ETV Bharat / city

ಆಗಸ್ಟ್ ತಿಂಗಳಲ್ಲಿ 37,319 ಮೆಟ್ರಿಕ್ ಟನ್ ಸರಕು ಸಾಗಣೆ : ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣ - 37, 319 ಮೆಟ್ರಿಕ್ ಟನ್‌ ಸರಕು ಸಾಗಣೆ ಮಾಡಿದ ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್ಪೋರ್ಟ್​

ಬೆಂಗಳೂರು ವಿಮಾನ ನಿಲ್ದಾಣವೂ ಭಾರತದಲ್ಲೇ ಹೆಚ್ಚು ಚಟುವಟಿಕೆ ಹೊಂದಿರುವ ನಿಲ್ದಾಣಗಳ ಪೈಕಿ 3ನೇ ಸ್ಥಾನದಲ್ಲಿದೆ. ಭಾರತೀಯ ಕಸ್ಟಮ್ಸ್​​ನ ಸಹಕಾರದೊಂದಿಗೆ ಕೃಷಿ ಮತ್ತು ಸಂಸ್ಕರಣೆಯ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಈ ಮೈಲಿಗಲ್ಲು ಸಾಧಿಸಲು ಕೇಂದ್ರ ಸರ್ಕಾರ ನೆರವಾಗಿದೆ..

Bengaluru airport record
ಸರಕು ಸಾಗಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದಾಖಲೆ
author img

By

Published : Sep 6, 2021, 10:10 PM IST

ಬೆಂಗಳೂರು(ದೇವನಹಳ್ಳಿ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್​​ನಲ್ಲಿ 37, 319 ಮೆಟ್ರಿಕ್ ಟನ್‌ನಷ್ಟು ಸರಕು ಸಾಗಣೆ ಮಾಡುವ ಮೂಲಕ ಇದೇ ಮೊದಲ ಬಾರಿ ಅತಿಹೆಚ್ಚು ಸಾಗಣೆ ಮಾಡಿದ ದಾಖಲೆ ನಿರ್ಮಿಸಿದೆ.

ಬೆಂಗಳೂರು ವಿಮಾನ ನಿಲ್ದಾಣ ಪ್ರಾರಂಭದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ರಫ್ತು ಹಾಗೂ ಆಮದು ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ಸಾಗಣೆ ಪ್ರಮಾಣವನ್ನು ಹೆಚ್ಚಿಸಿರುವುದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಮ್ಮೆ ತಂದಿದೆ. ಜೊತೆಗೆ 24,304 ಮೆಟ್ರಿಕ್ ಟನ್‌ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕು ಸಾಗಣೆ ಮಾಡಲಾಗಿದೆ.

ಇದರಲ್ಲಿ 15,224 ಮೆ.ಟ ರಫ್ತು ಪ್ರಮಾಣ ಇರುವುದು ಗಮನಾರ್ಹ ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ 14 ವಿಶೇಷ ಸರಕು ಸಾಗಣೆದಾರರು ವಿಮಾನ ನಿಲ್ದಾಣದಿಂದ ರಫ್ತು ಮತ್ತು ಆಮದು ಮಾಡಲಾಗುತ್ತಿದೆ. ನಿತ್ಯ ಸುಮಾರು 33 ದೈನಂದಿನ ಸರಕು ಸಾಗಣೆ ವಿಮಾನಗಳನ್ನು ಕಾಣಲಾಗುತ್ತಿದೆ.

8.5 ಲಕ್ಷ ಮೆಟ್ರಿಕ್​ ಟನ್​ ಸರಕು ಸಾಗಣೆ ಗುರಿ : ಬೆಂಗಳೂರು ವಿಮಾನ ನಿಲ್ದಾಣದ ಸರಕು ಸಾಗಣೆ ಸಾಮರ್ಥ್ಯ ವಾರ್ಷಿಕ 7.15 ಲಕ್ಷ ಮೆಟ್ರಿಕ್ ಟನ್‌ನಷ್ಟು ಹೊಂದಿದೆ. ಈ ಪ್ರಮಾಣವನ್ನು 8.5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣವೂ ಭಾರತದಲ್ಲೇ ಹೆಚ್ಚು ಚಟುವಟಿಕೆ ಹೊಂದಿರುವ ನಿಲ್ದಾಣಗಳ ಪೈಕಿ 3ನೇ ಸ್ಥಾನದಲ್ಲಿದೆ. ಭಾರತೀಯ ಕಸ್ಟಮ್ಸ್​​ನ ಸಹಕಾರದೊಂದಿಗೆ ಕೃಷಿ ಮತ್ತು ಸಂಸ್ಕರಣೆಯ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಈ ಮೈಲಿಗಲ್ಲು ಸಾಧಿಸಲು ಕೇಂದ್ರ ಸರ್ಕಾರ ನೆರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.