ETV Bharat / city

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಗುದ್ದಾಟ​: ಕೊನೆಗೂ ನಲ್ಪಾಡ್​ಗೆ ಒಲಿದ ಪಟ್ಟ - ಮೊಹಮ್ಮದ್ ನಲ್ಪಾಡ್ ಹ್ಯಾರೀಸ್

ಮುಂದಿನ ಒಂದು ವರ್ಷ ರಕ್ಷಾ ರಾಮಯ್ಯ ಹಾಗೂ ನಂತರದ ಎರಡು ವರ್ಷ ಅವಧಿಗೆ ಮೊಹಮ್ಮದ್ ನಲ್ಪಾಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅಧಿಕೃತವಾಗಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ನಲಪಾಡ್
ನಲಪಾಡ್
author img

By

Published : Jul 6, 2021, 2:18 AM IST

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಪಕ್ಷದ ಹೈಕಮಾಂಡ್ ತೆರೆ ಎಳೆದಿದೆ. ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಅತಿ ಹೆಚ್ಚು ಮತ ಗಳಿಸಿ ಅನರ್ಹತೆಗೆ ಒಳಗಾಗಿದ್ದ ಮೊಹಮ್ಮದ್ ನಲ್ಪಾಡ್ ನಡುವೆ ಉಂಟಾದ ತಿಕ್ಕಾಟಕ್ಕೆ ಪಕ್ಷದ ಹೈಕಮಾಂಡ್ ಪರಿಹಾರ ಕಂಡುಕೊಂಡಿದೆ.

ಆದೇಶ ಪ್ರತಿ
ಆದೇಶ ಪ್ರತಿ

ಮುಂದಿನ ಒಂದು ವರ್ಷ ರಕ್ಷಾ ರಾಮಯ್ಯ ಹಾಗೂ ನಂತರದ ಎರಡು ವರ್ಷ ಅವಧಿಗೆ ಮೊಹಮ್ಮದ್ ನಲ್ಪಾಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಈ ಸಂಬಂಧ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅಧಿಕೃತವಾಗಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ 2022ರ ಜನವರಿ 31ರವರೆಗೆ ರಕ್ಷಾ ರಾಮಯ್ಯ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ನಂತರದ ಎರಡು ವರ್ಷದ ಅವಧಿಗೆ ನಲ್ಪಾಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ​

ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಆನ್ಲೈನ್ ಮೂಲಕ ನಡೆದಿತ್ತು. 2020ರ ಕೊನೆಯಲ್ಲಿ ನಡೆದ ಚುನಾವಣೆ ಫಲಿತಾಂಶ 2021ರ ಫೆಬ್ರವರಿಯಲ್ಲಿ ಪ್ರಕಟವಾಗಿತ್ತು. ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರಿಗೆ 56,271 ಮತಗಳು ಬಂದರೆ, ಹೆಚ್.ಎಸ್. ಮಂಜುನಾಥ್​ಗೆ 18,137 ಮತಗಳು ಬಂದಿದ್ದವು. 64,203 ಅತಿ ಹೆಚ್ಚು ಮತಗಳನ್ನು ಪಡೆದಿದ್ದ ಮೊಹಮ್ಮದ್ ನಲಪಾಡ್ ಅವರನ್ನು ಚುನಾವಣಾ ಮಂಡಳಿಯು ಅನರ್ಹಗೊಳಿಸಿತ್ತು. ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ ಗೆಲುವನ್ನು ಅಮಾನತುಗೊಳಿಸಲಾಗಿತ್ತು. ಎರಡನೇ ಅತಿ ಹೆಚ್ಚು ಮತ ಪಡೆದ ರಕ್ಷಾ ರಾಮಯ್ಯ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಿತರಾಗಿದ್ದರು.

ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮ್ಮ ವಿವರವನ್ನು ನಲ್ಪಾಡ್ ಸಲ್ಲಿಸಿದ್ದರು. ಸದ್ಯ ನಲ್ಪಾಡ್ ಮನವಿಗೆ ಸ್ಪಂದಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.