ETV Bharat / city

ಬೆಂಗಳೂರಿನಲ್ಲಿ ಮತ್ತೆ ಶುರುವಾಯಿತೇ ಐಸಿಯು ಬೆಡ್​​​ಗಳ ಸಮಸ್ಯೆ? - ವೆಂಟಿಲೇಟರ್ ಬೆಡ್​

ಖಾಸಗಿ ಆಸ್ಪತ್ರೆಗಳು ಕೋವಿಡೇತರ ರೋಗಿಗಳನ್ನೂ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ನೀಡಬೇಕಿರುವ ಶೇ.50ರಷ್ಟು ಹಾಸಿಗೆಗಳ ಕೊರತೆ ಎದುರಾಗುತ್ತಿವೆ ಎಂದು ಬಿಬಿಎಂಪಿ‌‌‌ ವಿಶೇಷ ಆಯುಕ್ತ ರಂದೀಪ್ ಹೇಳಿದರು.

Hospital bed
ಆಸ್ಪತ್ರೆಯಲ್ಲಿ ಬೆಡ್​ಗಳು
author img

By

Published : Sep 16, 2020, 7:52 PM IST

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರು ಹಾಗೂ ಸಕ್ರಿಯ ಪ್ರಕರಣಗಳಿರುವ ನಗರ. ಅಷ್ಟೇ ಅಲ್ಲ ದೇಶದಲ್ಲೇ 2ನೇ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರ ಅಂದರೆ ಅದು ಬೆಂಗಳೂರು. ಇಷ್ಟರ ಪ್ರಮಾಣದಲ್ಲಿ ಸಕ್ರಿಯ ಪ್ರಕರಣಗಳು ಇರುವ ಈ ನಗರದಲ್ಲಿ ಐಸಿಯು ಹಾಸಿಗೆಗಳ ಕೊರತೆ ಎದುರಾಗಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಿನ ಆರಂಭದಿಂದಲ್ಲೂ ನಿತ್ಯ 9 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತಿದೆ. 800ಕ್ಕೂ ಹೆಚ್ಚು ಜನರು ಐಸಿಯು‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಐಸಿಯು ಬೆಡ್​ಗಳ‌ ಕೊರತೆ ಉಂಟಾಗಿದೆ. ಐಸಿಯು ಬೆಡ್ ಇಲ್ಲ ಎಂಬ ಹಳೇ ಮಾತು ಕೇಳಿ ಬರುತ್ತಿರುವ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಪಾಲಿಕೆ ಎಚ್ಚೆತುಕೊಳ್ಳುತ್ತಿದೆ.

ಈ ಸಂಬಂಧ ಮಾಹಿತಿ ನೀಡಿರುವ ಬಿಬಿಎಂಪಿ‌‌‌ ವಿಶೇಷ ಆಯುಕ್ತ ರಂದೀಪ್, ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್​ ರೋಗಿಗಳನ್ನು ಶಿಫಾರಸು​ ಮಾಡಿದರೆ ಆ ಆಸ್ಪತ್ರೆಗಳು ಐಸಿಯು ಬೆಡ್​ಗಳಿಲ್ಲ ಎಂದು ವಾಪಸ್​ ಕಳಿಸುತ್ತಿವೆ. ಅಂಕಿ-ಅಂಶದ ಪ್ರಕಾರ 400 ಐಸಿಯು ಬೆಡ್​ಗಳಿವೆ. ಆದರೆ, ಬೇರೆ ಬೇರೆ ಕಾರಣ ನೀಡಿ ಇಲ್ಲಿ‌ ಬೆಡ್ ಇಲ್ಲ, ಸಿಬ್ಬಂದಿ ಇಲ್ಲ ಎಂದು ರೋಗಿಗಳನ್ನು ವಾಪಸ್​ ಕಳುಹಿಸುತ್ತಿರುವುದು ಗೊತ್ತಾಗಿದೆ. ನಮ್ಮ ಗಮನಕ್ಕೆ ಬಂದಂತೆ ಖಾಸಗಿ ಆಸ್ಪತ್ರೆಗಳು ಕೋವಿಡೇತರ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ನೀಡಬೇಕಿರುವ ಶೇ.50ರಷ್ಟು ಹಾಸಿಗೆಗಳ ಕೊರತೆ ಎದುರಾಗುತ್ತಿವೆ ಎಂದರು.

ಬಿಬಿಎಂಪಿ‌‌‌ ವಿಶೇಷ ಆಯುಕ್ತ ರಂದೀಪ್

ಶೋಕಾಸ್ ನೋಟಿಸ್ ನೀಡಲು ತೀರ್ಮಾನ: 100-150 ಹಾಸಿಗೆಗಳ ಸಾಮರ್ಥ್ಯವುಳ್ಳ ಸುಮಾರು 20 ಆಸ್ಪತ್ರೆಗಳಿಗೆ ವಿಕೋಪ ನಿಯಂತ್ರಣ ಕಾಯ್ದೆಯಡಿ ಹಾಗೂ ಕೆಪಿಎಂ‌ಇ ನೋಟಿಸ್ ನೀಡಲು ಪಾಲಿಕೆ ಆಯುಕ್ತರು ತಯಾರಿ ನಡೆಸಿದ್ದಾರೆ. 48 ಗಂಟೆಯೊಳಗೆ ಎಲ್ಲ ರೋಗಿಗಳ ಮಾಹಿತಿ ನೀಡಬೇಕು. ನಿಗದಿಪಡಿಸಿರುವ ಶೇ.50ರಷ್ಟು ಬೆಡ್​ಗಳಲ್ಲಿ ಎಷ್ಟು ಬಳಕೆಯಾಗಿವೆ ಎಂಬ ಮಾಹಿತಿ ನೀಡುವಂತೆ ಶೋಕಾಸ್ ನೋಟಿಸ್ ನೀಡಲಿದ್ದಾರೆ. ಉತ್ತರ ಕೊಡದೇ ಇದ್ದರೆ ಲೈಸೆನ್ಸ್ ರದ್ದುಪಡಿಸುವ ಜೊತೆಗೆ ಆಸ್ಪತ್ರೆಯನ್ನು ಟೇಕ್ ಓವರ್ ಮಾಡುವ ಎಚ್ಚರಿಕೆ ನೀಡಿದ್ದಾರೆ ಎಂದರು.

ಐಸಿಯು ಬೆಡ್​​ಗಳ ಸಂಖ್ಯೆ ಹೆಚ್ಚಿಸಲು ನಿರ್ಧಾರ: ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್​ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರವೂ ನಿರ್ದೇಶನ ನೀಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 20 ಹಾಗೂ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹೆಚ್ಚುವರಿ 20 ಐಸಿಯು ಬೆಡ್​ಗಳು ಒಂದು ವಾರದಲ್ಲಿ ಸಜ್ಜಾಗಲಿದೆ ಎಂದು ರಂದೀಪ್ ತಿಳಿಸಿದರು. ಜೊತೆಗೆ 100 ವೆಂಟಿಲೇಟರ್ ಬೆಡ್​ಗಳನ್ನು ಖಾಸಗಿ ಆಸ್ಪತ್ರೆಗೆ ನೀಡುವ ಸಂಬಂಧವೂ ಚಿಂತನೆ‌ ನಡೆಯುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.