ETV Bharat / city

ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಂದೇ ಹೈಕಮಾಂಡ್​​ಗೆ ರವಾನೆ: ಡಿ.ಕೆ. ಶಿವಕುಮಾರ್

ಎಲ್ಲಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಹೈಕಮಾಂಡ್​ಗೆ ಬಿಟ್ಟಿದ್ದೇವೆ. ಆಕಾಂಕ್ಷಿಗಳ ಪಟ್ಟಿಯನ್ನು ಇಂದೇ ಹೈಕಮಾಂಡ್​ಗೆ ಕಳಿಸಿಕೊಡುತ್ತಿದ್ದು, ಅವರು ಅಂತಿಮ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

KPCC President DK Shivakumar statement about Assembly by-election
ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಂದೇ ಹೈಕಮಾಂಡ್​​ಗೆ ರವಾನೆ: ಡಿ.ಕೆ.ಶಿವಕುಮಾರ್
author img

By

Published : Oct 4, 2020, 4:42 PM IST

ಬೆಂಗಳೂರು: ಯಾವುದೇ ಚುನಾವಣೆಗೆ ಹೈಕಮಾಂಡ್ ಮೂಲಕವೇ ಟಿಕೆಟ್ ನೀಡುವ ಸಂಪ್ರದಾಯ ನಮ್ಮದು. ಈ ಹಿನ್ನೆಲೆ ನಮ್ಮ ಮುಂದಿರುವ ಚುನಾವಣೆಗಳ ಅಭ್ಯರ್ಥಿಯ ಆಯ್ಕೆಗೆ ಆಕಾಂಕ್ಷಿಗಳ ಪಟ್ಟಿಯನ್ನು ಇಂದೇ ಹೈಕಮಾಂಡ್​​ಗೆ ಕಳಿಸಿಕೊಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಂದೇ ಹೈಕಮಾಂಡ್​​ಗೆ ರವಾನೆ: ಡಿ.ಕೆ.ಶಿವಕುಮಾರ್

ಕೆಪಿಸಿಸಿ ಕಚೇರಿಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರು ಮಂದಿ ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಾರಿ ವಿಧಾನಸಭೆಯ ಎರಡು ಕ್ಷೇತ್ರಗಳಾದ ರಾಜರಾಜೇಶ್ವರಿನಗರ ಹಾಗೂ ಶಿರಾದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಜೊತೆಗೆ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಬಂದಿದೆ. ಎಲ್ಲಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಹೈಕಮಾಂಡ್​ಗೆ ಬಿಟ್ಟಿದ್ದೇವೆ. ಆಕಾಂಕ್ಷಿಗಳ ಪಟ್ಟಿಯನ್ನು ಇಂದೇ ಹೈಕಮಾಂಡ್​ಗೆ ಕಳಿಸಿಕೊಡುತ್ತಿದ್ದು, ಅವರು ಅಂತಿಮ ಪ್ರಕಟಣೆ ಹೊರಡಿಸಲಿದ್ದಾರೆ ಎಂದರು.

