ETV Bharat / city

25 ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಬಿಬಿಎಂಪಿ ಪ್ಲಾನ್: ಪೌರಕಾರ್ಮಿಕರಿಗೂ ಪ್ರತ್ಯೇಕ ವ್ಯವಸ್ಥೆ

ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸಾರ್ವಜನಿಕ ಶೌಚಾಲಯಗಳ ಶುಚಿತ್ವದ ನಿರ್ವಹಣೆ ಅತ್ಯಗತ್ಯವಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಶೌಚಾಲಯದ ನಿರ್ಮಾಣಗಳಾಗಿದ್ದರೂ, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.

public toilets situation
ಶೌಚಾಲಯಗಳ ಅವ್ಯವಸ್ಥೆ
author img

By

Published : Aug 5, 2020, 4:09 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಬಹುತೇಕ ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿವೆ. ಕೆಲವೊಮ್ಮೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಜನರ ಬೇಜವಾಬ್ದಾರಿಯೂ ಕೂಡಾ ಕಂಡುಬರುತ್ತದೆ.

ಯಶವಂತಪುರ ಸರ್ಕಲ್ ಬಳಿ ಶೌಚಾಲಯ ನಿರ್ಮಾಣವಾಗಿ ಬಳಕೆಯಲ್ಲಿತ್ತು. ಆದರೆ ಕಳೆದ ಒಂದೆರಡು ತಿಂಗಳುಗಳಿಂದ ಇದಕ್ಕೆ ಬೀಗ ಜಡಿಯಲಾಗಿದೆ. ಜಲಮಂಡಳಿ ಕೆಲಸ ನಡೆಯುತ್ತಿರುವುದರಿಂದ ಚರಂಡಿ ಬ್ಲಾಕ್ ಆಗಿದ್ದು, ಸರಿಪಡಿಸಲು ಲಾಕ್​ಡೌನ್ ಹಿನ್ನೆಲೆ ಕೆಲಸಗಾರರು ಸಿಗುತ್ತಿಲ್ಲ ಎಂದು ನಿರ್ವಹಣಾ ಸಂಸ್ಥೆ ಸಬೂಬು ಹೇಳುತ್ತಿದೆ.

ಶೌಚಾಲಯಗಳ ಅವ್ಯವಸ್ಥೆ

ಮಲ್ಲೇಶ್ವರಂನ ಬಳಿ ಶೌಚಾಲಯ ಇದ್ರೂ ಕೂಡಾ ಶೌಚಾಲಯದ ಹೊರಭಾಗದ ರಸ್ತೆಯನ್ನು ಸಂಪೂರ್ಣವಾಗಿ ಮೂತ್ರ ವಿಸರ್ಜನೆ, ಕಸ ಎಸೆಯಲು ಸುತ್ತಮುತ್ತಲಿನ ಜನ ದುರುಪಯೋಗಪಡಿಸಿದ್ದಾರೆ. ಇದರಿಂದ ಸೊಳ್ಳೆ ಸಮಸ್ಯೆ ಹೆಚ್ಚಾಗಿದೆ. ಪ್ರತೀ ದಿನ ಕಸವನ್ನು ತೆರವು ಮಾಡುವುದಿಲ್ಲ ಎಂದು ಇಲ್ಲಿ ಕೆಲಸ ಮಾಡುವ ಭರತ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ವಾರ್ಡ್ 64ರಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಿ ಕೆಲ ತಿಂಗಳಾಗಿದ್ದರೂ ಇನ್ನೂ ಕಾರ್ಯಾರಂಭವಾಗಿಲ್ಲ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದ್ದು, ಇತ್ತ ಶೌಚಾಲಯಕ್ಕೂ ಬೀಗ ಹಾಕಿ ಜಡಿಯಲಾಗಿದೆ. ನಗರದ ಹಲವಾರು ಕಡೆ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪಾಳು ಬಿದ್ದಿರುವ ಸ್ಥಿತಿಯಲ್ಲಿ ಶೌಚಾಲಯವಿದೆ. ಸ್ವಚ್ಛ ಸಿಟಿ ಫೌಂಡೇಶನ್ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳಿಗೆ ಹಾಗೂ ಪೌರ ಕಾರ್ಮಿಕರ ಅವಲಂಬಿತರಿಗೆ ನಿರ್ವಹಣೆಗಾಗಿ ಶೌಚಾಲಯಗಳನ್ನು ಐದು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ.

