ದೇವನಹಳ್ಳಿ (ಬೆಂಗಳೂರು ಗ್ರಾಮಂತರ): ನಾಳೆ ಕರ್ನಾಟಕ ಬಂದ್ ಹಿನ್ನೆಲೆ, ಪ್ರಯಾಣಿಕರು ಸಾರ್ವಜನಿಕ ಸಾರಿಗೆ ನಂಬಿ ತೊಂದರೆಗೊಳಗಾಗಬೇಡಿ ಎಂದು ಕೆಐಎಬಿ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಪ್ರಯಾಣಿಕರಲ್ಲಿ ವಿನಂತಿ ಮಾಡಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಕೆಐಎಬಿ, ಪ್ರಯಾಣಿಕರು ಸಾರ್ವಜನಿಕ ಸಾರಿಗೆ ನಂಬಿ ತೊಂದರೆಗೊಳಗಾಗಬೇಡಿ. ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಬನ್ನಿ ಮತ್ತು ಇಲ್ಲಿಂದ ಹೊರಡಲು ಸಹ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಳ್ಳಿ ಎಂದಿದೆ.
ಓದಿ: ಮಲಗಿದ್ದ ಮಗು ಮರೆತು ರೈಲಿನಿಂದ ಇಳಿದುಹೋದ ಪೋಷಕರು.. ಇವರ ಮರೆಗುಳಿತನಕ್ಕಿಷ್ಟು..
ವಿದೇಶ ಮತ್ತು ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರು ತಮ್ಮ ಸ್ಥಳಕ್ಕೆ ಹೋಗಲು ಕೆಎಸ್ಆರ್ಟಿಸಿ ಬಸ್, ಬಿಎಂಟಿಸಿ ಮತ್ತು ಟ್ಯಾಕ್ಸಿ ಸೇವೆ ಬಳಸುತ್ತಿದ್ದರು. ಆದರೆ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳ ಒಕ್ಕೂಟ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಹೀಗಾಗಿ ಬಸ್ಗಳ ಸಂಚಾರ ಅನುಮಾನವಿದೆ. ಏರ್ಪೋರ್ಟ್ ಟ್ಯಾಕ್ಸಿ, ಓಲಾ, ಊಬರ್ ಸೇವೆ ಲಭ್ಯ ಇರುವುದಿಲ್ಲ ಇದರಿಂದ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಳ್ಳಿ ಎಂದು ಮನವಿ ಮಾಡಿದೆ.