ETV Bharat / city

'ರಾಜ್ಯದಲ್ಲಿ ಉಂಟಾಗಿರುವ ಧಾರ್ಮಿಕ ವಿಭಜನೆ ಪರಿಹರಿಸಿ': ಸಿಎಂಗೆ ಬಯೋಕಾನ್‌ ಮುಖ್ಯಸ್ಥೆ ಒತ್ತಾಯ

author img

By

Published : Mar 31, 2022, 4:53 PM IST

ಐಟಿ-ಬಿಟಿ ಕ್ಷೇತ್ರಗಳಲ್ಲಿ ಕೋಮವಾದ ಬೆಳೆದರೆ ನಮ್ಮ ಜಾಗತಿಕ ನಾಯಕತ್ವಕ್ಕೆ ಹೊಡೆತ ನೀಡಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಿರಣ್ ಮುಜುಂದಾರ್ ಶಾ, ದಯವಿಟ್ಟು ಕೋಮುಗಳ ನಡುವಿನ ವಿಭಜನೆ ತಡೆಯಿರಿ ಎಂದು ಸಿಎಂ ಬಳಿ ಒತ್ತಾಯ ಮಾಡಿದ್ದಾರೆ.

Kiran Mazumdar Shaw tweet on communal divide

ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ ಎಂದು ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಂಜುದಾರ್ ಶಾ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೋಮುವಾದ ಬೆಳೆದರೆ ದೇಶದ ಜಾಗತಿಕ ನಾಯಕತ್ವ ನಾಶವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

  • Karnataka has always forged inclusive economic development and we must not allow such communal exclusion- If ITBT became communal it would destroy our global leadership. @BSBommai please resolve this growing religious divide🙏 https://t.co/0PINcbUtwG

    — Kiran Mazumdar-Shaw (@kiranshaw) March 30, 2022 " class="align-text-top noRightClick twitterSection" data=" ">

ಕರ್ನಾಟಕ ಯಾವಾಗಲೂ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದರಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿ-ಬಿಟಿಯಲ್ಲಿ ಕೋಮವಾದ ಪ್ರವೇಶಿಸಿದರೆ ಜಾಗತಿಕ ನಾಯಕತ್ವ ನಾಶವಾಗುತ್ತದೆ. ದಯವಿಟ್ಟು ಈ ಬೆಳವಣಿಗೆ ಕುರಿತು ಗಮನ ಹರಿಸಿ, ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್​, ಸಮವಸ್ತ್ರ ವಿವಾದದ ಬೆನ್ನಲ್ಲೇ ಇದೀಗ ಹಲಾಲ್​ ಪ್ರಕರಣ ಉದ್ಭವವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ದೇಗುಲಗಳ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನಿಡಲು ಅವಕಾಶ ನಿರಾಕರಣೆ ಮಾಡಲಾಗ್ತಿದೆ. ಈ ಪ್ರಕರಣ ಈಗಾಗಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: 'ಮದ್ಯಪಾನ ಮಾಡುವವರು ಮಹಾಪಾಪಿಗಳು, ಅವರು ಭಾರತೀಯರಲ್ಲ': ಬಿಹಾರ ಸಿಎಂ

ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಂಜುದಾರ್ ಶಾ ಟ್ವೀಟ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಈ ಸಮಸ್ಯೆ ಬಗ್ಗೆ ಚರ್ಚ ಮಾಡಿ ಬಗೆಹರಿಸಲು ಸಾಧ್ಯವಿದೆ. ಕರ್ನಾಟಕ ಶಾಂತಿ, ಪ್ರಗತಿಗೆ ಹೆಸರುವಾಸಿ. ಇಲ್ಲಿ ಎಲ್ಲರೂ ಸಂಯಮದಿಂದ ಜೀವನ ನಡೆಸಬೇಕು. ರಾಜ್ಯದಲ್ಲಿನ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.