ETV Bharat / city

ಆನ್​ಲೈನ್ ತರಗತಿಗಳ ಪಾಠ: ಮಹಿಳಾ ಶಿಕ್ಷಕಿಯರಿಗೆ ಕಾಟ; ಈ ಕುರಿತೊಂದು ಸವಿಸ್ತಾರ ವರದಿ! - Karnataka government

ಶಾಲಾ-ಕಾಲೇಜು​, ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಆನ್​ಲೈನ್​ ತರಗತಿ ಪ್ರಾರಂಭಿಸಲಾಗಿದೆ. ಆದರೆ, ಅದು ವಿದ್ಯಾರ್ಥಿಗಳು ಮೇಲೆ ಎಷ್ಟು‌ ಪರಿಣಾಮ ಬೀರುತ್ತದೆಯೋ‌ ಪ್ರಾಧ್ಯಾಪಕರ ಮೇಲೂ ಅಷ್ಟೇ ಪ್ರಭಾವ ಬೀರುತ್ತಿದೆ. ಹೀಗಾಗಿ, ಕೂಡಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದರೆ ಆ ಸಮಸ್ಯೆಗಳಿಂದ ಹೊರ ಬರಬಹುದು ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Online class
ಆನ್​ಲೈನ್ ತರಗತಿ
author img

By

Published : Aug 26, 2020, 8:22 PM IST

ಬೆಂಗಳೂರು: ಕೊರೊನಾ ಕಾರಣದಿಂದ ಶಾಲಾ-ಕಾಲೇಜುಗಳನ್ನು ಇನ್ನೂ ಆರಂಭಿಸಿಲ್ಲ. ಹೀಗಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಇಟ್ಟುಕೊಂಡು ಆನ್​ಲೈನ್​ ಶಿಕ್ಷಣ ವ್ಯವಸ್ಥೆ ಜಾರಿ ತರಲಾಗಿದೆ. ಬಡವರು ಮೊಬೈಲ್​ ​ಖರೀದಿಸಲು ಸಾಧ್ಯವಿಲ್ಲದ ಕಾರಣ ಗ್ರಾಮೀಣ ಮಕ್ಕಳು ತರಗತಿಗಳಿಂದ ದೂರವಿದ್ದರೆ, ಇನ್ನೂ ಕೆಲವರಿಗೆ ನೆಟ್​​ವರ್ಕ್​ ಸಮಸ್ಯೆ. ಆದರೆ, ಮೊಬೈಲ್​ ಮತ್ತು ಲ್ಯಾಪ್​ಟ್ಯಾಪ್​​ ಇದ್ದವರು ಮಹಿಳಾ ಶಿಕ್ಷಕಿಯರ ಮೊಬೈಲ್​​ ನಂಬರ್​​ಗಳನ್ನು ಪಡೆದು ಸಿಕ್ಕ ಸಿಕ್ಕಾಗ ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ ಎನ್ನಲಾಗ್ತಿದೆ.

ಮೊದಲು ಶೇ.20 ರಿಂದ 30ರಷ್ಟಿದ್ದ​ ತರಗತಿಗಳು, ಇದೀಗ ಫುಲ್ ​​ಟೈಂ​ ಆಗಿವೆ. ಏನೋ ಪಾಪ ಎಂದು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸರ್ಕಾರ ಚಿಂತನೆ ನಡೆಸಿದರೆ, ಮಕ್ಕಳು ಆನ್‌ಲೈನ್ ಕ್ಲಾಸ್​ಗಳಲ್ಲಿ ಶಿಕ್ಷಕರ ವೈಯಕ್ತಿಕ​​​ ಮೊಬೈಲ್ ನಂಬರ್‌ಗಳನ್ನು ಪಡೆದು ಅನಗತ್ಯ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ವಿದ್ಯಾರ್ಥಿಗಳು ಮನೆಯಲ್ಲಿಯೇ ಸ್ಮಾರ್ಟ್​​ಫೋನ್, ಟ್ಯಾಬ್, ಲ್ಯಾಪ್​​ಟಾಪ್​​ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಅಂದ ಹಾಗೆ ಈ ಕ್ಲಾಸ್​​ಗಾಗಿ ಬೇರೆ ಬೇರೆ ಆ್ಯಪ್​​ನಲ್ಲಿ ಕನೆಕ್ಟ್ ಮಾಡಲಾಗುತ್ತೆ. ಆಗ‌ ಶಿಕ್ಷಕರ ಮೊಬೈಲ್ ನಂಬರ್, ಇ-ಮೇಲ್ ಐಡಿ ನೀಡಲಾಗುತ್ತೆ. ಈ ವೇಳೆ ವಿದ್ಯಾರ್ಥಿನಿಯರ ಮತ್ತು ಶಿಕ್ಷಕಿಯರ ನಂಬರ್​ಗಳನ್ನ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ. ಅದನ್ನೇ ದುರುಪಯೋಗ ಮಾಡಿಕೊಂಡು ಕೆಲವರು ಅವರಿಗೆ ಅನಗತ್ಯ ಸಂದೇಶ​, ಕರೆ ಮಾಡುವುದು ಮತ್ತು ಬೆದರಿಕೆ ಕರೆಗಳನ್ನು ಮಾಡಲಾಗುತ್ತದೆ. ಅದಲ್ಲದೇ, ಸರ್ವರ್ ಹ್ಯಾಕ್ ಮಾಡುವುದು ಬಳಿಕ ಆಡಳಿತ ಮಂಡಳಿಗೆ ಹಣಕ್ಕಾಗಿ ಪೀಡಿಸುವುದು ಎಲ್ಲವೂ ಆಗುವ ಸಾಧ್ಯತೆಗಳಿವೆ.