ತುಮಕೂರು ಜಿಲ್ಲೆ ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದೆ. ನಾವು ಒಗ್ಗಟ್ಟಾಗಿದ್ದೇವೆ. ಜಿಲ್ಲೆಯ ಅನೇಕ ನಾಯಕರನ್ನು ನಾವು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಕ್ಷೇತ್ರದಲ್ಲಿ ಬದಲಾವಣೆ ತರುವಂತಹ ನಾಯಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಒಂದೇ ಅನಿವಾರ್ಯ ಎಂಬುದನ್ನು ಮನಗಂಡು ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್​ನಿಂದಲೂ ಸಾಕಷ್ಟು ತೊಂದರೆಗಳನ್ನು ಕ್ಷೇತ್ರದಲ್ಲಿ ಕೆಲವರು ಎದುರಿಸಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಹಲವರಿಗೆ ನಿರೀಕ್ಷೆ ಇಲ್ಲವಾಗಿದೆ. ಕಾಂಗ್ರೆಸ್ ಒಂದೇ ಪ್ರಮುಖ ಆಯ್ಕೆ ಎಂದು ಪರಿಗಣಿಸಿ ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಸಾಕಷ್ಟು ಮಂದಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಆದರೆ ಇಂದು ಕೇವಲ 100 ಮಂದಿಗೆ ಮಾತ್ರ ಇಲ್ಲಿ ಬರಲು ಅವಕಾಶ ಕಲ್ಪಿಸಲಾಗಿದೆ. ಸಾಕಷ್ಟು ಯುವಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಉತ್ಸಾಹ ತೋರಿಸುತ್ತಿರುವುದು ಸಮಾಧಾನದ ಸಂಗತಿ. ಯಾವ ಪಕ್ಷದವರು ಏನೇ ಕಾರ್ಯತಂತ್ರ ರೂಪಿಸಿದರೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ನಾವು ಈ ಸಾರಿ ಗೆದ್ದೇ ಗೆಲ್ಲುತ್ತೇವೆ. ಜಿಲ್ಲೆಯ ಎಲ್ಲ ನಾಯಕರು ಒಂದಾಗಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ನಾವೆಲ್ಲ ರಾಜ್ಯ ನಾಯಕರು ಒಟ್ಟಾಗಿ ಸೇರಿ ಚುನಾವಣೆಯನ್ನು ಮಾಡುತ್ತೇವೆ. ಯಾರನ್ನು ಹೆಚ್ಚು ಕಡಿಮೆ ಎಂದು ಭಾವಿಸದೆ ಕುಟುಂಬದ ರೀತಿ ಎಲ್ಲರನ್ನೂ ಬಳಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಎಲ್ಲರ ಸಾಮರ್ಥ್ಯವನ್ನು ಬಳಸಿಕೊಂಡು ಪಕ್ಷದ ಸಂಘಟನೆಗೆ ಕ್ರಮ ಕೈಗೊಳ್ಳುತ್ತೇವೆ. ಇಂದು ಸೇರ್ಪಡೆಯಾದವರ ನಾಯಕತ್ವವನ್ನು ನಾವು ಯಾವತ್ತೂ ಅಲ್ಲಗಳೆಯುವುದಿಲ್ಲ. ಮುಂದಿನ ಸಂದರ್ಭಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೊಸಬರು ಹಳಬರು ಎಂದು ತಾರತಮ್ಯ ಎಣಿಸದೇ, ಸಾಮರ್ಥ್ಯವಿರುವ ಅವರ ಆಯ್ಕೆಗೆ ಕಾಂಗ್ರೆಸ್ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಮುಕ್ತವಾಗಿ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಬೇಷರತ್ತಾಗಿ ಪಕ್ಷಕ್ಕೆ ಆಗಮಿಸಲು ಬಯಸುವವರನ್ನು ನಮ್ಮ ಸಮಿತಿಯ ಮೂಲಕ ಮುಂದಿನ ದಿನಗಳಲ್ಲಿ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳುತ್ತೇವೆ. ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಅವರನ್ನೆಲ್ಲ ಸ್ವಾಗತಿಸುತ್ತೇನೆ. ಎಲ್ಲರೂ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ತಾವೆಲ್ಲ ಪಕ್ಷದ ಸದಸ್ಯರು ಎಂದು ಗುರುತಿಸಿಕೊಳ್ಳುವುದೇ ದೊಡ್ಡ ಸೌಭಾಗ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಟ್ಟಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಎಂದು ಕರೆಕೊಟ್ಟರು.

