ಬೆಂಗಳೂರು: ಚಿಂತಕರು ಸಾಹಿತಿಗಳಿಂದ ಸಿಎಂಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿರುವುದಕ್ಕೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಕೆ.ಜಿ.ಬೋಪಯ್ಯ ತಮ್ಮ ಅಸಮಾಧಾನ ಹೊರಹಾಕಿದರು.
ಓದಿ: ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ನೀತಿ ರೂಪಿಸದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!
ಹಿಜಾಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಚಾರವಾಗಿ ಚಿಂತಕರು, ಸಾಹಿತಿಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿರುವುದನ್ನು ವಿರೋಧಿಸಿ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡಿದ ಕೆ.ಜಿ ಬೋಪಯ್ಯ, ಸಮಾಜದಲ್ಲಿ ಅಶಾಂತಿ ವಾತಾವರಣ ಅವರೇ ಉಂಟು ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶ ಲೆಕ್ಕಕ್ಕೆ ಇಲ್ಲ ಅಂದರೆ ಹೇಗೆ. ಹೈಕೋರ್ಟ್ ಆದೇಶದ ವಿರುದ್ಧ ಪತ್ರ ಕೊಡುತ್ತಾರೆ. ಇವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಓದಿ: ಇಂದು ಉದ್ಯಮಿ ನಾಯಕ ಕೊಲೆ ಪ್ರಕರಣದ ತೀರ್ಪು ಪ್ರಕಟ: ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ನಿರ್ಧಾರ!
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಸಿಎಂಗೆ ಯಾರೋ ಮನವಿಗಳನ್ನು ಕೊಡ್ತಿರ್ತಾರೆ. ಮನವಿ ಕೊಡೋಕ್ಕೆ ಅವಕಾಶ ಇದೆ. ಇದು ಬೇರೆ ವಿಷಯ, ನಂತರ ನೋಡೋಣ ಎಂದರು.