ETV Bharat / city

ಚಾಲಾಕಿ ಸ್ನೇಹಿತೆ.. ಗೆಳತಿಗೆ ಮದುವೆ ಕಾರ್ಡ್​ ಕೊಡಲು ಬಂದು ಮನೆಯಲ್ಲಿದ್ದ ಚಿನ್ನಾಭರಣ ಕದ್ದಳು! - A lady came to give wedding card stole jewelry

ಸ್ನೇಹಿತೆಯ ಮನೆಗೆ ಬಂದ ಚಾಲಾಕಿವೋರ್ವಳು ಬಟ್ಟೆ ಬದಲಿಸುವ ನೆಪದಲ್ಲಿ ಬೀರುವಿನ ಲಾಕರ್​ನಲ್ಲಿದ್ದ 206 ಗ್ರಾಂ ಚಿನ್ನಾಭರಣ ಕದ್ದಿರುವ ಆರೋಪ ಕೇಳಿಬಂದಿದೆ.

Lady stole jewelry
ಕಳ್ಳಿ ಸ್ನೇಹಿತೆ
author img

By

Published : Dec 16, 2021, 1:05 PM IST

Updated : Dec 16, 2021, 4:45 PM IST

ಬೆಂಗಳೂರು: ಸ್ನೇಹಿತೆಯನ್ನು ಮದುವೆಗೆ ಆಹ್ವಾನಿಸಲು ಅವಳ ಮನೆಗೆ ಬಂದು ಬಟ್ಟೆ ಬದಲಿಸುವ ನೆಪದಲ್ಲಿ ಬೀರುವಿನಲ್ಲಿದ್ದ 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಗೆಳತಿಯೇ ಅಪಹರಿಸಿದ ಆರೋಪ ಪ್ರಕರಣ ಇಲ್ಲಿನ ದೇವರಜೀವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ದೇವರಜೀವನಹಳ್ಳಿ ನಿವಾಸಿ ಆಜಾರ್​ ಸಿದ್ದಿಕ್ ಬಂಧಿತ ಆರೋಪಿಯಾಗಿದ್ದಾಳೆ. ಪಾದರಾಯನಪುರ ನಿವಾಸಿಯಾಗಿರುವ ರೋಹಿನಾಜ್ ಎಂಬಾಕೆ ನೀಡಿರುವ ದೂರಿನ‌ ಮೇರೆಗೆ ಆಜಾರ್ ಸಿದ್ದಿಕ್​ಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಲಾಕಿ ಸ್ನೇಹಿತೆ.. ಗೆಳತಿಗೆ ಮದುವೆ ಕಾರ್ಡ್​ ಕೊಡಲು ಬಂದು ಮನೆಯಲ್ಲಿದ್ದ ಚಿನ್ನಾಭರಣ ಕದ್ದಳು!

ರೋಹಿನಾಜ್ ಹಾಗೂ ಆಜಾರ್​ ಇಬ್ಬರು ಆಪ್ತ ಸ್ನೇಹಿತೆರಾಗಿದ್ದಾರೆ. ಡಿ.14 ರಂದು ಆಜಾರ್​, ಅಣ್ಣನ ಮದುವೆ ಸಲುವಾಗಿ ಆಹ್ವಾನ ಪತ್ರಿಕೆ ನೀಡಲು ರೋಹಿನಾಜ್ ಮನೆಗೆ ಬಂದಿದ್ದಳು. ಬಳಿಕ ತನಗೆ ಪಿರಿಯಡ್ಸ್ ಆಗಿದೆ. ಬಟ್ಟೆ ಬದಲಿಸಬೇಕೆಂದು ಹೇಳಿದ್ದಾಳೆ. ರೂಮಿಗೆ ಹೋಗಿ ಬಟ್ಟೆ ಬದಲಾಯಿಸುವಂತೆ ರೋಹಿನಾಜ್ ಹೇಳಿದ್ದಳು.‌

ಇದರಂತೆ ರೂಂಗೆ ಹೋದ ಆಜಾರ್​ ಬಟ್ಟೆ ಬದಲಿಸುವ ನೆಪದಲ್ಲಿ ಬೀರುವಿನ ಲಾಕರ್​ನಲ್ಲಿದ್ದ 206 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಬಟ್ಟೆ ಬದಲಿಸಿ ಕೆಲ ಹೊತ್ತು ಮನೆಯಲ್ಲೇ ಇದ್ದು ನಂತರ ತೆರಳಿದ್ದಾಳೆ. ಮಾರನೇ ದಿನ ಬೀರುವಿನ ಲಾಕರ್ ಓಪನ್ ಆಗಿರುವುದನ್ನು ಕಂಡ ಮನೆಯವರು ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗೊತ್ತಾಗಿದೆ.

Lady stole jewelry
ಇನ್​ಸ್ಪೆಕ್ಟರ್ ಡಿ.ಸಿ.ಮಂಜು

ಇದನ್ನೂ ಓದಿ: ಮಹಿಳೆಯರ ವಿವಾಹದ ವಯಸ್ಸು ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು: ಶೀಘ್ರದಲ್ಲೇ ಮಸೂದೆ ಮಂಡನೆ

ಈ ಬಗ್ಗೆ ವಿಚಾರಿಸಿದಾಗ ಆಜಾರ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸ್ನೇಹಿತೆ ರೋಹಿನಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್​ಸ್ಪೆಕ್ಟರ್ ಡಿ.ಸಿ.ಮಂಜು ನೇತೃತ್ವದ ತಂಡ ಶಂಕೆ‌ಯ ಮೇರೆಗೆ ಆಜಾರ್​ನನ್ನು ವಿಚಾರಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ.

ನೀರಿನ ಸಂಪ್​ನಲ್ಲಿ ಬಚ್ಚಿಟ್ಟಿದ್ದಳು!

ಸ್ನೇಹಿತೆಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಡಿ.ಜೆ.ಹಳ್ಳಿಯಲ್ಲಿರುವ ತನ್ನ ನಿವಾಸ ಪಕ್ಕದ ಶೀಟ್ ಮನೆಯೊಂದರ ಮೇಲಿನ ನೀರಿನ ಟ್ಯಾಂಕ್​ನಲ್ಲಿ ಬಚ್ಚಿಟ್ಟಿದ್ದಳು. ಕಳ್ಳತನ ಕೃತ್ಯದ ಬಗ್ಗೆ ಆರೋಪಿತೆ ಮನೆಯವರಿಗೂ ತಿಳಿದಿತ್ತು. ವಿಚಾರಣೆಯ ಆರಂಭದಲ್ಲಿ ಕಳ್ಳತನವೇ ಮಾಡಿಲ್ಲ ಎಂದು ವಾದಿಸಿದ್ದ ಆರೋಪಿ, ಸಾಕ್ಷಿಗಳನ್ನು ತೋರಿಸಿದಾಗ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Last Updated : Dec 16, 2021, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.