ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನ ನನ್ನನ್ನು ಮನೆಮಗಳಂತೆ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮನೆ ಮಗಳು ಮನೆಗೆ ಬಂದಿದ್ದಾಳೆ ಅನ್ನೋ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಅರಿಶಿನ ಕುಂಕುಮ ಕೊಟ್ಟು ಉಡಿ ತುಂಬ್ತಿದ್ದಾರೆ. ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ.
ಶರವಣ ಹೇಳಿಕೆ ವಿಚಾರ ಪ್ರಸ್ತಾಪಿಸಿ, 2015 ರಲ್ಲಿ ಏನಾಗಿದೆ, ಆಗ ಯಾವ ರೀತಿ ಅನುಭವಿಸಿದ್ದೇನೆ ಅನ್ನೋದು ನಂಗೆ ಗೊತ್ತಿದೆ. ಅವರ ಮನೆಯಲ್ಲಿ ಆ ರೀತಿ ಆಗಿದ್ರೇ ಏನ್ ಹೇಳ್ತಿದ್ರು. ನಂಗೆ ಆಗಿರೋ ನೋವು ನನಗಿರಲಿ. ಖಾಸಗಿ ವಿಚಾರನಾ ಯಾಕೆ ಮಾತನಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಮಕ್ಕಳು ಇರ್ತಾರೆ, ಅವರಲ್ಲೂ ದುರಂತಗಳು ನಡೀತಿವೆ. ವೈಯಕ್ತಿಕ ವಿಚಾರನಾ ಮಾತನಾಡೊದ್ರಿಂದ ಸಮಸ್ಯೆಗಳು ಬಗೆಹರಿಯುತ್ತವಾ? ಎಂದರು.
ಮುನಿರತ್ನ ಕಣ್ಣೀರು ವಿಚಾರ ಪ್ರಸ್ತಾಪಿಸಿ, ನಾನು ಬೆಳಗ್ಗೆಯಿಂದ ಪ್ರಚಾರದಲ್ಲಿ ಇದ್ದೇನೆ. ಅವರು ಯಾಕೆ ಕಣ್ಣೀರು ಹಾಕಿದ್ದಾರೋ ಗೊತ್ತಿಲ್ಲ. ನಾನು ಭಾವನಾತ್ಮಕ ಜೀವಿ, ಅವರು ಯಾಕ್ ಕಣ್ಣೀರು ಹಾಕಿದ್ದಾರೋ ಗೊತ್ತಿಲ್ಲ ಎಂದರು.