ಎಷ್ಟೋ ಕಡೆ ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಇ-ಟಾಯ್ಲೆಟ್​​​ಗಳ ನಿರ್ಮಾಣ ಮಾಡಲಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 1300 ಸಾರ್ವಜನಿಕ ಶೌಚಾಲಯಗಳು ಇವೆ ಎನ್ನಲಾಗುತ್ತಿದ್ದು, ಸರಿಯಾದ ಅಂಕಿ-ಅಂಶ, ದುರಸ್ತಿಗೆ ಬಂದಿರುವ ಶೌಚಾಲಯಗಳ ಸರಿಯಾದ ಮಾಹಿತಿ ಅಧಿಕಾರಿಗಳ ಬಳಿಯೇ ಇಲ್ಲ. ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಮುಂದು ನಗರದಲ್ಲಿ ಈಗಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಬಹುತೇಕ ಶೌಚಾಲಯಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ.

ಈ ನಡುವೆಯೇ 25 ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಶುಭ್ರ ಬೆಂಗಳೂರು ಹಾಗೂ ಸ್ವಚ್ಛ ಬೆಂಗಳೂರು ಯೋಜನೆಗಳ ಅಡಿ, 75 ಕೋಟಿ ರೂಪಾಯಿ ಅನುದಾನವಿದ್ದು, ಇದನ್ನು ಬಳಸಿಕೊಂಡು ಮೊದಲ ಹಂತದಲ್ಲಿ ನಗರದ ವಿವಿಧೆಡೆ 25 ಶೌಚಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದೆ.

ಈಗಿರುವ ಶೌಚಾಲಯ ಕಟ್ಟಡಗಳನ್ನು ಕೆಡವಿ ಪ್ರಿಕಾಸ್ಟ್ ಸ್ಟ್ರಕ್ಚರ್ (ರೆಡಿಮೇಡ್ ಗೋಡೆಗಳು) ಮೂಲಕ ತ್ವರಿತವಾಗಿ ನಿರ್ಮಾಣ ಮಾಡಿ, ಎಸಿ ಸೌಲಭ್ಯ ಹಾಗೂ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ರೇಸ್ ಕೋರ್ಸ್, ಹಾಗೂ ಬಸವೇಶ್ವರನಗರದಲ್ಲಿ ಪ್ರಾಯೋಗಿಕವಾಗಿ ಈ ಶೌಚಾಲಯಗಳನ್ನು ಇದು ನಿರ್ಮಾಣ ಮಾಡಲಾಗುತ್ತದೆ. ಸರ್ಕಾರಕ್ಕೆ ಅನುಮತಿಗಾಗಿ ಕಳಿಸಲಾಗಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಅಭಿಯಂತರ ವಿಶ್ವನಾಥ್ ತಿಳಿಸಿದ್ದಾರೆ.

ಪೌರಕಾರ್ಮಿಕರಿಗೆ ಕೆಲಸದ ವೇಳೆ ಶುಚಿಗೊಳ್ಳಲು, ಬಟ್ಟೆ ಬದಲಾಯಿಸಲು ಹಾಗೂ ಶೌಚಾಲಯ ಬಳಸಲು ಮಸ್ಟರಿಂಗ್ ಸೆಂಟರ್​​ಗಳ ನಿರ್ಮಾಣಕ್ಕೆ ಬಿಬಿಎಂಪಿ ಮೂರ್ನಾಲ್ಕು ವರ್ಷಗಳಿಂದ ಅನುದಾನ ಮೀಸಲಿಟ್ಟಿದ್ದರೂ, ಈ ಬಾರಿ ಕೇವಲ ಎರಡು ಮಸ್ಟರಿಂಗ್ ಸೆಂಟರ್ ನಿರ್ಮಾಣ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ಆಗಾಗ ಪೌರಕಾರ್ಮಿಕರು ತಮ್ಮ ಸ್ವಚ್ಛತೆಯನ್ನೂ ಕಾಪಾಡಬೇಕಾಗುತ್ತದೆ.

ಹೀಗಾಗಿ 550 ಮಸ್ಟರಿಂಗ್ ಸೆಂಟರ್ ನಿರ್ಮಾಣದ ಯೋಜನೆಯಿದ್ದು, ಪಾಲಿಕೆಗೆ ಜಾಗದ ಕೊರತೆ ಇರುವುದರಿಂದ ಆರಂಭದ ಹಂತದಲ್ಲಿ 250 ಮಸ್ಟರಿಂಗ್ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ. ಬಾಕ್ಸ್ ರೀತಿಯ ಮಾದರಿಯಲ್ಲಿ ನಿರ್ಮಾಣ ಮಾಡುವುದರಿಂದ ಇವುಗಳ ಸ್ಥಳಾಂತರವೂ ಸಾಧ್ಯ ಇರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.