. ಪಾದರಾಯನಪುರದಲ್ಲಿ ಡೋರ್​ ಟು ಡೋರ್​ ಟೆಸ್ಟ್​​.. - ಕೊರೊನಾ ಕುರಿತ ಇತ್ತೀಚಿನ ಮಾಹಿತಿ

ಪಾದರಾಯನಪುರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮನೆಮನೆಗೂ ತೆರಳಿ ಸೋಂಕು ಪರೀಕ್ಷೆ ಮಾಡಲಿದ್ದಾರೆ.

corona
ಕೊರೊನಾ
author img

By

Published : May 11, 2020, 12:36 PM IST

ಬೆಂಗಳೂರು : ಕಳೆದೊಂದು ‌ವಾರದಿಂದ 30ರ ಗಡಿ ದಾಟುತ್ತಿದ್ದ ಕೊರೊನಾ ‌ಸೋಂಕು ತಕ್ಕ ಮಟ್ಟಿಗೆ ಕಡಿಮೆ ‌ಆಗಿದೆ. ‌ಇಂದು ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ 10 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿವೆ. ‌ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.‌

ಕಲಬುರ್ಗಿ, ವಿಜಯಪುರ, ಹಾವೇರಿ ತಲಾ ಒಂದೊಂದು ಕೇಸ್ ಹಾಗೂ ದಾವಣಗೆರೆ 3, ಬೀದರ್ 2, ಬಾಗಲಕೋಟೆಯಲ್ಲಿ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿನಿಂದ 422 ಮಂದಿ‌ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.‌

ಡೋರ್ ಟು ಡೋರ್ ಟೆಸ್ಟ್​​ಗೆ ಇಂದಿನಿಂದ ಚಾಲನೆ : ಪಾದರಾಯನಪುರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮನೆಮನೆಗೂ ತೆರಳಿ ಸೋಂಕು ಪರೀಕ್ಷೆ ಮಾಡಲಿದ್ದಾರೆ. ಪ್ರತಿ ಮನೆಯಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಪರೀಕ್ಷೆ ಮಾಡಲಾಗುತ್ತೆ.‌ ಆಯ್ಕೆಯಲ್ಲಿ ವಯಸ್ಸಾದವರು, ಲಕ್ಷಣ ಇದ್ದವರಿಗೆ ಮೊದಲ ಆದ್ಯತೆ. ಈ ವಾರ್ಡ್‌ನಲ್ಲಿ ಒಟ್ಟು 9,369 ಮನೆಗಳಿವೆ. 8,9,10 ಮತ್ತು11ನೇ ಕ್ರಾಸ್ ಮನೆಗಳಲ್ಲಿ ಒಟ್ಟು 25 ಜನರಿಗೆ ಸೋಂಕು ‌ಪರೀಕ್ಷೆ ನಡೆಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.