ಸಹಿ ಸಂಗ್ರಹಕ್ಕೆ ಬೆಂಬಲಿಸಲು ಮನವಿ: ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ರಾಷ್ಟ್ರೀಯ ನಾಯಕಿ ಸೋನಿಯಾಗಾಂಧಿ ರೈತರು ಹಾಗೂ ನಾಗರಿಕರ ಸಹಿ ಸಂಗ್ರಹ ಕಾರ್ಯಕ್ಕೆ ಆದೇಶ ನೀಡಿದ್ದು ರಾಜ್ಯದಿಂದಲೂ ಸಾಕಷ್ಟು ದೊಡ್ಡ ಸಂಖ್ಯೆಯ ಸಹಿಸಂಗ್ರಹ ಆಗಬೇಕಿದೆ. ಈ ಹಿನ್ನೆಲೆ ಜಿಲ್ಲೆಯ ಮುಖಂಡರಿಗೂ ಅರ್ಜಿ ನಮೂನೆಯನ್ನು ಕಳುಹಿಸಿಕೊಡಲಿದ್ದೇವೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಸಹಿ ಸಂಗ್ರಹ ಮಾಡಿ ಕಳುಹಿಸಿಕೊಡುವ ಸಹಕಾರ ನೀಡಿ. ಕೇವಲ ಶಿರಾ ಕ್ಷೇತ್ರದ ಕಾರ್ಯಕರ್ತರಿಗೆ ಮಾತ್ರ ಈ ಕರೆ ನೀಡುತ್ತಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಈ ಸಹಿ ಸಂಗ್ರಹ ಕಾರ್ಯವನ್ನು ನಡೆಸಿ ಕೊಡಬೇಕು ಎಂದು ಪ್ರಾರ್ಥಿಸಿದರು.

ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಮಾನವೀಯತೆಗೆ ದೊಡ್ಡ ಅವಮಾನ ಆಗುತ್ತಿದೆ. ಯೋಗಿ ಸರ್ಕಾರ ಇಡೀ ದೇಶಕ್ಕೆ ರೋಗಿ ಸರ್ಕಾರವಾಗಿ ಗೋಚರಿಸುತ್ತಿದೆ. ಹೋರಾಟಕ್ಕೆ ಮುಂದಾದ ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಯನ್ನು ಪೊಲೀಸರು ಹೀನವಾಗಿ ನಡೆಸಿಕೊಂಡಿದ್ದಾರೆ. ಹಿಂದೆ ನಿರ್ಭಯಾ ಪ್ರಕರಣದಲ್ಲಿ ಯುಪಿಎ ಸರ್ಕಾರ ಯಾವ ರೀತಿ ನಿರ್ವಹಣೆ ಮಾಡಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಹಿಂದಿನ ಸರ್ಕಾರ ಯಾವ ರೀತಿ ಉತ್ತರಪ್ರದೇಶದ ಅತ್ಯಾಚಾರ ಪ್ರಕರಣವನ್ನು ಪರಿಗಣಿಸಿದೆ ಎನ್ನುವುದು ಜನರ ಕಣ್ಣಮುಂದಿದೆ. ಇದು ದೇಶದ ದೊಡ್ಡ ಕಳಂಕ. ಇದರ ವಿರುದ್ಧವಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾಳೆ ಬೆಳಗ್ಗೆ 11ಗಂಟೆಗೆ ಗಾಂಧಿ ಭವನದ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೂಡ ಕಾಂಗ್ರೆಸ್ ಕಾರ್ಯಕರ್ತರು ಇದೇ ಸಮಯದಲ್ಲಿ ಸೂಕ್ತ ಸ್ಥಳ ಗುರುತಿಸಿ ಪ್ರತಿಭಟನೆ ನಡೆಸಬೇಕು ಎಂದು ಕರೆಕೊಟ್ಟರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ ಪರಮೇಶ್ವರ್, ಶಿರಾ ಕ್ಷೇತ್ರದ ಅಭ್ಯರ್ಥಿ ಟಿಬಿ ಜಯಚಂದ್ರ, ಮುಖಂಡರಾದ ಕೆ ಎನ್ ರಾಜಣ್ಣ, ಮಾಜಿ ಸಂಸದ ಬಿಎನ್ ಚಂದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.