ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೊಂಚ ಮಟ್ಟಿಗೆ ಬ್ರೇಕ್ ನೀಡಲಾಗಿದೆ. ಹಗರಣದ ತನಿಖಾಧಿಕಾರಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಂಗಳೂರಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕುರಿತ ಗಲಭೆಯ ತನಿಖೆಗೆ ತೆರಳಿದ್ದಾರೆ.
ಸಂದೀಪ್ ಪಾಟೀಲ್ ಗಲಭೆಯ ತನಿಖೆಗೆ ತೆರಳಿರುವ ಕಾರಣ ಕೆಪಿಎಲ್ನಲ್ಲಿ ಭಾಗಿಯಾದ ಕೆಲವರು ಕೊಂಚ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ. ಆದ್ರೆ ಪೌರತ್ವ ಕಿಚ್ಚು ಸ್ವಲ್ಪಮಟ್ಟಿಗೆ ಕಡಿಮೆಯಾದ ತಕ್ಷಣ ಮತ್ತೆ ಕೆಪಿಎಲ್ ಹಗರಣದ ತನಿಖೆಯನ್ನ ಸಿಸಿಬಿ ಪೊಲೀಸರು ಚುರುಕುಗೊಳಿಸಲಿದ್ದಾರೆಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಹಾಗೆಯೇ ಸದ್ಯ ಕೆಪಿಎಲ್ ಹಗರಣದಲ್ಲಿ ಬಹುತೇಕ ಆಟಗಾರರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಆದರೆ ಹಗರಣದಲ್ಲಿ ನಟಿಯರ ಹೆಸರು ಕೇಳಿಬಂದ ಹಿನ್ನೆಲೆ ಅವರಿಗೂ ಸದ್ಯ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವ ಎಲ್ಲಾ ಲಕ್ಷಣಗಳು ಇವೆ ಎಂದು ಸಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.