ಆನ್​ಲೈನ್​ ತರಗತಿಗಳಿಂದ ಸಮಸ್ಯೆ ಎದುರಿಸಲಿರುವ ಶಿಕ್ಷಕಿಯರು

ಹುಬ್ಬಳ್ಳಿಯಲ್ಲೂ ಅದೇ ರೀತಿ ಶಿಕ್ಷಕಿಯರು ತೊಂದರೆ ಅನುಭವಿಸುತ್ತಿದ್ದಾರೆ. ಶಿಕ್ಷಕಿಯರ ನಂಬರಿಗೆ ಬೇಕಾ‌ಬಿಟ್ಟಿ ಕರೆಗಳು, ಮೆಸೇಜ್​ಗಳು, ವಿಡಿಯೋಗಳನ್ನು ಕಳುಹಿಸಿ ಮಾನಸಿಕ ‌ಹಿಂಸೆ ಕೊಡುತ್ತಿದ್ದಾರೆ. ಇದು ತಮ್ಮ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು. ಇನ್ನು ಹಲವು ವಿದ್ಯಾರ್ಥಿಗಳು ಆನ್​ಲೈನ್ ತರಗತಿಯಲ್ಲಿ ತಿಳಿಯದ ವಿಷಯವನ್ನು ಫೋನ್ ಮಾಡಿ‌ ಕೇಳುತ್ತಾರೆ. ಇದರಿಂದ ಕಿರಿಕಿರಿ ಅನುಭವಿಸುವಂತಾಗುತ್ತಿದೆ ಎನ್ನುತ್ತಿದ್ದಾರೆ ಪ್ರಾಧ್ಯಾಪಕಿಯರು.

ಇದಕ್ಕಾಗಿ ಆಯಾ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮಹಿಳಾ ಶಿಕ್ಷಕಿಯರಿಗೆ ಹೊಸ ಸಿಮ್​ಕಾರ್ಡ್ ನೀಡಿದರೆ ಉತ್ತಮ. ಹಾಗೆಯೇ ಆನ್​ಲೈನ್ ಆ್ಯಪ್​​ನಲ್ಲಿ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಬದಲಿಗೆ ಶೆಡ್ಯೂಲ್ ಕ್ಲಾಸ್ ಮಾಡಿದರೆ ಚೆನ್ನಾಗಿರುತ್ತೆ. ಕಾಲೇಜಿನಲ್ಲಿ ಆಯಾ ಡಿಪಾರ್ಟ್​ಮೆಂಟ್​​ ಜವಾಬ್ದಾರಿಯನ್ನು ನೋಡಿಕೊಳ್ಳುವುದರಿಂದ ಶಿಕ್ಷಕರ ಪಾತ್ರ ಕಡಿಮೆ ಆಗಲಿದ್ದು, ಅನಗತ್ಯ ತೊಂದರೆ ಒಳಗಾಗುವುದು ತಪ್ಪಲಿದೆ ಎನ್ನುತ್ತಾರೆ ಉಪನ್ಯಾಸಕಿಯರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.