ETV Bharat / city

ಸ್ವಾಬ್ ಕಿಟ್ ದುರುಪಯೋಗ : ಕೊಡಿಗೆಹಳ್ಳಿ ಆರೋಗ್ಯ ವೈದ್ಯಾಧಿಕಾರಿ ಅಮಾನತು.. - ಕೊಡಿಗೆಹಳ್ಳಿ ಸ್ವಾಬ್ ಕಿಟ್ ದುರುಪಯೋಗ

ಡಾ. ಪ್ರೇಮಾನಂದ್​​ ಹೇಳಿಕೆ ಸಮಂಜಸವಾಗಿಲ್ಲ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸುಗಿರುವುದು ಕಂಡು ಬಂದಿದೆ. ಆರೋಗ್ಯ ಕೇಂದ್ರದಲ್ಲಿ ಸರಿಯಾದ ಮೇಲ್ವಿಚಾರಣೆ ನಡೆಸಿಲ್ಲ..

kodigehalli-health-doctor-suspension
ಕೊಡಿಗೆಹಳ್ಳಿ ಆರೋಗ್ಯ ವೈದ್ಯಾಧಿಕಾರಿ ಅಮಾನತು
author img

By

Published : Apr 11, 2021, 5:15 PM IST

ಬೆಂಗಳೂರು : ಕೊಡಿಗೆಹಳ್ಳಿ ಗಂಟಲು ದ್ರವ ಪರೀಕ್ಷೆ ಕಿಟ್​​ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ್​​ ಅವರನ್ನು ಅಮಾನತು ಮಾಡಲಾಗಿದೆ.

kodigehalli health doctor suspension
ಅಮಾನತು ಆದೇಶ ಪ್ರತಿ

ಕಾರಣ ಕೇಳಿ ಏಪ್ರಿಲ್ 8ರಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗೆ ನೋಟಿಸ್​ ನೀಡಲಾಗಿತ್ತು. ಆದ್ರೆ, ಪ್ರೇಮಾನಂದ್​​ ಹೇಳಿಕೆ ಸಮಂಜಸವಾಗಿಲ್ಲ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸುಗಿರುವುದು ಕಂಡು ಬಂದಿದೆ. ಆರೋಗ್ಯ ಕೇಂದ್ರದಲ್ಲಿ ಸರಿಯಾದ ಮೇಲ್ವಿಚಾರಣೆ ನಡೆಸದೇ ಇರುವ ಕಾರಣ ಅವರನ್ನು ಅಮಾನತು ಮಾಡಲಾಗಿದ್ದು, ತನಿಖೆ‌ ಮುಂದುವರೆದಿದೆ.

ಓದಿ-ನಕಲಿ ಸ್ವಾಬ್ ಟೆಸ್ಟಿಂಗ್.. ವೈರಲ್​ ವಿಡಿಯೋ ಆಧರಿಸಿ ಸ್ವಾಬ್ ಕಲೆಕ್ಟರ್‌ಗಳ ಅಮಾನತು

ಘಟನೆ ಹಿನ್ನೆಲೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ವಲಯ ಕೊಡಿಗೆಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಪ್ರಿಲ್ 7ರಂದು ಸ್ವ್ಯಾಬ್ ಕಲೆಕ್ಟರ್​ಗಳಾದ ನಾಗರಾಜು ಹಾಗೂ ಹೇಮಂತ್ ಎಂಬುವರು ಸ್ವ್ಯಾಬ್ ಟೆಸ್ಟ್ ಕಿಟ್​ಗಳ ದುರುಪಯೋಗ ಮಾಡಿದ್ದ ಹಿನ್ನೆಲೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.